ಅಧಿಕ_ಮಾಸ_2026
ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಮೂರು ಆಂಜನೇಯರ ದರ್ಶನ ಯಾತ್ರೆ ಅಧಿಕಮಾಸದಲ್ಲಿ ನಡೆಯುತ್ತದೆ ಗೊತ್ತಾ? ....
ಈ ಮೂರು ಅಂಜನೇಯ ವಿಗ್ರಹದಲ್ಲಿ ಸಾಲಿಗ್ರಾಮ ಅಳವಡಿಸಿದ್ದಾರೆ.
ಹಿಂದೂ ಪಂಚಾಂಗದಲ್ಲಿ ಅಧಿಕ ಮಾಸ ಈ ವರ್ಷ ಮೇ 17 ಭಾನುವಾರದಿಂದ ಪ್ರಾರಂಭವಾಗಿ ಜೂನ್ 15 ಸೋಮವಾರಕ್ಕೆ ಕೊನೆಗೊಳ್ಳುತ್ತದೆ.
ಅಧಿಕ ಮಾಸದಲ್ಲಿಯೇ ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ,ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡಲಗಿಯ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ದರ್ಶನ ಪಡೆದರೆ ಕಾಶಿ ಫಲಯಾತ್ರೆ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.
ಹೀಗಾಗಿ ಈ ಆಂಜನೇಯರಿಗೆ ಅಪಾರ ಭಕ್ತಸಮೂಹವಿದೆ,
ಶಿಕಾರಿಪುರದಿಂದ ಸುಮಾರು 60 ಕಿ.ಮೀ ದೂರದಲ್ಲಿ ಕದರಮಂಡಲಗಿ ಮತ್ತು 35 ಕಿ.ಮೀ ದೂರದಲ್ಲಿ ಸಾತೇನಹಳ್ಳಿ ಇರುವುದರಿಂದ, ಒಂದೇ ದಿನ ಈ ಮೂರೂ ಕ್ಷೇತ್ರಗಳನ್ನು ಭೇಟಿ ಮಾಡುವುದು ಸುಲಭ.
ಈ ಮಾಸದಲ್ಲಿ ದಾನ, ಪೂಜೆ, ವ್ರತ ಮತ್ತು ತೀರ್ಥಯಾತ್ರೆ (ವಿಶೇಷವಾಗಿ ಮಥುರಾ-ವೃಂದಾವನ) ಅತ್ಯಂತ ಫಲದಾಯಕವೆಂದು ಪರಿಗಣಿಸಲಾಗಿದೆ.
ಈ ಪವಿತ್ರ ತಿಂಗಳು ಪುರುಷೋತ್ತಮ ಮಾಸ ಅಥವ ಮಲಮಾಸ ಎಂದು ಕರೆಯುತ್ತಾರೆ, ಜ್ಯೇಷ್ಠಮಾಸದಲ್ಲಿ ಬರುವುದರಿಂದ ಇದನ್ನು ಜ್ಯೇಷ್ಠ ಅಧಿಕ ಮಾಸ ಎಂದು ಕರೆಯುತ್ತಾರೆ.
ದಕ್ಷಿಣ ಭಾರತದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯ ಸ್ವಾಮಿ / ಬ್ರಾಂತೇಶ ಎಂದು ಕರೆಯುವ ಆಂಜನೇಯ ಸ್ವಾಮಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡರಗಿಯ ಆಂಜನೇಯ ಕಾಂತೇಶ ಮತ್ತು
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಳ್ಳಿಯ ಆಂಜನೇಯ ಶಾಂತೇಶರನ್ನು ಅಧಿಕ ಮಾಸದ ತಿಂಗಳಲ್ಲಿ ಸೂರ್ಯೋದಯದ ನಂತರ ಪ್ರಾರಂಬಿಸಿ ಸೂರ್ಯಾಸ್ತದ ಒಳಗೆ ದರ್ಶನ ಯಾತ್ರೆ ಮಾಡಿದರೆ ಕಾಶಿ ಯಾತ್ರೆಯಷ್ಟೇ ಪುಣ್ಯ ಪ್ರಾಪ್ತಿ ಎಂಬ ನಂಬಿಕೆ ಆಸ್ತಿಕರಲ್ಲಿದೆ.
