ಕರ್ನಾಟಕದಲ್ಲಿ_ಖಾತೆ_ಕಾನು ಅದರ_ವಿಸ್ತೀರ್ಣ_ಎಷ್ಟು?...
ಅದರ_ಸಂರಕ್ಷಣೆ_ಹೇಗಿದೆ? ...
#ಪಶ್ಚಿಮ_ಘಟ್ಟ_ಸಂರಕ್ಷಣಾ_ಕಾರ್ಯಪಡೆಯಂತ ಸಮಿತಿಗಳು ಈ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರ ಸಹಕಾರ ಪಡೆದು ಕಾಡು ಸಂರಕ್ಷಣೆ ಮಾಡ ಬಾರದೇಕೆ?...
#ಶಿವಮೊಗ್ಗ_ಜಿಲ್ಲೆಯಲ್ಲಿ ಈ ರೀತಿಯ ಹತ್ತು ಸಾವಿರ ಎಕರೆಗಿಂತ ಹೆಚ್ಚಿನ ದಟ್ಟ ಕಾಡು ಇರುವ ಖಾತೆ ಕಾನುಗಳು ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ಆಗುತ್ತಲೇ ಇದೆ.
#ಕಸ್ತೂರಿರಂಗನ್ ವರದಿ ಜಾರಿ ಆದರೆ ಮಾತ್ರ ಪಶ್ಚಿಮ ಘಟ್ಟದ ಕಾಡು ಉಳಿದೀತು ಎನ್ನುವ ಮೊದಲು ಈ ಬಗ್ಗೆ ಒಮ್ಮೆ ದೃಷ್ಟಿ ಹಾಕಿ...
ಶಿವಮೊಗ್ಗ ಜಿಲ್ಲೆಯ ಸುಮಾರು ಹತ್ತು ಸಾವಿರ ಎಕರೆಗೂ ಹೆಚ್ಚಿನ ದಟ್ಟ ಕಾಡು ಅರಣ್ಯ ಇಲಾಖೆಗೆ ಸೇರಿದೆ ಮತ್ತು ಇಲಾಖಾ ಕಡತದಲ್ಲಿ ಅದು ಸುರಕ್ಷಿತವಾಗಿದೆ ಆದರೆ ನೀವು ಸ್ಥಳ ಪರಿಶೀಲನೆ ಮಾಡಿದರೆ ಅಲ್ಲಿ ಈ ಅರಣ್ಯಗಳಲ್ಲಿ ಒತ್ತುವರಿ ಮತ್ತು ಅಕ್ರಮ ಮರಕಡಿತಲೆ ನಿರಂತರವಾಗಿ ನಡೆಯುತ್ತಲೇ ಇದೆ.
ಪಶ್ಚಿಮ ಘಟ್ಟಗಳ ಮಲೆನಾಡು ಭಾಗದಲ್ಲಿ ವಿಶೇಷವಾಗಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಮುಂತಾದ ಕಡೆ ಕಂದಾಯ ಮತ್ತು ಅರಣ್ಯ ಇಲಾಖೆಗಳ ಗೊಂದಲದಿಂದ ಖಾಸಗಿಯವರ ಹೆಸರಿನಲ್ಲಿರುವ ಅಥವಾ ಖಾಸಗಿ ಹಿಡುವಳಿ ರೂಪದಲ್ಲಿ ದಾಖಲಾಗಿರುವ ಕಾನು ಅರಣ್ಯ ಭೂಮಿಗಳು ಸರಿಯಾಗಿ ಸಂರಕ್ಷಣೆ ಮಾಡದೆ ಒತ್ತುವರಿ ಮತ್ತು ಅಕ್ರಮ ಮರ ಕಡಿತಲೆ ನಿರಂತರವಾಗಿ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಅಂದಾಜು 10 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶವು 'ಖಾತೆ ಕಾನು', 'ಹಿಡುವಳಿ ಕಾನು' ಅಥವಾ 'ಕಾಫಿ ಕಾನು' ಹೆಸರಿನಲ್ಲಿದೆ ಎಂದು ಅಂದಾಜಿಸಲಾಗಿದೆ.
ಸಾಗರ,ಸೊರಬ ಮತ್ತು ಹೊಸನಗರ ಮುಂತಾದ ಭಾಗಗಳಲ್ಲಿ ಸಾವಿರಾರು ಎಕರೆ ಇಂತಹ ಕಾನು ಭೂಮಿಗಳಿದ್ದು ಇವುಗಳನ್ನು ಸರ್ಕಾರಿ ಅರಣ್ಯವೆಂದು ಘೋಷಿಸಲು ನಿರಂತರ ಹೋರಾಟಗಳು ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.
ಕಾನು ಭೂಮಿ ಯಾವುದೇ ಕಾರಣಕ್ಕೂ ಖಾಸಗಿಯವರ ಸಂಪೂರ್ಣ ಮಾಲೀಕತ್ವಕ್ಕೆ ಸಿಗುವುದಿಲ್ಲ ಮತ್ತು ಅಲ್ಲಿನ ನೈಸರ್ಗಿಕ ಮರಗಳನ್ನು ಕತ್ತರಿಸುವಂತಿಲ್ಲ ಎಂಬ ಕಾನೂನು ಕಡತದಲ್ಲಿದೆ.
ಬ್ರಿಟಿಷರ ಕಾಲದಲ್ಲಿ ಕಾನು ಭೂಮಿಯನ್ನು ರೈತರಿಗೆ ಹಸಿರೆಲೆ ಗೊಬ್ಬರ, ಸೊಪ್ಪು ಮತ್ತು ಸಾಂಪ್ರದಾಯಿಕ ಬಳಕೆಗೆ 'ಸವಲತ್ತು' ರೂಪದಲ್ಲಿ ನೀಡಲಾಗಿತ್ತೇ ಹೊರತು ಭೂಮಿಯ ಶಾಶ್ವತ ಮಾಲೀಕತ್ವವನ್ನಲ್ಲ ಎಂದು ಅರಣ್ಯ ಇಲಾಖೆ ಹೇಳುತ್ತದೆ.
