#ಶಿವಮೊಗ್ಗದ ಪ್ರಖ್ಯಾತ ಶ್ಯಾಮ್ ಟ್ರೇಡರ್ಸ್ ಕುಟುಂಬ ನಮ್ಮ ಇವತ್ತಿನ ಅತಿಥಿ#
ಶಿವಮೊಗ್ಗದ ನೆಹರೂ ರೋಡಿನ ಎರಡನೇ ತಿರುವಿನ ಮೊದಲ ಕಾನ೯ರ್ ಆಂಗಡಿ ಶಾಮ್ ಟ್ರೇಡರ್ಸ್ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಹೋಟೆಲ್, ಶಾಮಿಯಾನ, ಮದುವೆ ಮOಟಪದವರಿಗೆ, ದೇವಸ್ಥಾನ ಮತ್ತು ವಿದ್ಯಾಥಿ೯ ನಿಲಯ ನಡೆಸುವವರಿಗೆ ತುಂಬಾ ಚಿರಪರಿಚಿತ ಅಂಗಡಿ.
ಸಣ್ಣ ಚಮಚದಿಂದ ಅತಿ ದೊಡ್ಡ ಕ್ವಿOಟಾಲ್ ಆಕ್ಕಿ ಬೇಯಿಸುವ ಪಾತ್ರೆ ಮತ್ತು ದಕ್ಷಿಣ ಬಾರತೀಯ ಅಡುಗೆಯಿ೦ದ ಉತ್ತರ ಭಾರತೀಯ ಅಡುಗೆ ತಯಾರಿಗೆ ಬೇಕಾದ ಎಲ್ಲಾ ಅಡುಗೆ ಉಪಕರಣಗಳ ಪಾತ್ರೆಗಳ ಮಾರಾಟಗಾರರು ಇವರು.
ಈಗ ನೆಹರೂ ರಸ್ತೆಯಿಂದ 2ನೇ ತಿರುವಿನಲ್ಲಿ ಸ್ವ೦ತ ಜಾಗದಲ್ಲಿ ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಶಾಂ ಟ್ರೇಡರ್ಸ್ ಕಾಯ೯ ನಿವ೯ಹಿಸುತ್ತಿದೆ.
ಮಾಲಿಕರಾದ ಬಾಲರಾಜ್ ದಂಪತಿಗಳು ತಮ್ಮ ಮಗ ಮಗಳೂ ಸೇರಿ ತಮ್ಮ ಅನೇಕ ದಶಕದ ಖಾಯಂ ಸಿಬ್ಬOದಿಗಳ ಜೊತೆ ಸೇರಿ ಅನೇಕ ದಶಕಗಳಿ೦ದ ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಇಲ್ಲಿ ಇವರೊಡನೆ ಸಹಕರಿಸುವ ನಿವೃತ್ತ ಶಿಕ್ಷಣ ಇಲಾಖೆಯ ನೌಕರರಾದ ರಾಜಣ್ಣ ಇವರ ಸುOದರ ಕೈಬರಹ ನನಗೆ ಯಾವತ್ತೂ ಆಕಷ೯ಣನೀಯ.
ಇವತ್ತು ತಮ್ಮ ಪುತ್ರಿಯ ವಿವಾಹ ಆಮOತ್ರಣ ನೀಡಲು ಕುಟುಂಬ ಸಮೇತ ಆಗಮಿಸಿದ್ದರು.
ಇವರ ಮೂಲ ಅಂಗಡಿಯಲ್ಲಿ ನೀಲಿ background ನಲ್ಲಿ ಬಿಳಿ ಅಕ್ಷರದ ಶಾ೦ ಟ್ರೇಡರ್ಸ್ ಎಂಬ ಸುಂದರ ಬೋಡ್೯ ನಿಜಕ್ಕೂ ಆಕಷ೯ಕ ಆಗಿತ್ತು ಇಡಿ ಶಿವಮೊಗ್ಗದ ನೆಹರೂ ರಸ್ತೆಯಲ್ಲಿ ಹಾದು ಹೋಗುವವರು ತಿರುಗಿ ನೋಡುವಂತ ನೆನಪಿನಲ್ಲಿ ಉಳಿಯುವಂತ ಬೋಡ್೯ ಆಗಿತ್ತು.
Comments
Post a Comment