ದುಬಾರೆ_ಆನೆ_ದುರಂತ
ತಮಿಳುನಾಡಿನ ಪ್ರವಾಸಿ ಮಹಿಳೆ ಮತ್ತು ಮಾರ್ತಾಂಡ ಎಂಬ ದಂತಗಳಿಲ್ಲದ ಗಂಡಾನೆ ಮೃತರಾಗಿದ್ದಾರೆ.
ಕೋರೆ ಇಲ್ಲದ ಗಂಡಾನೆಗಳನ್ನ ಹೆಣ್ಣಾನೆಗಳು ಇಷ್ಟಪಡುವುದಿಲ್ಲ ಇದರಿಂದ ಕೋರೆ ಇರುವ ಆನೆಗಳಿಗೂ ಮತ್ತು ಕೋರೆ ಇಲ್ಲದ ಮಖ್ನಾ ಆನೆಗಳಿಗೂ ಕಾಳಗ ನಡೆಯುತ್ತಿರುತ್ತದೆ.
ಪ್ರವಾಸಿಗಳು ಬೇಸಿಗೆ ರಜೆಯಲ್ಲಿ ಆನೆ ಕ್ಯಾಂಪ್ ಗಳಿಗೆ ಹೋಗುತ್ತಾರೆ, ಸಾಮಾನ್ಯವಾಗಿ ಆನೆ ಕ್ಯಾಂಪ್ ಗಳು ಹರಿಯುವ ನದಿ ನೀರಿನ ಪ್ರದೇಶವಾಗಿರುತ್ತದೆ.
ಅಲ್ಲಿ ರಾತ್ರಿ ಹೊತ್ತು ಕಾಡಿನಲ್ಲಿರುವ ಸಾಕಿದ ಆನೆಗಳನ್ನ ಬೆಳಿಗ್ಗೆ ಆಹಾರಕ್ಕಾಗಿ ಮತ್ತು ಸ್ನಾನಕ್ಕಾಗಿ ಆನೆ ಕ್ಯಾಂಪಿಗೆ ಮಾವುತರು ಕರೆ ತರುತ್ತಾರೆ ಆಗ ಪ್ರವಾಸಿಗಳಿಗೆ ಪ್ರವೇಶ ಶುಲ್ಕ ಪಡೆದು ಆನೆಗಳ ಸ್ನಾನ ಮಾಡಿಸುವ ಸ್ಥಳದಲ್ಲಿ ಪ್ರವಾಸಿಗಳನ್ನು ಬಿಡುತ್ತಾರೆ, ಪ್ರವಾಸಿಗಳು ಆನೆಯ ಜೊತೆ ನಿರಾಟ ಆಡುವ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಾರೆ ಇದರಿಂದ ಹೆಚ್ಚು ಪ್ರವಾಸೋದ್ಯಮದ ಆಕರ್ಷಣೆ ಆನೆ ಕ್ಯಾಂಪ್ ಗಳಾಗಿದೆ.
ಇದೇ ರೀತಿ ಶಿವಮೊಗ್ಗ ಜಿಲ್ಲೆಯ #ಸಕ್ರೆಬೈಲು ಇದೆ, ಕೊಡಗಿನ #ದುಬಾರೆಯಲ್ಲಿ ದಂತವಿಲ್ಲದ #ಮಖ್ನಾ ಆನೆ ಮಾರ್ತಾಂಡ ನೀರಾಟದಲ್ಲಿದ್ದಾಗ ಅದರ ಮೇಲೆ ಕಂಜನ್ ಎಂಬ ದಸರಾ ಉತ್ಸವದಲ್ಲಿ ಭಾಗವಹಿಸುವ ಆನೆ ದಿಡೀರ್ ಆಗಿ ಮಾವುತನ ನಿಯಂತ್ರಣ ಮೀರಿ ದಾಳಿ ಮಾಡಿದೆ.
ಇದರಿಂದ ಆಯತಪ್ಪಿ ಮರ್ತಾಂಡ ಆನೆ ಬಿದ್ದಿದ್ದು ಪ್ರವಾಸಿ ಮಹಿಳೆ ಮೇಲೆ ಪ್ರವಾಸಿ ಮಹಿಳೆ ಇದರಿಂದ ಮೃತರಾದರು ಮತ್ತು ಪ್ರತಿರೋದ ತೋರಲಾಗದೆ ಹರಿವ ನೀರಿನಲ್ಲಿ ಬಿದ್ದ ಮಾರ್ತಾಂಡ ಆನೆ ಮೇಲೆ ತನ್ನ ಕೋರೆಗಳಿಂದ ಕಂಜನ್ ಆನೆ ಮಾಡಿದ ದಾಳಿಗಳಿಂದ ಮಾರ್ತಾಂಡ ಆನೆ ಕೂಡ ಮೃತ ಪಟ್ಟಿದೆ.