ಸುಪ್ರೀಂ ಕೋರ್ಟ್‌ನ 1996ರ ಐತಿಹಾಸಿಕ #ಗೋದಾವರ್ಮನ್_ತಿರುಮಲಪಾಡ್ ತೀರ್ಪಿನ ಪ್ರಕಾರ ಅರಣ್ಯ ಲಕ್ಷಣಗಳನ್ನು ಹೊಂದಿರುವ ಯಾವುದೇ ಕಾನು, ಬಾಣೆ, ಬೇಟ ಅಥವಾ ಸೊಪ್ಪಿನಬೆಟ್ಟಗಳು 'ಡೀಮ್ಡ್ ಫಾರೆಸ್ಟ್' ವ್ಯಾಪ್ತಿಗೆ ಬರುತ್ತವೆ.
ಇವುಗಳನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲು, ಖಾತೆ ಬದಲಾಯಿಸಲು ಅಥವಾ ಕೃಷಿಯೇತರ ಉದ್ದೇಶಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ.
ಕಂದಾಯ ದಾಖಲೆಗಳಲ್ಲಿ (RTC) ತಪ್ಪು ನಮೂದುಗಳಿಂದ ಖಾಸಗಿ ಹೆಸರು ಬಂದಿದ್ದರೂ, ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಕಂದಾಯ ಕಾಯ್ದೆಯಡಿ ಅಂತಹ ಖಾತೆಗಳನ್ನು ರದ್ದುಪಡಿಸಿ ಸರ್ಕಾರಿ ಅರಣ್ಯವೆಂದು ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ (Karnataka Preservation of Trees Act, 1976) ಅನ್ವಯ ಕಾನು ಭೂಮಿಯಲ್ಲಿರುವ ಯಾವುದೇ ಮರವನ್ನು ಅರಣ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೆ ಕತ್ತರಿಸುವುದು ಶಿಕ್ಷಾರ್ಹ ಅಪರಾಧ.
#ಮರಗಳ_ಮಾಲೀಕತ್ವ_ಸರ್ಕಾರದ್ದು.
ಕಾನು ಪ್ರದೇಶದಲ್ಲಿ ತಾನಾಗಿಯೇ ಬೆಳೆದ ನೈಸರ್ಗಿಕ ವೃಕ್ಷಗಳು (ತೇಗ, ಬೀಟೆ, ನಂದಿ, ಹೊನ್ನೆ, ಮತ್ತಿ ಇತ್ಯಾದಿ) ಸಂಪೂರ್ಣವಾಗಿ ಅರಣ್ಯ ಇಲಾಖೆಯ ಆಸ್ತಿಯಾಗಿರುತ್ತವೆ.
ಅನುಮತಿಯಿಲ್ಲದೆ ಮರ ಕಡಿಯುವುದು ಜಾಮೀನು ರಹಿತ ಅಪರಾಧವಾಗಿದ್ದು, ಮರ ಕಡಿದರೆ ಅರಣ್ಯ ಇಲಾಖೆಯು ಅರಣ್ಯ ಅಪರಾಧ ಪ್ರಕರಣ (FOC) ದಾಖಲಿಸಿ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸುತ್ತದೆ.
ಕಾನು ಜಮೀನು ಕೇವಲ ಸಾಂಪ್ರದಾಯಿಕ ಸೊಪ್ಪಿನ ಮತ್ತು ಮೇವಿನ ಬಳಕೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಖಾಸಗಿ ವ್ಯಕ್ತಿಗೆ ಮರ ಕಡಿಯುವ ಅಥವಾ ಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಅಧಿಕಾರವಿಲ್ಲ.
ಹೀಗಿದ್ದರೂ ಪಶ್ಚಿಮ ಘಟ್ಟದ ಅನೇಕ ಈ ರೀತಿಯ ಕಾನುಗಳ ಅಂಚುಗಳು ನಿರಂತರ ಒತ್ತುವರಿ ಮತ್ತು ಮರಗಳ ಕಡಿತಲೆ ನಡೆಯುತ್ತಲೇ ಇದೆ.
ಈ ಬಗ್ಗೆ ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಇತ್ಯಾದಿ ಮಾಡುತ್ತಲೇ ಇದ್ದಾರೆ.
ಶಿವಮೊಗ್ಗ ಜಿಲ್ಲೆಯ ಈ ರೀತಿಯ ಖಾತೆ ಕಾನುಗಳನ್ನ #ಪಶ್ಚಿಮ_ಘಟ್ಟ_ಕಾರ್ಯಪಡೆಯಂತ ಸಮಿತಿಗಳು ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರ ಸಹಕಾರ ಪಡೆದು ಕಾಡು ಸಂರಕ್ಷಣೆ ಮಾಡ ಬಾರದೇಕೆ?.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋರಡಿ ರೇಂಜ್ ಪಾರೆಸ್ಟ್ ವ್ಯಾಪ್ತಿಯ ಇಂತಹ ಡೀಮ್ಡ್ ಫಾರೆಸ್ಟ್ ಪಟ್ಟಿ ಲಿಂಕ್ ಕಾಮೆಂಟ್ ಬಾಕ್ಸ್ ನಲ್ಲಿದೆ ನೋಡಿ.
#westernghattaskforce #malenadu #khatekanu
#kasturiranganreport #districtcommisioner #forestminister
Comments
Post a Comment