ಕಾಂತೇಶ, ಭ್ರಾಂತೇಶ ಮತ್ತು ಶಾಂತೇಶರು ಕರ್ನಾಟಕದ ಉತ್ತರ ಭಾಗದಲ್ಲಿರುವ ಹನುಮಂತನ ಮೂರು ಪ್ರಸಿದ್ಧ ಜಾಗೃತ ಕ್ಷೇತ್ರಗಳಾಗಿವೆ.
#ಕಾಂತೇಶ_ಕದರಮಂಡಲಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿ ನೆಲೆಸಿದ್ದಾನೆ,ವಿಗ್ರಹದ ಕಣ್ಣುಗಳಲ್ಲಿ ಸಾಲಿಗ್ರಾಮವಿದ್ದು, ಕಾಂತಿಯುತವಾಗಿರುವುದರಿಂದ 'ಕಾಂತೇಶ' ಎಂದು ಕರೆಯಲಾಗುತ್ತದೆ ಇಲ್ಲಿ ಕನಕದಾಸರು ದೇವರ ಆರಾದಿಸಿದ ಇತಿಹಾಸ ಇದೆ.
#ಭ್ರಾಂತೇಶ_ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿದೆ ಈ ಮೂರ್ತಿಯ ನೆತ್ತಿಯ ಮೇಲೆ ಸಾಲಿಗ್ರಾಮವಿದೆ ಈ ದೇವರಿಗೆ ಬ್ರಿಟೀಷರ ಮತ್ತು ಮರಾಠರ ವಿರುದ್ದ ಹೋರಾಡಿದ ದೊಂಡಿಯಾ ವಾಘ್ ತನ್ನ ಖಡ್ಗ ಸಮರ್ಪಿಸಿದ್ದಾರೆ.
#ಶಾಂತೇಶ_ಸಾತೇನಹಳ್ಳಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿದೆ, ಈ ಮೂರ್ತಿಯ ಪಾದದಲ್ಲಿ ಸಾಲಿಗ್ರಾಮವಿದೆ.
ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ ಮತ್ತು ಶಾಂತೇಶನ ಪಾದದಲ್ಲಿ ಅತೀ ಶ್ರೇಷ್ಠವಾದ ಸಾಲಿಗ್ರಾಮ ಸ್ಥಾಪಿಸಲಾಗಿದ್ದು, ಒಂದೇ ದಿನ ಈ ಮೂವರು ದೇವರ ದರ್ಶನ ಪಡೆದರೆ ಇಷ್ಟಾರ್ಥ ಈಡೇರುತ್ತದೆ ಎಂಬ ಪ್ರತೀತಿ ಇದೆ.
ದರ್ಶನ ಮಾಡುವಾಗ ಈ ಸಾಲಿಗ್ರಾಮಗಳನ್ನೂ ಭಕ್ತರು ಕಣ್ತುಂಬಿಕೊಳ್ಳುವುದು ಮಹತ್ವದ್ದು.
ಈ ಮೂರು ಊರುಗಳ ದೇವಾಲಯದಲ್ಲಿನ ಹನುಮನ ಮೂರ್ತಿಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ದೂರ್ವಾಸ, ವಶಿಷ್ಠ ಮತ್ತು ವ್ಯಾಸ ಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಕೂಡ ಇದೆ.
ಈ ಮೂವರು ಹನುಮಂತ ದೇವರುಗಳು ಅಧಿಕ ಮಾಸ ಅಥವಾ ಶ್ರಾವಣ ಮಾಸದಲ್ಲಿ ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತಾರೆ ಅಂತಹ ದಿನಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.
ಈ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಶನಿ ಕಾಟದಂತಹ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.
