ದೇಶಿ ಹೈ ಮಾಸ್ಟ್ ದೀಪ ಅಳವಡಿಸಿರುವ ಯಡೇಹಳ್ಳಿ ಗ್ರಾಮ ಪಂಚಾಯತಿಯ ಪ್ರಯೋಗಶೀಲತೆ ಎಲ್ಲಾ ಗ್ರಾಮ ಪಂಚಾಯಿತಿಗಳು ಅಳವಡಿಸಿ ಕೊಳ್ಳಬಹುದು.
#ಎಲ್ಲಾ_ಗ್ರಾಮ_ಪಂಚಾಯತಿಗಳು_ಗಮನಿಸಲಿ #ಸ್ವದೇಶಿ_ಹೈಮಾಸ್ಟ್ #ಸ್ಥಳಿಯ_ಗ್ರಾಮಪಂಚಾಯತ್_ಯೋಚಿಸಬೇಕಾಗಿದೆ. #ನಮ್ಮೂರ_ನಾಲ್ಕು_ರಸ್ತೆ_ಸೇರುವ_ಸ್ಥಳದಲ್ಲಿ_ಅಳವಡಿಕೆ. #ಸ್ಥಳಿಯ_ಗ್ರಾಮಪಂಚಾಯತನ_ಉತ್ತಮ_ಕಾರ್ಯ. #ಈ_ಅಂಬೇಡ್ಕರ್_ವೃತ್ತ_ನಿರ್ಮಾಣ_1997ರಲ್ಲಿ #ಆಗ_ಅಧ್ಯಕ್ಷರಾಗಿದ್ದ_ಗಣಪತಿ_ಈಗ_ಪುನಃ_ಅಧ್ಯಕ್ಷರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿ ಕೇಂದ್ರ ಆನಂದಪುರಂಗೆ ಶಿವಮೊಗ್ಗ - ತೀರ್ಥಹಳ್ಳಿ - ಹೊಸನಗರ ಮತ್ತು ಶಿಕಾರಿಪುರದಿಂದ ಸಂಪರ್ಕ ರಸ್ತೆಗಳಿದೆ. ಶಿವಮೊಗ್ಗ - ಹೊನ್ನಾವರ ಈಗ ರಾಷ್ಟ್ರೀಯ ಹೆದ್ದಾರಿ 206 ಆಗಿದೆ. ಇದೇ ರೀತಿ ಹಾವೇರಿ ಬೈಂದೂರು ರಾಷ್ಟ್ರೀಯ ಹೆದ್ದಾರಿ ಆಗಿ ಶಿಕಾರಿಪುರ ಹೊಸನಗರ ಸಂಪರ್ಕದ ರಾ.ಹೆ. ಆನಂದಪುರಂನಲ್ಲಿ ಹಾದು ಹೋಗಿರುವ ಶಿವಮೊಗ್ಗ ಹೊನ್ನಾವರ ರಾ.ಹೆ.ಗೆ ಆನಂದಪುರಂ ಸಮೀಪದ ಯಡೇಹಳ್ಳಿ ವೃತ್ತದಲ್ಲಿ ಸೇರುತ್ತದೆ ಅಷ್ಟೆ ಅಲ್ಲ ಈ ನಾಲ್ಕು ರಸ್ತೆ ಮದ್ಯ ತೀರ್ಥಹಳ್ಳಿಯಿಂದ ಬರುವ ರಾಜ್ಯ ಹೆದ್ದಾರಿಯು ಸೇರುತ್ತದೆ. 10- ಡಿಸೆಂಬರ್ -1997ರಲ್ಲಿ ನಮ್ಮ ಯಡೇಹಳ್ಳಿಯ ವೃತ್ತ ನಿರ್ಮಿಸಿ ಕನ್ನಡ ದ್ವಜ ಸ್ಥಂಭದಲ್ಲಿ ನಿರಂತರ ಕನ್ನಡ ದ್ವಜ ಹಾರುವಂತೆ ಮಾಡಿ, ಈ ವೃತ್ತಕ್ಕೆ ಸಂವಿದಾನ ಶಿಲ್ಪಿ ಡಾ.ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಲು ಮುಖ್ಯಸ್ಥರಾಗಿದ್ದವರು ಆಗಿನ ಗ್ರಾಮ ಪಂಚಾಯತನ ಅಧ್ಯಕ್ಷರಾಗಿದ್ದವರು ಕುಂಬಾರ ಸಮಾಜದ ಶ್ರಮಜೀವಿ #ಇ...