4128..ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ. ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ. 196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು.
. ಕೆಳದಿ_ವಂಶಸ್ಥ_ಬೂದಿಬಸಪ್ಪ_23_ಆಗಸ್ಟ್_1830ರಲ್ಲಿ_ನಡೆಸಿದ್ದ_ರೈತ_ಸಮಾವೇಶ. ರಾಜ್ಯದ ಮೊದಲ ರೈತ ಸಮಾವೇಶ ನಡೆದದ್ದು ಹೊಸಂತೆಯಲ್ಲಿ. 196 ವರ್ಷಗಳ ಹಿಂದೆ ನಡೆದ ಬೂದಿ ಬಸಪ್ಟ ನಾಯಕರ ಈ ರೈತ ಹೋರಾಟ ನಡೆದ ಸಾಗರ ತಾಲೂಕಿನ ಕಾಗೋಡಿನಲ್ಲಿ 1950 ರಲ್ಲಿ ಕಾಗೋಡು ರೈತ ಹೋರಾಟವೂ ನಡೆಯಿತು. ಹೊಸಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯಲ್ಲಿದೆ. ಮೈಸೂರು ಅರಸರ ಜನವಿರೋದಿ ಭೂಕಂದಾಯ, ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ಬ್ಬಹತ್ ರೈತ ಸಮಾವೇಶ ನಡೆಯಿತು. ಏಪ್ರಿಲ್ 1830ರಲ್ಲಿ ಕೆಳದಿ ಬಿದನೂರು ಸಂಸ್ಥಾನದ ರಾಜನೆಂದು ಬೂದಿ ಬಸಪ್ಪ ನಾಯಕರು ಘೋಷಣೆ ಮಾಡುತ್ತಾರೆ. ಇತಿಹಾಸದಲ್ಲಿ ಬೂದಿಬಸಪ್ಪನಾಯಕರನ್ನು ದರೋಡೆಕೋರ ಎಂದು ಬರೆದು ಇತಿಹಾಸಕ್ಕೆ ಅಪಚಾರ ಮಾಡಿದ್ದಾರೆ. ಬೂದಿ ಬಸಪ್ಪ ನಾಯಕ ಯಾರು?... ಅಂತ ಇತಿಹಾಸದ ದಾಖಲೆಗಳಲ್ಲಿ ಹುಡುಕಿದರೆ ಆತ ಶಿಕ್ಷೆಗೆ ಒಳಗಾದ ದರೋಡೆಕೋರ, ಕೆಳದಿ ಅರಸರ ಹಿತೈಷಿ ಜಂಗಮರ ಹತ್ತಿರದ ರಾಜ ಮುದ್ರೆ ಉಂಗುರ ಕದ್ದು , ತಾನು ಕೆಳದಿ ವಂಶಸ್ಥರವನು ಎಂದು ಹೇಳಿಕೊಂಡವ ಎಂದೆಲ್ಲ ಬರೆದಿದ್ದಾರೆ. ಆದರೆ ಜನಪದದಲ್ಲಿ ಬೂದಿ ಬಸಪ್ಪನಾಯಕರು ನಿಜ ಹೋರಾಟಗಾರರು, ಅವರು ಮೈಸೂರು ಕೃಷ್ಣರಾಜ ಒಡೆಯರ್ III ರ ವಿಪರೀತ ಭೂಕಂದಾಯ ಮತ್ತು ಸುಂಕದ ವಿರುದ್ಧ ನಡೆಸಿದ ರೈತ ಹೋರಾಟ ಕೆಳದಿಬಿದನೂರು ಪ್ರಾಂತ್ಯ ಮಾತ್ರವಲ್ಲ ದೂರದ ಬೆಂಗಳೂರು, ಚಿತ...