ಅಧಿಕ ಮಾಸ ಎಂದರೆ ಚಂದ್ರನ ತಿಂಗಳುಗಳು ಸುಮಾರು 354 ದಿನಗಳು ಮತ್ತು ಸೌರ ವರ್ಷದ ಸುಮಾರು 365 ದಿನಗಳು ನಡುವಿನ ಹತ್ತು ದಿನಗಳ ವ್ಯತ್ಯಾಸವನ್ನು ಸರಿಹೊಂದಿಸಲು ಈ 13ನೇ ತಿಂಗಳನ್ನು ಸೇರಿಸಲಾಗುತ್ತದೆ.
ಅಧಿಕ ಮಾಸ ಯಾವಾಗ ಬರುತ್ತದೆಂದರೆ ಸೂರ್ಯನು ಒಂದು ತಿಂಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಕ್ರಮಿಸದಿದ್ದಾಗ, ಅಂದರೆ ಸಂಕ್ರಾಂತಿ ಇಲ್ಲದ ಚಾಂದ್ರಮಾನ ತಿಂಗಳನ್ನು ಅಧಿಕ ಮಾಸವೆಂದು ಪರಿಗಣಿಸಲಾಗುತ್ತದೆ.
ಈ ಮಾಸದ ಅಧಿಪತಿ ಶ್ರೀ ವಿಷ್ಣು - ಪುರುಷೋತ್ತಮ ಆದ್ದರಿಂದ, ಇದು ಅತ್ಯಂತ ಪವಿತ್ರವಾದ ತಿಂಗಳು.
ಈ ಸಮಯದಲ್ಲಿ ದಾನ, ಜಪ, ತಪಸ್ಸು, ವಿಷ್ಣು ಸಹಸ್ರನಾಮ ಪಠಣ ಮತ್ತು ವಿಶೇಷ ವ್ರತಗಳನ್ನು ಮಾಡುವುದು ತುಂಬಾ ಒಳ್ಳೆಯದು.
ಅಧಿಕ ಮಾಸದಲ್ಲಿ ಮದುವೆ, ಗೃಹಪ್ರವೇಶ, ಮುಂಡನ ಮುಂತಾದ ಮಂಗಳಕರ ಕೆಲಸಗಳನ್ನು ಮಾಡುವುದಿಲ್ಲ.
2026ರಲ್ಲಿ ಅಧಿಕ ಮಾಸವು ಮೇ 17ರಿಂದ ಜೂನ್ 15ರವರೆಗೆ ನಡೆಯಲಿದೆ ಈ ತಿಂಗಳಲ್ಲಿ ಮಾಡುವ ಪುಣ್ಯ ಕಾರ್ಯಗಳು ದೀರ್ಘಕಾಲದ ಪಾಪಗಳನ್ನು ಕಳೆದು, ವಿಶೇಷ ಪುಣ್ಯವನ್ನು ನೀಡುತ್ತವೆ ಎಂಬ ನಂಬಿಕೆ ಇದೆ.
ಶಾಂತೇಶ, ಕಾಂತೇಶ, ಭ್ರಾಂತೇಶ ಮಹಿಮೆ ಅಪಾರ,ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕದರಮುಂಡಲಗಿಯ ಕಾಂತೇಶ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಭ್ರಾಂತೇಶ ಆಂಜನೇಯ ಸ್ವಾಮಿಗಳನ್ನು ಶ್ರಾವಣ ಹಾಗೂ ಅಧಿಕ ಮಾಸದಲ್ಲಿ ಒಂದೇ ದಿನ ದರ್ಶನ ಪಡೆದರೆ ಕಾಶಿ ಫಲಯಾತ್ರೆ ಪ್ರಾಪ್ತಿಯಾಗುತ್ತದೆ ಎನ್ನುವ ಪ್ರತೀತಿ ಇದೆ.
ಹೀಗಾಗಿ ಈ ಆಂಜನೇಯರಿಗೆ ಅಪಾರ ಭಕ್ತಸಮೂಹವಿದೆ.
#KashiYatre #kanthesha #branthesha #Shantesha #shikaripura #kadaramundaragi
#satenahalli #haveri #Maruthi #anjaneya
Comments
Post a Comment