Blog number 883. ತೀರ್ಥಹಳ್ಳಿಯ ಲಕ್ಷ್ಮೀಶ್ ವಾರಪತ್ರಿಕೆ ಸಂಪಾದಕರಾದ ಲಕ್ಷ್ಮೀಶ್ ರ ಬರವಣಿಗೆಗೆ ನಾನು ಅವರ ಅಭಿಮಾನಿ, ಮೊನ್ನೆ ನನ್ನ ಕಛೇರಿಗೆ ಅವರ ಆಗಮನ.
#ತೀರ್ಥಹಳ್ಳಿಯ_ಲಕ್ಷ್ಮೀಶ್_ವಾರಪತ್ರಿಕೆ #ಸಂಪಾದಕರಾದ_ಲಕ್ಷ್ಮೀಶ್_ನಮ್ಮಲ್ಲಿಗೆ #ನಾನು_ಇವರ_ಬರವಣಿಗೆಯ_ಅಭಿಮಾನಿ #ಬೆಂಗಳೂರಿಂದ_ಇವರು_ಪತ್ರಿಕೆ_ಮಾಡುತ್ತಿದ್ದರೆ_ಇನ್ನೊಬ್ಬ_ರವಿಬೆಳೆಗೆರೆ_ಆಗುತ್ತಿದ್ದರು. ತೀರ್ಥಹಳ್ಳಿಯ ಪತ್ರಿಕೆಗಳ ಒಡನಾಟ ನನ್ನ ಬಾಲ್ಯದಿಂದಲೇ ಪ್ರಾರಂಭ ಆಯಿತು, ನಮ್ಮ ತಂದೆಯ ಗೆಳೆಯರಾದ A.S.ಗಣಪತಿ ( ನಮ್ಮ ಊರಿಂದ 10 ಕಿ.ಮಿ.ದೂರದ ಹೊಸನಗರ ತಾಲೂಕಿನ ಆಲಗೇರಿ ಮಂಡ್ರಿಯವರು ಅವರ ಇನಿಷಿಯಲ್ ನ A ಆಲಗೇರಿ ಮಂಡ್ರಿ ಇರಬಹುದಾ? ಗೊತ್ತಿಲ್ಲ) ಅವರ #ಛಲಗಾರ_ಪತ್ರಿಕೆ ನಮ್ಮ ಮನೆಗೆ ಪೋಸ್ಟ್ ನಲ್ಲಿ ಬರುತ್ತಿತ್ತು,ನಂತರ (ನನ್ನ ನೆನಪು1978 ರಿಂದ ಇರಬಹುದು) ನಮ್ಮ ಅಣ್ಣ ಛಲಗಾರ ಪತ್ರಿಕೆ ಏಜೆಂಟ್ ಕಂ ವರದಿಗಾರ, 7 ಅಥವ 8ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಕೆಲಸ ಬೆಳಿಗ್ಗೆ 9ಕ್ಕೆ ಬರುವ ಶಂಕರ್ ಬಸ್ಸಿನ ಡ್ರೈವರ್ ಹತ್ತಿರ ಪತ್ರಿಕೆ ಬಂಡಲ್ ತೆಗೆದುಕೊಂಡು ಬರುವುದು. ನನಗೆ ಹಾಯ್ ಬೆಂಗಳೂರು ರವಿ ಬೆಳೆಗೆರೆ ಬರಹದ ನಂತರ ಅಷ್ಟೇ ಇಷ್ಟವಾದ ಬರಹಗಳು ತೀರ್ಥಹಳ್ಳಿಯ ಲಕ್ಷ್ಮೀಶ್ ವಾರಪತ್ರಿಕೆಯ ಸಂಪಾದಕರಾದ ಲಕ್ಷ್ಮೀಶ್ ರವರದ್ದು. ಲಂಕೇಶರಂತೆ ಇವರದ್ದೇ ಸ್ವಂತ ಹೆಸರಿನ ವಾರಪತ್ರಿಕೆ ಇವರದ್ದು. ತೀರ್ಥಹಳ್ಳಿಯಲ್ಲಿ ಹಾಲಿ ಇರುವ ಪತ್ರಿಕೆಗಳು ಮತ್ತು ಪತ್ರಕರ್ತರು ತಾಲ್ಲೂಕಿನ ಪ್ರಸಕ್ತ ರಾಜಕಾರಣದ ಬಗ್ಗೆ ಸದಾ ತಾಜಾ ಸುದ್ದಿಗಳು ನೀಡುತ್ತಿದೆ, ತಾಲ...