ಇದರಿಂದ ರಾಜ್ಯ ಸರ್ಕಾರ ಹೊಸ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸಿಜರ್ (#SOP) ಜಾರಿ ಮಾಡಿ ಇಂತಹ ಆನೆ ಕ್ಯಾಂಪಿನಲ್ಲಿ ಆನೆಗಳಿಂದ ಪ್ರವಾಸಿಗಳು ನೂರು ಮೀಟರ್ ದೂರದಲ್ಲಿ ಇರಬೇಕಂತ.
ದಾಳಿ ಮಾಡಿದ ಕಂಜನ್ ಆನೆಯು ಕರ್ನಾಟಕದ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಮತ್ತು ಪ್ರವಾಸಿಗರ ಆಕರ್ಷಣೆಯಾಗಿರುವ ಜನಪ್ರಿಯ ಸಾಕಾನೆಗಳಲ್ಲಿ ಒಂದಾಗಿದೆ.
ಇದು ಕೊಡಗು ಜಿಲ್ಲೆಯ ಕುಶಾಲನಗರದ ಬಳಿ ಇರುವ ದುಬಾರೆ ಆನೆ ಶಿಬಿರದಲ್ಲಿದೆ.
ಈ ಆನೆಯನ್ನು 2014 ರಲ್ಲಿ ಹಾಸನದ ಯಸಳೂರು ಅರಣ್ಯ ಪ್ರದೇಶದಲ್ಲಿ ರಕ್ಷಿಸಲಾಗಿತ್ತು ,ಇದು ದುಬಾರೆ ಶಿಬಿರದ ಅತಿ ಎತ್ತರದ ಆನೆಗಳಲ್ಲಿ ಒಂದಾಗಿದ್ದು, ಸುಮಾರು 2.62 ಮೀಟರ್ ಎತ್ತರ ಮತ್ತು 4515 ಕೆಜಿಗಿಂತಲೂ ಹೆಚ್ಚು ತೂಕವನ್ನು ಹೊಂದಿದೆ.
ಅಭಿಮನ್ಯು ಆನೆಯ ನಂತರ ಚಿನ್ನದ ಅಂಬಾರಿಯನ್ನು ಹೊರುವ ಆನೆಗಳ ಸಾಲಿಗೆ ಕಂಜನ್ ಆನೆಯನ್ನೂ ಪರಿಗಣಿಸಲಾಗಿತ್ತು.
ಇದು ಕಳೆದ ಕೆಲವು ವರ್ಷಗಳಿಂದ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ತನ್ನದೇ ಆದ ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿತ್ತು.
ಇತ್ತೀಚಿನ ಘಟನೆಗಳು #ಕಂಜನ್ ಆನೆಯು ತನ್ನ ಬಲವಾದ ಮೈಕಟ್ಟಿಗೆ ಹೆಸರುವಾಸಿಯಾಗಿದೆ ಆದರೆ ಇದು ಇತರ ಆನೆಗಳೊಂದಿಗೆ ಸಾಂದರ್ಭಿಕವಾಗಿ ಜಗಳವಾಡಿದ ನಿದರ್ಶನಗಳೂ ಇವೆ.
ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಕಾಳಗದಲ್ಲಿ #ಮಾರ್ತಾಂಡ ಎಂಬ ಆನೆಯ ಮೇಲೆ ಕಂಜನ್ ದಾಳಿ ನಡೆಸಿತ್ತು
ಈ ಘಟನೆಯಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆಯು ಮೃತಪಟ್ಟಿದೆ.
ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿದ್ದ ಕಂಜನ್ ಆನೆಗೆ ದಸರಾದಿಂದ ಕೊಕ್ ನೀಡಲಾಗಿದೆ.
ದಸರಾ ಜಂಬೂಸವಾರಿಯಿಂದ ಕಂಜನ್ ಆನೆ ಹೊರಗಿಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಆನೆ ದಾಳಿಗೆ ಕಾರಣ ಏನಿರಬಹುದು?... ಈ ಲೇಖನ ಪೂರ್ತಿ ಓದಿ..
