#ಮುಖ್ಯಮಂತ್ರಿ_ನಿಜಲಿಂಗಪ್ಪನವರು. ನಮ್ಮೂರ ಬ್ಯಾಂಕ್ ಶಾಖೆ ಉದ್ಘಾಟಿಸಿದ್ದರು. #ಆನಂದಪುರಂನ ಸ್ಟೇಟ್ ಬ್ಯಾಂಕ್ ಮೈಸೂರಿನ ಶಾಖೆ ಉದ್ಘಾಟನೆ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪರಿಂದ ನೆರವೇರಿತ್ತು. ದಿನಾಂಕ 2 - ಸೆಪ್ಟೆಂಬರ್ - 1965 ನೇ ಇಸವಿ ಗುರುವಾರ ಸಂಜೆ 5ಕ್ಕೆ ನಡೆದ ಈ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಗಿನ ವಿದಾನ ಪರಿಷತ್ ಸದಸ್ಯರು ಮತ್ತು ರಾಷ್ಟ್ರೀಯ ಅಭಿವೃದ್ದಿ ಸಮಿತಿ ಸದಸ್ಯರಾಗಿದ್ದ ಆನಂದಪುರಂ #ಎ_ಆರ್_ಬದರಿನಾರಾಯಣ ಅಯ್ಯಂಗಾರ್ ಮತ್ತು ಆಗಿನ ಸಾಗರ ತಾಲೂಕ್ ಬೋಡ್೯ ಅಧ್ಯಕ್ಷರಾಗಿದ್ದ ಶಿರವಂತೆಯ #ಹೆಚ್_ಎಲ್_ವೀರಭದ್ರಪ್ಪಗೌಡರು ಭಾಗವಹಿಸಿದ್ದರು. ಅವತ್ತೇ ಸಮೀಪದ ಹೊಸಗುಂದದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ #ಹೆಡತ್ರಿನಾಗರಾಜಗೌಡರ ತಂದೆ ಊರಿಗೆ ನಿರ್ಮಿಸಿಕೊಟ್ಟಿದ್ದ ಪ್ರಾಥಮಿಕ ಶಾಲೆ ಮತ್ತು ತೆರೆದಬಾವಿ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಉದ್ಘಾಟಿಸುತ್ತಾರೆ. ಆನಂದಪುರಂಗೆ ಬ್ಯಾಂಕ್ ತಂದ ಕಥೆಯೂ ರೋಚಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಜೂರು ಮಾಡಿಸಿ ಈಗಿನ ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ನಿರ್ಮಿಸಿದವರು ಬದರಿನಾರಾಯಣ ಅಯ್ಯಂಗಾರ್. ಇಡೀ ಆನಂದಪುರಂಗೆ ಇದು ಮೊದಲ RCC ಕಟ್ಟಡವಾಗಿತ್ತು. ಉದ್ಘಾಟನೆ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಆಗಿನ MLC ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕರು ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಕ...