#ಚOಪಕ ಸರಸ್ಸು ಕೆಳದಿ ರಾಣಿಯ ದುರಂತ ಪ್ರೇಮಕಥೆಯ ಸ್ಮಾರಕ ಜೋಗಿ ಜನಪದ ಸಂಗೀತ ಕಲಾವಿದ ನಾಗರಾಜ ತೋOಬ್ರಿ ಧ್ವನಿಯಲ್ಲಿ ಮತ್ತು ಕಿನ್ನರಿಯ ನಾದದೊಂದಿಗೆ #
ಆನoದಪುರದ ಚಂಪಕ ಸರಸ್ಸು ಎಂಬ ಸುಂದರ ಕೊಳ, ಸ್ವಾಗತಿಸುವ ಕಲಾತ್ಮಕ ಕಲ್ಲಿನ ಜೋಡು ಆನೆ, ಕೊಳದ ಮದ್ಯದ ದೇವಾಲಯ, ಸುತ್ತುವರಿದ ಪಗಾರ, ದೇವರ ಕಣ್ಣು ಚಲನ ಚಿತ್ರದಲ್ಲಿ ಪ್ರಖ್ಯಾತ ಚಲನ ಚಿತ್ರಗೀತೆ "ಓ ಇನಿಯಾ ನೀ ಎಲ್ಲಿರುವೆ" ಹಾಡು 1970 ರ ದಶಕದಲ್ಲಿ ಚಿತ್ರಿಕರಣ ಆದ ಸ್ಥಳ ಈಗ ಪಾಳು ಬೀಳುವುದನ್ನ ಸ್ಥಳಿಯ ಕ್ರೀಯಾ ಶೀಲ ಯುವ ಪಡೆ ಪ್ರತಿ ವಷ೯ ಶ್ರಮದಾನದಿಂದ ಪ್ರವಾಸಿಗರ ವೀಕ್ಷಣೆಗೆ, ಸ್ಥಳಿಯರ ಈಜು ತರಬೇತಿಗೆ ವ್ಯವಸ್ಥೆಗೆ ಅನುವು ಮಾಡಿ ಸಾವ೯ಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ.
ಚಂಪಕ ಸರಸ್ಸು ಅಂದರೇನು? ಚಂಪಕ ಯಾರು ಎನ್ನುವ ಚಚೆ೯ ಆಗಾಗ್ಗೆ ಮುನ್ನಲೆಗೆ ಬಂದು ಮರೆತು ಹೋಗುತ್ತಿದೆ.
ಆನಂದಪುರದ ಹಿಂದುಳಿದ ಜಾತಿಯ ಸುಂದರ ತರುಣಿ ಚOಪಕಳು ಪ್ರತಿ ದಿನ ಮುಂಜಾನೆ ರಾಜ ವೆಂಕಟಪ್ಪ ನಾಯಕ ಸಾಗಿ ಹೋಗುವ ರಾಜ ಮಾಗ೯ದ ಇತಿ ಹಾಸ ಪ್ರಸಿದ್ಧ ಗಂಗಾ ಮಠದ ಎದುರಿನ ಮನೆಯವಳು, ರಾಜರ ಸ್ವಾಗತಕ್ಕೆ ದಿನಕ್ಕೆ ಒಂದೊಂದು ರೀತಿ ಸುಂದರ ರಂಗೋಲಿ ಬಿಡಿಸಿ ಮರೆಯಲ್ಲಿ ವೀಕ್ಷಿಸುತ್ತಿದ್ದಳು ರಾಜ ವೆಂಕಟಪ್ಪ ನಾಯಕ ಗಂಗಾಮಠದ ಗಂಗಾಮಾತೆಗೆ ಬಲಕ್ಕೆ ತಿರುಗಿ ಕುದುರೆ ಮೇಲಿಂದ ತಲೆಬಾಗಿ ವ೦ದಿಸುವುದು ನಂತರ ಎಡಕ್ಕೆ ತಿರುಗಿ ಸುಂದರ ರಂಗೋಲಿ ವೀಕ್ಷಿಸುವುದು ಪದ್ದತಿ ಆಗಿ ಇದು ಪ್ರೇಮ ಕಥೆಗೆ ಕಾರಣವಾಗಿ ರಾಜವೆಂಕಟಪ್ಪ ನಾಯಕರು ಚಂಪಕಳನ್ನ ವರಸಿ ವಿವಾಹವಾಗಿ ಆನಂದಪುರದ ಕೋಟೆಯ ಅರಮನೆಯಲ್ಲಿ ಇರಿಸುತ್ತಾರೆ ಚಂಪಕಳ ವಿವಾಹ ಕಾರಣದಿಂದ ಯಡೇಹಳ್ಳಿ ಕೋಟೆ ಎಂದಿದ್ದ ಹೆಸರನ್ನ ಆನಂದಪುರ ಎಂದು ಕರೆಯುತ್ತಾರೆ.
