#ಮುಖ್ಯಮಂತ್ರಿ_ನಿಜಲಿಂಗಪ್ಪನವರು.
ನಮ್ಮೂರ ಬ್ಯಾಂಕ್ ಶಾಖೆ ಉದ್ಘಾಟಿಸಿದ್ದರು.
#ಆನಂದಪುರಂನ ಸ್ಟೇಟ್ ಬ್ಯಾಂಕ್ ಮೈಸೂರಿನ ಶಾಖೆ ಉದ್ಘಾಟನೆ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪರಿಂದ ನೆರವೇರಿತ್ತು.
ದಿನಾಂಕ 2 - ಸೆಪ್ಟೆಂಬರ್ - 1965 ನೇ ಇಸವಿ ಗುರುವಾರ ಸಂಜೆ 5ಕ್ಕೆ ನಡೆದ ಈ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಆಗಿನ ವಿದಾನ ಪರಿಷತ್ ಸದಸ್ಯರು ಮತ್ತು ರಾಷ್ಟ್ರೀಯ ಅಭಿವೃದ್ದಿ ಸಮಿತಿ ಸದಸ್ಯರಾಗಿದ್ದ ಆನಂದಪುರಂ #ಎ_ಆರ್_ಬದರಿನಾರಾಯಣ ಅಯ್ಯಂಗಾರ್ ಮತ್ತು ಆಗಿನ ಸಾಗರ ತಾಲೂಕ್ ಬೋಡ್೯ ಅಧ್ಯಕ್ಷರಾಗಿದ್ದ ಶಿರವಂತೆಯ #ಹೆಚ್_ಎಲ್_ವೀರಭದ್ರಪ್ಪಗೌಡರು ಭಾಗವಹಿಸಿದ್ದರು.
ಅವತ್ತೇ ಸಮೀಪದ ಹೊಸಗುಂದದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಾದ #ಹೆಡತ್ರಿನಾಗರಾಜಗೌಡರ ತಂದೆ
ಊರಿಗೆ ನಿರ್ಮಿಸಿಕೊಟ್ಟಿದ್ದ ಪ್ರಾಥಮಿಕ ಶಾಲೆ ಮತ್ತು ತೆರೆದಬಾವಿ ಮುಖ್ಯ ಮಂತ್ರಿ ನಿಜಲಿಂಗಪ್ಪನವರು ಉದ್ಘಾಟಿಸುತ್ತಾರೆ.
ಆನಂದಪುರಂಗೆ ಬ್ಯಾಂಕ್ ತಂದ ಕಥೆಯೂ ರೋಚಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಜೂರು ಮಾಡಿಸಿ ಈಗಿನ ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ನಿರ್ಮಿಸಿದವರು ಬದರಿನಾರಾಯಣ ಅಯ್ಯಂಗಾರ್.
ಇಡೀ ಆನಂದಪುರಂಗೆ ಇದು ಮೊದಲ RCC ಕಟ್ಟಡವಾಗಿತ್ತು.
ಉದ್ಘಾಟನೆ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಆಗಿನ MLC ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕರು ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಕರೆ ತರುತ್ತಾರೆ.
ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಅವತ್ತು ಸೇವಾದಳವತಿಯಿಂದ ಆನಂದಪುರಂನ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನೀಡಿದ ಸ್ವಾಗತ ಅವತ್ತು ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪರಿಗೆ ಸಂತೋಷ ಉಂಟು ಮಾಡಿತ್ತಂತೆ.
ಮಸೀದಿ ಎದುರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯರಾದ #ರಿಚರ್ಡ್_ಲೋಬೋ ಮಾಸ್ಟರ್ ಮತ್ತು ಆನಂದಪುರಂನ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾಗಿದ್ದ ಜನಪ್ರಿಯ #ಎಸ್_ಆರ್_ಕೃಷ್ಣಪ್ಪ ಇಬ್ಬರೂ ಸೇರಿ ಮುಖ್ಯಮಂತ್ರಿಗಳ ಸ್ವಾಗತದ ಈ ಪೆರೇಡ್ ಮಾಡಿಸಿದ್ದರಂತೆ.
ಇವರು ಇಡೀ ಆನಂದಪುರಂನಲ್ಲಿ ಆ ಕಾಲದಲ್ಲಿ ರಾಷ್ಟ್ರೀಯ ಹಬ್ಬದಲ್ಲಿ ನಡೆಸುತ್ತಿದ್ದ ಪ್ರಬಾತ್ ಪೇರಿಗಳ ಅಚ್ಚುಕಟ್ಟುತನ ಈವರೆಗೂ ಯಾರಿಂದಲೂ ಸಾಧ್ಯವಾಗಲಿಲ್ಲ ಎಂದೇ ಆನಂದಪುರಂ ನಿವಾಸಿಗಳು ಈಗಲೂ ನೆನಪು ಮಾಡುತ್ತಾರೆ.
ಅವತ್ತೇ ನಿಜಲಿಂಗಪ್ಪನವರು ಹೊಸಗುಂದಕ್ಕೆ ಹೋಗಿ ಅಲ್ಲಿ #ಹೆಡತ್ರಿ_ನಾಗರಾಜಗೌಡರ ತಂದೆ ಮಲ್ಲಪ್ಪ ಗೌಡರು ಊರಿಗೆ ನಿರ್ಮಿಸಿ ಕೊಟ್ಟ ಪ್ರಾಥಮಿಕ ಶಾಲೆ, ಪರಿಶಿಷ್ಟ ಜಾತಿ ಕಾಲೋನಿಗೆ ನಿರ್ಮಿಸಿದ ತೆರೆದ ಬಾವಿ ಉದ್ಘಾಟಿಸಿ ಜೋಗದಲ್ಲಿ ತಂಗುತ್ತಾರೆ.
#Anandapuram #Shivamogga #sagar
#StateBankofMysore #Branch #nijalingappa
#ChiefMinisterofKarnataka
Comments
Post a Comment