Skip to main content

4004. ಹಿರಿಯ ಪತ್ರಕರ್ತ ರುದ್ರಪ್ಪನವರು ಬರೆದ IF GANDHI RETURNED ಪುಸ್ತಕ

ರುದ್ರಪ್ಪಚನ್ನಬಸಪ್ಪನವರು ಬರೆದ ಇಂಗ್ಲೀಷ್ ಪುಸ್ತಕ

#if_Gandhi_Returned ದೊಡ್ಡ ದೊಡ್ಡ ವಿದ್ವಾಂಸರು ಓದಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರುದ್ರಪ್ಪನವರ ಪುಸ್ತಕಕ್ಕೆ ಸ್ವಾಗತಿಸುತ್ತಾ ಅವರ ಸಾದನೆಗೆ ಹೆಮ್ಮೆಪಡುತ್ತೇನೆ.

  90ರ ದಶಕದಲ್ಲಿ ಉದಯ TVಯ ಮೊದಲ ಬ್ಯೂರೋ ಚೀಪ್ ಆಗಿದ್ದವರು ರುದ್ರಪ್ಪನವರು ಆಗ 
ಉದಯ TV ಕನ್ನಡದ ಮೊದಲ ಖಾಸಾಗಿ TV ಜಾನಲ್ ಆಗಿತ್ತು.

 ರುದ್ರಪ್ಪನವರು ಸಾಗರ ತಾಲೂಕಿನ ವಿಚಾರ ಕ್ರಾಂತಿಯ ಪಿತಾಮಹಾರಾಗಿದ್ದವರು ಸಾಗರ ತಾಲೂಕಿನಲ್ಲಿ ಅವರು ಹಚ್ಚಿದ ಜನಪರ ಹೋರಾಟದ ದೀಪ ಈಗಲೂ ಉರಿಯುತ್ತಿದೆ.

  ರುದ್ರಪ್ಪನವರ ಕುಟುಂಬ ಎರೆಡು ಬಾರಿ ಶರಾವತಿ ನದಿ ಮುಳುಗಡೆಯಿಂದ ಸಂತ್ರಸ್ಥರಾದವರು, ಎಲ್ಲವನ್ನೂ ಕಳೆದುಕೊಂಡ ಕುಟುಂಬ.

  ಒಮ್ಮೆ ಹಿರೇಬಾಸ್ಕರ ಆಣೆಕಟ್ಟಿನಿಂದ ಇನ್ನೊಂದು ಬಾರಿ ಲಿಂಗನಮಕ್ಕಿ ಆಣೆಕಟ್ಟಿನಿಂದ.

    #ರುದ್ರಪ್ಪನವರು ಸೊನ್ನೆಯಿಂದ ದೊಡ್ಡ ಸಾದನೆಗೈದ ಸಾದಕರು.

  70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.

   80ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಿ. ಕೃಷ್ಣಪ್ಪನವರ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.

   ಸಾಗರ ತಾಲೂಕಿನ ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್, ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ  ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ರುದ್ರಪ್ಪನವರ ಪ್ರೇರಣೆ ಕೂಡ ಕಾರಣ ಆಗಿತ್ತೆಂಬುದು ಮರೆಯುವಂತಿಲ್ಲ.

   ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರಗಳು ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.

   ನಂತರ ದಿಡೀರನೆ 1984 ರ ನಂತರ ರುದ್ರಪ್ಪನವರು ಸಾಗರದಿಂದ ನಾಪತ್ತೆ... 

   ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಉದಯ TV ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದಾಗಲೇ ನನಗೆ ಗೊತ್ತಾಗಿದ್ದು ಅವರು ಪತ್ರಿಕಾ ಕ್ಷೇತ್ರದಲ್ಲಿದ್ದಾರೆ ಎಂದು.

    ನಂತರ ರುದ್ರಪ್ಪನವರು ಸಂಪರ್ಕಕ್ಕೆ ಬಂದರೂ ಮುಖತಃ ಭೇಟಿ ಆಗುವ ಅವಕಾಶ ಕಳೆದ ವರ್ಷ ರುದ್ರಪ್ಪ ದಂಪತಿಗಳು ರಿಪ್ಪನಪೇಟೆ ಮತ್ತು ಸಾಗರದಲ್ಲಿ ಅವರ ಸಂಬಂದಿಗಳ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಾಗ ಸಾದ್ಯವಾಯಿತು ಅವರ ಮತ್ತು ನನ್ನ ಬೇಟಿ.

 ಸುಮಾರು 40 ವರ್ಷದ ನಂತರ ನನ್ನ ಅವರ ಈ ಬೇಟಿ ಆಯಿತು.

    ಬೆಂಗಳೂರು ವಾಸಿ ಆಗಿರುವ ರುದ್ರಪ್ಪರ ಇಬ್ಬರು ಪುತ್ರಿಯರೂ ಉನ್ನತ ವ್ಯಾಸಂಗ ಮಾಡಿ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ.

   ವಿದ್ಯುತ್ ಯೋಜನೆಗಾಗಿ ಹಿರೇಬಾಸ್ಕರ ಡ್ಯಾಮ್ ಮತ್ತು ಲಿಂಗನಮಕ್ಕಿ ಡ್ಯಾಮ್ ನಿರ್ಮಾಣದಿಂದ ಎರೆಡು ಬಾರಿ ಮುಳುಗಡೆ ಆಗಿ ಸಂತ್ರಸ್ಥರಾದ ಕುಟುಂಬ ರುದ್ರಪ್ಪನವರದ್ದು.