ಪಟ್ಟದ ರಾಣಿ ಭದ್ರಮ್ಮಅನ್ಯ ಜಾತಿಯ ಚಂಪಕಳನ್ನ ಸಹಿಸದೆ ಅನ್ನಹಾರ ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಇದರಿ೦ದ ರಾಜ ವೆಂಕಟಪ್ಪ ನಾಯಕರಿಗೆ ಪ್ರಜೆಗಳಲ್ಲಿ ಅಪಕೀತಿ೯ ಉಂಟಾಗುತ್ತದೆ ಇದರಿ೦ದ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರಸಿ ಸೇವಿಸಿ ಜೀವ ಹಾನಿ ಮಾಡಿಕೊಳ್ಳುವ ದುರಂತ ಪ್ರೇಮ ಕಥೆ ಜನ ಮಾನಸದಿಂದ ಅಳಿಸಿ ಹೋಗಿದೆ.
ಚಂಪಕಳ ಸ್ಮರಣಾಥ೯ ರಾಜ ವೆಂಕಟಪ್ಪ ನಾಯಕರು ಆನಂದಪುರದ ಸಮೀಪದಲ್ಲಿ ನಿಮಿ೯ಸಿರುವ ಸ್ಮಾರಕವೇ ಚಂಪಕ ಸರಸ್ಸು.
ಸರಸ್ಸು ಅಂದರೆ ಕೊಳ, ಕೆಳದಿ ರಾಜ್ಯ ದೀಘ೯ವಾಗಿ ಆಳಿದವರು ರಾಜ ವೆಂಕಟಪ್ಪ ನಾಯಕ, ಸಾಗರ ಪಟ್ಟಣ ನಿಮಿ೯ಸಿದವರು, ಕೋಟೆ ಕೊತ್ತಲ ದೇವಾಲಯಗಳು ಇವರ ಕಾಲದಲ್ಲಿ ನಿಮಾ೯ಣ ಆಯಿತು ಆದರೆ ಕೆಳದಿ ರಾಜರಲ್ಲಿ ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ಮಾತ್ರ ನಮಗೆ ಹೆಚ್ಚು ಪರಿಚಯಿಸುವ ಸಾಹಿತ್ಯಗಳು ಬಂದು ಪ್ರಖ್ಯಾತ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ತೆರೆಮರೆಗೆ ಸರಿಸಿದ್ದೇವೆ.
ಆನಂದಪುರ ಸುತ್ತಮುತ್ತಲಿನ ಲಾವಣಿಗಳಲ್ಲಿ ಇದ್ದ ಚಂಪಕ ವೃತ್ತಾ೦ತ ಬೇಸಾಯದ ನಾಟಿಗಳಲ್ಲಿ ಹಾಡಿ ಕಣ್ಣಿರಾ ಗುತ್ತಿದ್ದರು ಹೆಣ್ಣು ಮಕ್ಕಳು ಈಗ ಅದು ಮರೆತು ಹೋಗಿದೆ ಅದನ್ನ ಸ್ವಲ್ಪ ಸ್ವಲ್ಪ ಪತ್ತೆ ಮಾಡಿ ನಾನು ಬರೆದಿಟ್ಟಿದ್ದು ಖ್ಯಾತ ಜೋಗಿ ಪದಗಾಯಕ, ಕಲಾವಿದ ಉತ್ಸಾಹಿ ತರುಣ ತೊ೦ಬ್ರಿ ನಾಗರಾಜರಿಗೆ ನೀಡಿದ್ದೆ ಅದನ್ನ ಅವರು ಹಾಡಿ ವಿಡಿಯೋ ಕಳಿಸಿದ್ದಾರೆ, ಉಳಿದ ಅದ೯ ಭಾಗ ನನ್ನಲ್ಲಿ ಇದೆ ಅದನ್ನು ಸೇರಿಸಿ ಹಾಡಿದರೆ ಚಂಪಕ ಚರಿತೆ ಆದೀತು.
