Skip to main content

Posts

Showing posts with the label Traditional Gujarati and Marathi regional special sweet Srikhand.

Blog number 1713. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಶ್ರೀಖಂಡ್ ಇದನ್ನು ಚಪಾತಿ ರೋಲ್ ಆಗಿ, ಬ್ರೆಡ್ ಸ್ಲೈಸ್ ಜೊತೆ ಮತ್ತು ಐಸ್ ಕ್ರಿಂ ನಂತೆ ಸ್ವಾದಿಸಬಹುದು.

#ಶ್ರೀಖಂಡ_ಅಮ್ರಖಂಡ_ಸ್ವಾದಿಷ್ಟ_ಸಿಹಿ_ಖಾದ್ಯ #ನೀರು_ತೆಗೆದ_ಮೊಸರು_ಸಕ್ಕರೆ_ಏಲಕ್ಕಿ. #ಚಪಾತಿಗೆ_ಬ್ರೆಡ್_ಅಕ್ಕಿರೊಟ್ಟಿಗೆ_ಸವರಿ_ರೋಲ್_ಮಾಡಿ_ತಿಂದು_ನೋಡಿ. #ಗುಜರಾತಿ_ಮರಾಠಿಗರ_ಪೆವರಿಟ್. #ಮಾವಿನ_ಹಣ್ಣಿನ_ಸೀಸನದಲ್ಲಿ_ಮಾವಿನ_ಹಣ್ಣು_ಸೇರಿಸಿದರೆ_ಅಮ್ರಖಂಡ #ಅಮುಲ್_ಸಂಸ್ಥೆ_ಇದನ್ನು_ವಿವಿದ_ಸ್ವಾದದಲ್ಲಿ_ಮಾರುಕಟ್ಟಿಯಲ್ಲಿ_ಮಾರುತ್ತಿದೆ. #ಸುಲಭವಾಗಿ_ಮನೆಯಲ್ಲಿ_ತಯಾರಿಸಿ_ಬಡಿಸುವ_ದಿಡೀರ್_ಸಿಹಿ_ಖಾದ್ಯ. https://youtu.be/E8ykhRAsVXM   ಪೂನಾದಿಂದ ಇನ್ನೋವ ಕಾರ್ ಕ್ಲಬ್ ನಿಂದ ಬರುತ್ತಿದ್ದ ಗೆಳೆಯರು ತಮ್ಮ ಡ್ರೈವಿಂಗ್ ನಲ್ಲಿ ಹಸಿವಾದಾಗ ತಿನ್ನಲು ಪೂನಾದ ಪ್ರಸಿದ್ಧ ಹೋಟೆಲ್ ನಿಂದ ಶ್ರೀಖಂಡ್ ಸವರಿದ ಚಪಾತಿ ರೋಲ್ ಗಳನ್ನು ತರುತ್ತಿದ್ದರು ಆ ಮೂಲಕ ನನಗೆ ಶ್ರೀಖಂಡ್ ರುಚಿ ಗೊತ್ತಾಗಿದ್ದು.    ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನ ಹಣ್ಣು ಸೇರಿಸಿದರೆ ಅಮ್ರಖಂಡ್ ಆಗುತ್ತದೆ ಅಷ್ಟೇ ಅಲ್ಲ ಇದಕ್ಕೆ ಕೇಸರಿ ಸೇರಿಸುವ , ಪಿಸ್ತಾ ಸೇರಿಸುವ, ಬಾದಾಮಿ ಸೇರಿಸುವ ವಿವಿದ ಸ್ವಾದದ ಶ್ರೀಖಂಡ್ ಮಾಡಬಹುದು.   ಇದು ಗುಜರಾತಿ ಮತ್ತು ಮರಾಠಿ ಪ್ರದೇಶದ ಜನರ ಪೆವರಿಟ್ ಸಿಹಿ ಆಗಿದೆ.    ಅಮುಲ್ ಸಂಸ್ಥೆ ಇದನ್ನು ವಿವಿದ ಸ್ವಾದದಲ್ಲಿ ಅತ್ಯಾಕರ್ಷ ಪ್ಯಾಕಿಂಗ್ ನಲ್ಲಿ ದೊಡ್ಡ ಪ್ರಮಾಣದ ಮಾರುಕಟ್ಟೆ ಪಡೆದಿದೆ.    ಶಿವಮೊಗ್ಗ ಜಿಲ್ಲೆಯ ಆನಂದಪುರಂನಲ್ಲಿ ಇರುವ ನಮ್ಮ ಮಲ್ಲಿಕಾ ವೆಜ್...