ದುಬಾರೆಯಲ್ಲಿ ಮೃತ ಪಟ್ಟ ಆನೆ ಮಾರ್ತಾಂಡ ದಂತಗಳಿಲ್ಲದ #ಮಖ್ನಾ ಆನೆ ಆಗಿತ್ತು.
ಕೋರೆ ಇಲ್ಲದ ಗಂಡಾನೆಯೇ 'ಮಖ್ನಾ' ಅನೆಗಳು ಎಂದು ಕರೆಯುತ್ತಾರೆ.
ಮಖ್ನಾ ಎನ್ನುವುದು ದಂತವಿಲ್ಲದ (ಕೊಂಬುಗಳಿಲ್ಲದ) ಗಂಡು ಏಷ್ಯನ್ ಆನೆಗಳನ್ನು ಕರೆಯುವ ಭಾರತೀಯ ಸ್ಥಳೀಯ ಪದವಾಗಿದೆ.
ಈ ಪದವು ಹಿಂದಿ ಭಾಷೆಯ "ಮಖುನಾ" (makunā/makhnā) ದಿಂದ ಬಂದಿದೆ,ದಕ್ಷಿಣ ಭಾರತೀಯ ಭಾಷೆಗಳ ಪ್ರಭಾವ: ಭಾಷಾಶಾಸ್ತ್ರಜ್ಞರ ಪ್ರಕಾರ ಇದು ದ್ರಾವಿಡ ಭಾಷೆಯಾದ ತೆಲುಗಿನ "ಮೊಕ್ಕಾ" (blunt/ಬೋಳು) ಅಥವಾ "ಮೊಕ್ಕಡಿ" (ಚಿಕ್ಕ ದಂತವಿರುವ ಆನೆ) ಪದದಿಂದ ರೂಪಾಂತರಗೊಂಡಿರಬಹುದು, ಸಂಸ್ಕೃತದಲ್ಲಿ "ಮತ್ಕುಣ" ಎಂದರೆ ದಂತವಿಲ್ಲದ ಆನೆ ಎಂದರ್ಥವಿದೆ,ಏಷ್ಯನ್ ಆನೆಗಳಲ್ಲಿ (ಹೆಚ್ಚಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ) ಗಂಡು ಆನೆಗಳಿಗೆ ಮಾತ್ರ ದಂತಗಳಿರುತ್ತವೆ ಆದರೆ ಕೆಲವು ಗಂಡು ಆನೆಗಳು ಆನುವಂಶಿಕವಾಗಿ ಅಥವಾ ಬೇಟೆಯ ಕಾರಣದಿಂದ ದಂತಗಳನ್ನು ಹೊಂದಿರುವುದಿಲ್ಲ ಇಂತಹ ಆನೆಗಳನ್ನು 'ಮಖ್ನಾ' ಎಂದು ಕರೆಯಲಾಗುತ್ತದೆ.
ಇವುಗಳು ಸಾಮಾನ್ಯವಾಗಿ ಹೆಣ್ಣು ಆನೆಗಳಂತೆ ಕಾಣುತ್ತವೆ ಆದರೆ ಗಾತ್ರ ಮತ್ತು ಲಕ್ಷಣಗಳಲ್ಲಿ ಗಂಡು ಆನೆಯಾಗಿರುತ್ತವೆ.
ಇವುಗಳಲ್ಲಿ ಆನುವಂಶಿಕ ಕಾರಣಗಳಿಂದಾಗಿ ದಂತಗಳು ಬೆಳೆಯುವುದಿಲ್ಲ.
ಈ ಆನೆಗಳಿಗೆ ಹೊರದವಡೆಗಳು (ದಂತಗಳು) ಇರುವುದಿಲ್ಲ, ದಂತಗಳಿಲ್ಲದಿರುವುದು ಇವುಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಇದರಿಂದಾಗಿ ಇವುಗಳು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಮತ್ತು ಮನುಷ್ಯರಿಗೆ ಅಥವಾ ಇತರ ಪ್ರಾಣಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.
ಕರ್ನಾಟಕದ ಮಲೆನಾಡು ಭಾಗಗಳಾದ ಹಾಸನ, ಸಕಲೇಶಪುರ ಮತ್ತು ದಕ್ಷಿಣ ಭಾರತದ ಇತರ ಅರಣ್ಯ ಪ್ರದೇಶಗಳಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ.
ಮಕ್ನಾ ಆನೆಗಳ ಹಾವಳಿ ಕರ್ನಾಟಕದ ಅರಣ್ಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಇಂತಹ ಆನೆಗಳನ್ನು ಸೆರೆಹಿಡಿದಿರುವ ನಿದರ್ಶನಗಳಿವೆ.