ರಾಣಿ ಚOಪಕಳ ಮತ್ತು ರಾಜ ವೆಂಕಟಪ್ಪ ನಾಯಕರ ದುರOತ ಪ್ರೇಮಕಥೆಯ ಕಾದಂಬರಿ ನಾನು ಬರೆದು ಕೆಲವಷ೯ ಆಯಿತು ಆದರೆ ಅದನ್ನ ಅಚ್ಚಿಸಲು ಆಗಿಲ್ಲ ಇತ್ತೀಚಿಗೆ ಊರ ಯುವಕರು ಚಂಪಕ ಸರಸ್ಸು ಬಗ್ಗೆ ಆಸಕ್ತಿವಹಿಸುತ್ತಿರುವುದು, ಕಲಾವಿದ ನಾಗರಾಜ್ ಹಾಡುತ್ತಿರುವುದ ನೋಡಿ ರಾಣಿ ಚಂಪಕ ಕಾದಂಬರಿ ಹೊರ ತರುವ ಹುಮ್ಮಸ್ಸು ಬಂದಿದೆ.
ನನ್ನ ಒಂದು ರೆಸ್ಟೋರೆಂಟ್ ಗೆ 2013ರಲ್ಲಿ "ಚಂಪಕ ಪ್ಯಾರಾಡೈಸ್ " ಎಂದು ನಾಮಕರಣ ಚಂಪಕಳ ನೆನಪಿಗಾಗಿ ಮಾಡಿದ್ದು ಈ ಸಂದಭ೯ದಲ್ಲಿ ನೆನಪಾಯಿತು.
ದೀಘ೯ ಲೇಖನ ಆಯಿತು ಕಾರಣ ಇದು ನಮ್ಮ ಊರು ಆನಂದಪುರದ ಇತಿಹಾಸ ಆದ್ದರಿಂದ.
https://m.facebook.com/story.php?story_fbid=2833900943310726&id=100000725455473&sfnsn=scwspmo&d=n&vh=i
ಆದಶ೯ ಹುOಚ ಇವರು ಬರೆದ ಮಾಹಿತಿ ಕೂಡ ಇಲ್ಲಿದೆ
ಅಲ್ಲಿ ಸ್ಥಾಪಿತವಾಗಿರುವ ಆನೆಗಳಲ್ಲಿ ಒಂದು ಗಂಡಾನೆಯಾಗಿದ್ದು ವೆಂಕಟಪ್ಪ ನಾಯಕ ಮತ್ತು ಇನ್ನೊಂದು ಹೆಣ್ಣಾಗಿದ್ದು ಚಂಪಕ ಅರಸಿಯ ನೆನಪಿಗೆ ವೆಂಕಟಪ್ಪ ನಾಯಕ ನಿಲ್ಲಿಸಿ ಸತ್ತ ನಂತರ ಜನಮಾನಸದಲ್ಲಿ ಅವರ ನೆನಪು ಉಳಿಯಲಿ ಎಂದು ಹಾರೈಸಿದ್ದನಂತೇ.....
ಮೊಘಲ್ ದೊರೆಗಳು ಗುಲಾಬಿಯನ್ನು ಪ್ರೀತಿಯ ಸಂಕೇತ ವನ್ನಾಗಿ ಮಾಡುವ ಮೊದಲು ಕಮಲ ಪ್ರೀತಿಯ ಸಂಕೇತವಾಗಿತ್ತು...ಅರಳಿದ ಕಮಲ ಗಂಡಾನೆ ಬಳಿ ಇದ್ದು ಮೊಗ್ಗು ಕಮಲ ಹೆಣ್ಣಾನೆ ಬಳಿ ಇದೆ.....ಗಂಡನ್ನು ಅರಳಿದ ಕಮಲಕ್ಕೂ ಹೆಣ್ಣನ್ನು ಮೊಗ್ಗಾಗಿಯೂ ತೋರಿಸಿದ್ದಾರೆ.....ಗಂಡಾನೆಯ ಕಾಲುಗಳ ದಷ್ಟಪುಷ್ಟವಾಗಿದೆ, ಹೆಣ್ಣಾನೆಯ ಕಾಲು ಸ್ವಲ್ಪ ತಳುಕು ಬಳಕು ಹೊಂದಿದೆ, ಕಣ್ಣುಗಳ ಅಲಂಕಾರದಲ್ಲೂ ವ್ಯತ್ಯಾಸವಿದೆ, ಕಿವಿಗಳು ಬೇರೆ ಬೇರ ಅಕಾರದಲ್ಲಿದೆ....ಗಂಡಾನೆಯ ಹಣೆಯ ಮೇಲಿನ ಕೆತ್ತನೆಯು ಅರೇಬಿಯನ್ ಶೈಲಿಯ ಗಿಳಿ ಎಂದು ಕನಫ್ಯೂಸ್ ಆಗಬಹುದು ಆದರೆ ನಿಜವಾಗಲೂ ನೋಡಿದರೆ ಅದು ಗಂಡ ಬೇರುಂಡದ ಮಿರರ್ ಅಥವಾ ಫ್ಲೀಪ್ ಇಮೇಜ್ ಆಗಿದೆ.....
