ಸಾಗರ_ಹೊಸನಗರ_ವಿಧಾನಸಭಾ_ಕ್ಷೇತ್ರಕ್ಕೆ_ಸಿಗದ_ಮಂತ್ರಿ_ಸ್ಥಾನ. ಭದ್ರಾವತಿಯ ಹಿರಿಯ ಶಾಸಕ ಸಂಗಮೇಶ್ವರರಿಗೂ ಮಂತ್ರಿ ಸ್ಥಾನ ಇಲ್ಲ, ಸೊರಬ ಕ್ಷೇತ್ರದ ಮಧು ಬಂಗಾರಪ್ಪರಿಗೆ ಮಂತ್ರಿ ಸ್ಥಾನ ದೊರಕಿರುವುದು ಜಿಲ್ಲೆಗೆ ನೀಡಿದ ಗೌರವ ಆಗಿದೆ. ಬಹು ನಿರೀಕ್ಷೆಯಲಿದ್ದ ಶಾಸಕ ಗೋಪಾಲ ಕೃಷ್ಣ ಬೇಳೂರು ಅವರ ಹೆಸರು ಇವತ್ತು ಪ್ರಮಾಣ ವಚನ ಸ್ವೀಕಾರ ಮಾಡುವವರ ಪಟ್ಟಿಯಲ್ಲಿ ಇಲ್ಲದೆ ಇರುವುದು ಬೇಸರ ತಂದಿದೆ. ಯಾವುದೇ ಪಕ್ಷದ ಸರ್ಕಾರ ಇರಲಿ ನಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಇರಲಿ ಎಂದು ನಾನು ಕೂಡ ಆಸೆ ಪಟ್ಟಿದ್ದೆ. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ, ದೀರ್ಘಕಾಲದ ರಾಜಕಾರಣದಲ್ಲಿದ್ದ ಸ್ಥಳೀಯ ಶಾಸಕರಿಗೆ ಒಂದು ಅಧಿಕಾರ ಸಿಗಲಿ ಎನ್ನುವುದು. ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮನಸ್ಸು ಮಾಡ ಬೇಕಿತ್ತು ಶಿವಮೊಗ್ಗ ಜಿಲ್ಲೆಗೆ ಇಬ್ಬರು ಮಂತ್ರಿ ಮಾಡಬಹುದಿತ್ತು. ಹಿಂದೆ ಜನತಾ ದಳ ಸರ್ಕಾರ ಇದ್ದಾಗ ಜೆ. ಹೆಚ್.ಪಟೇಲರು ಮತ್ತು ಬಸವಣ್ಯಪ್ಪ ಇಬ್ಬರು ಮಂತ್ರಿಗಳಿದ್ದರು. ಬಿಜೆಪಿ ಸರ್ಕಾರ ಇದ್ದಾಗ ಯಡೂರಪ್ಪ, ಈಶ್ವರಪ್ಪ ಮತ್ತು ಹರತಾಳು ಹಾಲಪ್ಪ ಮೂವರು ಮಂತ್ರಿಗಳಿದ್ದರು. ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿಗಾಗಿ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಮ್ಮ ಕ್ಷೇತ್ರದ ಶಾಸಕ #ಗೋಪಾಲಕೃಷ್ಣ_ಬೇಳೂರು ಮತ್ತು ಭದ್ರಾವತಿ ಶಾಸಕ #ಸಂಗಮೇಶ...