ಕೆಲವು ಮಖ್ನಾ ಆನೆಗಳು ಚಿಕ್ಕದಾದ ದಂತದ ಅವಶೇಷಗಳನ್ನು (Tushes) ಮಾತ್ರ ಹೊಂದಿರಬಹುದು, ಆನೆಗಳಲ್ಲಿ ದಂತಕ್ಕಾಗಿ ನಡೆಯುವ ಅಕ್ರಮ ಬೇಟೆಯು ಈ ಆನೆಗಳ ಜೀನ್ (Genes) ಮೇಲೆ ಪ್ರಭಾವ ಬೀರುತ್ತದೆ.
ಇದರಿಂದಾಗಿ ಈ ರೀತಿಯ ದಂತರಹಿತ ಆನೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ದಂತಗಳು ಇಲ್ಲದಿದ್ದರೂ ಇವು ತಮ್ಮ ದೈಹಿಕ ತೂಕ, ಸೊಂಡಿಲಿನ ಬಲವನ್ನು ಬಳಸಿಕೊಂಡು ಇತರ ಆನೆಗಳೊಂದಿಗೆ ಹೋರಾಡುತ್ತವೆ,ಕರ್ನಾಟಕದ ದುಬಾರೆ ಮುಂತಾದ ಆನೆ ಶಿಬಿರಗಳಲ್ಲಿಯೂ ಮಖ್ನಾ ಆನೆಗಳನ್ನು ಕಾಣಬಹುದು.
ಮಖ್ನಾ ಆನೆಗಳೆಡೆಗೆ ಹೆಣ್ಣಾನೆಗಳು ಆಕರ್ಷಿತವಾಗುವ ಪ್ರಮಾಣ ತೀರಾ ಕಡಿಮೆ ಏಕೆಂದರೆ ಗಂಡಾನೆಗೆ ಕೋರೆ ಒಂದು ಪ್ರಬಲ ಹಾಗೂ ಬಲಿಷ್ಠ ಅಸ್ತ್ರವಿದ್ದಂತೆ.
ಕೋರೆಯೇ ಇಲ್ಲದ ಆನೆಗಳನ್ನು ಹೆಣ್ಣಾನೆಗಳು ಅಷ್ಟಾಗಿ ಗಮನಿಸುವುದಿಲ್ಲ ಹೀಗಾಗಿ ಈ ಮಖ್ನಾ ಆನೆಗಳು ಇತರ ಗಂಡು ಆನೆಗಳಿಗಿಂತ ತಾವೇನೂ ಕಡಿಮೆಯಲ್ಲ ಎಂಬುದನ್ನು ತೋರಿಸಲು ಹೆಚ್ಚಾಗಿ ಗಲಾಟೆ ಮಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತವೆ.
ಹೆಣ್ಣಾನೆಗಳು ಬೇರೆ ಭಾಗದ ಸದೃಢ ಗಂಡಾನೆಗಳನ್ನು ಮಿಲನಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ ಇದನ್ನು #ಜೀನ್_ಪೂಲಿಂಗ್’ ಎಂದು ಕರೆಯುತ್ತಾರೆ.
ಒಂದೇ ಗುಂಪಿನಲ್ಲಿ ಅಥವಾ ಒಂದೇ ಭಾಗದ ಆನೆಗಳೊಂದಿಗೆ ಮಿಲನವಾಗಿ ಹುಟ್ಟುವ ಮರಿಗಳು ಆರೋಗ್ಯಕರವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಬೇರೆ ಭಾಗದ ಸದೃಢ ಆನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.
ವನ್ಯ ಪ್ರಾಣಿಗಳ ಎಷ್ಟೇ ಪಳಗಿಸಿದರೂ ಅವುಗಳ ವರ್ತನೆ ಅನಿರೀಕ್ಷಿತವಾಗಿ ಮಾನವ ಜೀವಕ್ಕೆ ಅಪಾಯ ತರುವುದರಿಂದ ಅವುಗಳನ್ನ ದೂರದಿಂದ ವೀಕ್ಷಿಸುವುದು ಕಡಿಮೆ ಅಪಾಯ ಮತ್ತು ಸುರಕ್ಷಿತ ವಿಧಾನವಾಗಿದೆ.
#makna #elephant #ElephantAttack
#dubareelephantcamp #sakrebyluelephantcamp
#jeenpoling
Comments
Post a Comment