ಹೆಣ್ಣು ಮತ್ತು ಗಂಡಾನೆಯ ಹಣೆಯ ಅಲಂಕಾರವೂ ಬೇರೆ ಬೇರೆ ಆಗಿದೆ
ಇನ್ನು ಚಂಪಕ ಅರಸಿ ಅಥವಾ ಸರಸಿ ಅತಿಲೋಕ ಸುಂದರಿಯಾಗಿದ್ದು ಬಾಂಗಾರದ ನೀಳ ರಾಶಿ ಹೊಂದಿದ್ದಳು, ಅವಳ ಕೂದಲು, ಬಟ್ಟೆ ಇನ್ನೂ ಎಲ್ಲಿಯೋ ಅನಂತಪುರದ ಯಾರದೋ ಮನೆಯಲ್ಲಿದೆ ಎಂಬ ಗುಮಾನಿಯಿದೆ...
ದೊಡ್ಡ ರಾಣಿಯ ಸನ್ಯಾಸತ್ವ,ಜನರ ಹೀಗೆಳಿಯುವಿಕೆ ಎದುರು ವೆಂಕಟಪ್ಪನ ಪ್ರೀತಿ ಕೆಲ ಕಾಲ ಕಾಪಾಡಿತ್ತಾದರೂ ಜನರ ದೂಷಣೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೋಟೆ ಅವಳೊಂದಿಗೆ ಕೊನೆಯಾಯಿತು...ಈಗ ಹಾಳು ಕೋಟೆಯ ಮಧ್ಯೆ ರೈಲ್ವೆ ಹಳಿ ಹೋಗಿದ್ದರಿಂದ ಎರಡು ಬತೇರಿಗಳು ಹಾಳಾಗಿದ್ದು ಈಗಲೂ ಕೊಟೆಯ ಒಳಗೊಂದು ಹೊರಗೊಂದು ಬತೇರಿ ಹಾಗೇ ಇದೆ...
ಕೋಟೆಯ ಒಳಗೊಂದು ದರ್ಬಾರ್ ಹಾಲ್ , ಅರಮನೆ, ಬಾವಿ, ಕೆಲಸದವರ ವಸತಿ ಇದ್ದ ಪ್ರಾಪರ್ ಮ್ಯಾಪ್ ಆಗ ಭಾರತಕ್ಕ ಬಂದಿದ್ದ ವಿದೇಶಿ ಪ್ರಯಾಣಿಕನೊಬ್ಬ ದಾಖಲಿಸಿದ್ದಾನೆ...ಈಗಿನ ಅನಂತಪುರ ಗದ್ದೆಗಳಿಂದಲೂ, ಎಡೆಹಳ್ಳಿ ಪ್ರಾಪರ್ ವ್ಯಾಪಾರಿ ಕೇಂದ್ರವಾಗಿತ್ತು, ಬತೇರಿಯಿಂದ ಮೂರು ರಸ್ತೆಗಳ ಕಾಣುತ್ತಿದ್ದು , ಬತೆರಿಯಿಂದ ಹಾರಿಸಿದ ಕಲ್ಲುಗುಂಡು ಕೆರೆ ದಾಟಿ ರಸ್ತೆಗೆ ಬೀಳುತ್ತಂತೇ.....
ಈಗಲೂ ಕೊಟೆಯ ಒಳಗೆ ಜನವಸತಿ ಪ್ರದೇಶದಲ್ಲಿ ವೆಜಿಟೇಷನ್ ಬೆರೆಯದೇ ಆಗಿದೆ....ಯಾರಾದರೂ ಒಳಹೊಗಿದ್ದರೆ ಗಮನಿಸಬಹುದು.....
Comments
Post a Comment