Blog number 1775. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಲಾತ್ಮಕ ಮನೆಯ ಡಾಕ್ಟರ್ ಅರ್ಜುನ್ ಹೆಗ್ಗಡೆ ನನ್ನ ಸಾಮಾಜಿಕ ಜಾಲತಾಣದ ಗೆಳೆಯ ರವೀಶ್ ನಿಟ್ಟೂರು ಇವರ ಪುತ್ರರು ಮಣಿಪಾಲ್ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡಿದವರು.
#ಶಿವಮೊಗ್ಗದ_ನಂಜಪ್ಪ_ಹೆಲ್ತ್_ಕೇರ್_ಡಾಕ್ಟರ್_ಅರ್ಜುನ_ಹೆಗಡೆ_ನಿಟ್ಟೂರು. #ಇವರು_ಗೆಳೆಯರಾದ_ನಿಟ್ಟೂರು_ರವೀಶರ_ಪುತ್ರ. #ಖ್ಯಾತ_ಚಲನಚಿತ್ರ_ನಿರ್ದೇಶಕ_ಗಿರೀಶ್_ಕಾಸರವಳ್ಳಿ_ನೀನಾಸಂ_ಕೆವಿ_ಸುಬ್ಬಣ್ಣರ_ಸಂಬಂದಿಗಳು. #ರವೀಶರ_110_ಎಕರೆ_ಭೂಮಿ_ಹಿರೇಬಾಸ್ಕರ_ಡ್ಯಾಂನಲ್ಲಿ_ಮುಳುಗಡೆ_ಆಯಿತು. #ಇವರ_ತಂದೆ_ನಿಟ್ಟೂರು_ಸುಬ್ಬರಾವ್_1947ರಲ್ಲಿ_ಈ_ಊರಲ್ಲಿ_ಕಟ್ಟಿಸಿದ_ಮನೆ_ಮಾಸ್ಟರ್_ಪೀಸ್_ಹೆರಿಟೇಜ್_ಹೋಮ್. #ಇದನ್ನು_ಬೈಂದೂರಿನ_ಮಂಜುನಾಥ_ಆಚಾರ್_ನಿರ್ಮಿಸಿದ್ದಂತೆ #ಈ_ಮನೆ_ಕನ್ನೇಶ್ವರರಾಮ_ಸೇರಿ_ಅನೇಕ_ಸಿನಿಮಾ_ಚಿತ್ರಿಕರಣ_ಆಗಿದೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995-2000) ಇವರ ಕ್ಷೇತ್ರದ ಯಡೂರಿನ ಜಿಲ್ಲಾ ಪಂಚಾಯತ್ ಸದಸ್ಯರಾದ ಹಿರಿಯಣ್ಣ ಗೌಡರ ಜೊತೆ #ನಿಟ್ಟೂರಿನ_ರವೀಶ್ ಮತ್ತು ಗೆಳಯರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಛೇರಿಗೆ ಬರುತ್ತಿದ್ದಾಗ ನೋಡಿ ಪರಿಚಯ ಈಗ ಸಾಮಾಜಿಕ ಜಾಲ ತಾಣದಲ್ಲಿ ನನ್ನ ಸಮಾನ ಮನಸ್ಕ ಗೆಳೆಯರಾಗಿದ್ದಾರೆ. ಇವರ ಪುತ್ರ ಡಾಕ್ಟರ್ ಅರ್ಜುನ್ ಹೆಗ್ಗಡೆ ಮಣಿಪಾಲಿನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿದ್ದಾಗ ಪೇಜಾವರ ಸ್ವಾಮೀಜಿಯವರಿಗೆ ಕೊನೆಯ ದಿನಗಳಲ್ಲಿ ಚಿಕಿತ್ಸೆ ನೀಡಿದವರು. ಈಗ ಅವರು ಶಿವಮೊಗ್ಗದ ಪ್ರಖ್ಯಾತ ನಂಜಪ್ಪ ಹೆಲ್ತ್ ಕೇರ್ ನಲ್ಲಿ ತಜ್ಞ ವೈದ್ಯರಾಗಿದ್ದಾರೆ ಇವರ ಪತ್ನಿ ಕೂಡ ವೈದ್ಯರು, ಕೆಲ ತಿಂಗಳ ಹಿಂದೆ ನಮ್ಮ ಮಲ್ಲಿಕಾ ವೆಜ್ ಗೆ ಬಂದು...