   ಆರ್ಥಿಕವಾಗಿ ಇದರಿಂದ ಚೇತರಿಸಿ ಕೊಳ್ಳಲಾಗದೆ ಇವರ ತಂದೆ ಪಟ್ಟ ಕಷ್ಟ ಆಗ SSLC ಪಾಸಾಗಿದ್ದ ರುದ್ರಪ್ಪರಿಗಿ ಪಿಯುಸಿ ಸೇರಲು ಸಾಧ್ಯವೇ ಆಗಲಿಲ್ಲ.

  ಮನೆಯ ದನಗಾವಲು ಒಂದು ವರ್ಷ ಮಾಡಿ ಅದರಲ್ಲಿ ಬಂದ ಹಣದಿಂದ ಶಿವಮೊಗ್ಗದ ನ್ಯಾಷನಲ್ ಕಾಲೇಜು ಸೇರಿ ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದೆ ಅಂತ ಅವರು ಅನ್ನುವಾಗ ನನಗೆ ಆಶ್ಚರ್ಯ ಅನ್ನಿಸಿತು.

  ಕೆಲ ಕಾಲ ಸಾಗರ ಪೇಟೆಯ ಸಾಗರ್ ಲಾಡ್ಜನಲ್ಲಿ ಮ್ಯಾನೇಜರ್ ವೃತ್ತಿ ಮಾಡುತ್ತಿದ್ದರು, ಇವರ ಜೊತೆ ಆಗ ಶಾಂತಾ ಲಾಡ್ಜ್ ಬಸವರಾಜು ಕೂಡ ಇದ್ದರು.

    ಆ ಸಂದಭ೯ದಲ್ಲೇ ಸಾಗರದಲ್ಲಿ ಪೌರ ಸನ್ಮಾನ ಸ್ಪೀಕರಿಸಲು ಬಂದ ಮುಖ್ಯಮಂತ್ರಿ ಗುಂಡೂರಾವ್ ಗೆ ರೈತರ ಮೇಲಿನ ಗೋಲಿಬಾರ್ ವಿರೋದಿಸಿ  ಘೆರಾವು ಮಾಡಿದ ತಂಡದ ಮುಖ್ಯಸ್ಥರು ಈ ರುದ್ರಪ್ಪ.

  ಆದ್ದರಿಂದ ನಂತರ ಸಾಗರಕ್ಕೆ ಯಾರೇ ಮಂತ್ರಿಗಳು ಬಂದರೂ ರುದ್ರಪ್ಪನವರನ್ನ ಮುಂಜಾಗೃತ ಕ್ರಮವಾಗಿ ಬಂದನದಲ್ಲಿಡುತ್ತಿದ್ದ ಪೋಲಿಸ್ ವ್ಯವಸ್ಥೆಗೆ ಬೇಸತ್ತು ನಂತರ ಅವರು ಮುಂಬೈ ಸೇರಿದರು.

  ಅಲ್ಲಿ ನೀರಾವರಿ ಆಣೆಕಟ್ಟು ನಿರ್ಮಾಣ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮುಖ್ಯಸ್ಥರಾಗಿ ಅಲ್ಲಿಯೇ ಜರ್ನಲಿಸಂ ಪಿಜಿ ಡಿಪ್ಲೋಮ ಮಾಡಿ ರಾಜ್ಯಕ್ಕೆ ವಾಪಾಸಾದರು.

   ಅನೇಕ ಪತ್ರಿಕೆ -ಟಿವಿ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.

   ಜೊತೆಗೆ ಅನೇಕ ವೈಚಾರಿಕ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿದ್ದಾರೆ.

   ಈಗ ಇಂಗ್ಲೀಷ್ ಭಾಷೆಯಲ್ಲಿ #IF_GANDHI_RETURNED ಎಂಬ ಪುಸ್ತಕದ ಮೂಲಕ ರುದ್ರಪ್ಪನವರು ಸುದ್ದಿಯಲ್ಲಿದ್ದಾರೆ ಸದ್ಯದಲ್ಲೇ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.

     ನನ್ನ ಅವರ ಬೇಟಿಯ ದಿನ 80ರ ದಶಕದಲ್ಲಿ ಡಿಪ್ಲೋಮ ವ್ಯಾಸಂಗ ಅರ್ದಕ್ಕೆ ಬಿಟ್ಟು ಹೋರಾಟದ ಕಿಚ್ಚು ಹಚ್ಚಿಕೊಂಡ ನನ್ನ ಜೀವನದ ತಿರುವಿಗೆ ಈ ರುದ್ರಪ್ಪನವರೂ ಕಾರಣವಾಗಿದ್ದಾರೆ ಇದನ್ನೆಲ್ಲ ನೆನಪು ಮಾಡಿಕೊಂಡಿದ್ದೆವು.

  ಇವರು ಬರೆದ ಇಂಗ್ಲೀಷ್ ಪುಸ್ತಕ ಬೇಕಾದವರಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಲಿಂಕ್ ಇದೆ ನೋಡಿ.

 #UdayaTV #karnataka #journalism #DSS #socialist #press #sagar #shivamogga #rudrappa
#ifgandhireturned

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...