Skip to main content

3598. ಬಳ್ಳಿಗಾವೆ

#ಬಳ್ಳಿಗಾವೆ

#ನಾಟ್ಯರಾಣಿ_ಶಾಂತಲಾದೇವಿ

  ಸುಮಾರು ಕ್ರಿ.ಶ. 1108 ರಿಂದ 1152 ರವರೆಗೆ ಆಡಳಿತ ನಡೆಸಿದ
ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೊರೆ ವಿಷ್ಣುವರ್ಧನರ (ಬಿಟ್ಟಿಗ) ಪಟ್ಟದ ರಾಣಿ.

 12ನೇ ಶತಮಾನದ ಪ್ರಸಿದ್ಧ ವಚನಕಾರ, ಶಿವಶರಣ ಮತ್ತು ಅನುಭಾವಿ ಅಲ್ಲಮಪ್ರಭು (ಸುಮಾರು ಕ್ರಿ.ಶ. 1160-1200)

    ಇವರಿಬ್ಬರ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಎಂಬುದು ವಿಶೇಷ.

  ಬಳ್ಳಿಗಾವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ.

   ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುತ್ತದೆ, ಶಿಕಾರಿಪುರ ಪಟ್ಟಣದಿಂದ ಸುಮಾರು ೨೧ ಕಿ.ಮೀ ದೂರವಿರುವ ಈ ಪುಟ್ಟ ಹಳ್ಳಿ.

  ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ತವರುಮನೆ. 

  ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ನಾಟ್ಯ ರಾಣಿ ಶಾಂತಲಾ ದೇವಿಯನ್ನು ಶಿಲಾ ಬಾಲಕಿಯಾಗಿ ಈಗಲೂ ನೋಡುತ್ತೇವೆ.

   ಹೊಯ್ಸಳ ಶೈಲಿಯ ಕೇದಾರೆಶ್ವರ ದೇವಾಲಯದ ನಿರ್ಮಾಣ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು.

   ಬಳ್ಳಿಗಾವಿ (ಬಳ್ಳಿಗಾಮೆ) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಸುಮಾರು 2000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪ್ರಾಚೀನ ನಗರ.

  ಇದು ಶಾತವಾಹನರಿಂದ ಕದಂಬರು, ಚಾಲುಕ್ಯರು ಮತ್ತು ಹೊಯ್ಸಳರ ಕಾಲದವರೆಗೆ ಪ್ರಮುಖ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿತ್ತು.

 ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ಜನ್ಮಸ್ಥಳವೆಂದು ಕರೆಯಲ್ಪಡುವ ಇಲ್ಲಿ, ತ್ರಿಪುರಾಂತಕೇಶ್ವರ, ಕೇದಾರನಾಥೇಶ್ವರ, ಗಂಡಭೇರುಂಡ ಮತ್ತು ಸೋಮೇಶ್ವರ ದೇವಾಲಯಗಳು ಪ್ರಸಿದ್ಧವಾಗಿವೆ.

 ಬಳ್ಳಿಗಾವಿಯ ಇತಿಹಾಸದ ಮುಖ್ಯಾಂಶಗಳು:ಪ್ರಾಚೀನತೆ: ಬಳ್ಳಿಗಾವಿಯು ಕರ್ನಾಟಕದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ, ಇದು ಕಲೆ ಮತ್ತು ವಾಸ್ತುಶಿಲ್ಪದ ಖಜಾನೆಯಾಗಿದೆ.

   ರಾಜವಂಶಗಳಾದ ಶಾತವಾಹನರು, ಕದಂಬರು, ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರು ಈ ಪ್ರದೇಶವನ್ನು ಆಳಿ, ಇಲ್ಲಿನ ದೇವಾಲಯಗಳನ್ನು ನಿರ್ಮಿಸಿ ಪೋಷಿಸಿದರು.

  ಇದು ಕೇವಲ ರಾಜಧಾನಿಯಾಗಿರದೆ, ಜೈನ ಬಸದಿಗಳು, ಶೈವ ದೇವಾಲಯಗಳು ಮತ್ತು ಶಿಕ್ಷಣ ಕೇಂದ್ರಗಳಿಗೆ ಪ್ರಸಿದ್ಧವಾಗಿತ್ತು.
 
   ಕೇದಾರನಾಥೇಶ್ವರ ದೇವಾಲಯ: ಹೊಯ್ಸಳ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ.

   ತ್ರಿಪುರಾಂತಕೇಶ್ವರ ದೇವಾಲಯ ಕಲ್ಯಾಣಿ ಚಾಲುಕ್ಯರ ಕಾಲದ ಪ್ರಮುಖ ದೇವಾಲಯ.

    ಗಂಡಭೇರುಂಡ ಸ್ತಂಭ ವಿಶೇಷವಾದ ಗಂಡಭೇರುಂಡ ಶಿಲ್ಪವಿರುವ ಸ್ತಂಭ.

   ಶಾಂತಲೆಯ ತಂದೆ ಮಾರಸಿಂಗಮಯ್ಯ ಇವರು ಶಿವಗಂಗೆ ನಾಡಿನ ಡಣಾಯಕರಾಗಿದ್ದರು. 

   ಶಾಂತಲೆಯ ತಾಯಿ ಮಾಚಿಕಬ್ಬೆ ಇವರಿಗೆ ವಿವಾಹವಾಗಿ ಬಹಳ ವರ್ಷಗಳಾದರೂ ಮಕ್ಕಳಾಗದಿದ್ದ ಕಾರಣ ದೇವರಿಗೆ ಹರಕೆ ಹೊತ್ತು, ಕಾಣಿಕೆ ತೆತ್ತು, ಭಕ್ತಿಯಿಂದ ಪ್ರಾರ್ಥಿಸಿ ಈ ಹೆಣ್ಣು ಮಗುವನ್ನು ವರವಾಗಿ ಪಡೆದರು.

  ರಾಜ ವಿಷ್ಣುವರ್ಧನನು ಮೊದಲ ಬಾರಿಗೆ ಶಿವಗಂಗೆ ನಗರದೇವತೆಯ ದೇವಾಲಯದಲ್ಲಿ ಶಾಂತಲಾ ದೇವಿಯ ನೃತ್ಯವನ್ನು ನೋಡಿ, ಆಕೆಯನ್ನು ಮನಸಾರೆ ಮೆಚ್ಚಿ, ಅವಳನ್ನು ವಿವಾಹವಾಗಲು ಇಚ್ಛಿಸಿದನು. 

  ಹೊಯ್ಸಳ ಸಾಮ್ರಾಜ್ಯದ ಚಕ್ರವರ್ತಿ ವಿಷ್ಣುವರ್ಧನ (ಬಿಟ್ಟಿದೇವ) ಮತ್ತು ರಾಣಿ ಶಾಂತಲಾದೇವಿ ಅವರ ವಿವಾಹವು 12ನೇ ಶತಮಾನದ ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಘಟನೆಯಾಗಿದೆ.

  ಬಳ್ಳಿಗಾವೆಯಲ್ಲಿ ರಾಣಿ ಶಾಂತಲೆ ನೃತ್ಯ ಮಾಡಿದ್ದಾಳೆಂಬುದಕ್ಕೆ ನೇರವಾದ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ.ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲೆ ಪ್ರಖ್ಯಾತ ನೃತ್ಯಗಾರ್ತಿಯಾಗಿದ್ದಳು, ಆದರೆ ಅವಳು ಬಳ್ಳಿಗಾವೆಯಲ್ಲಿ ನೃತ್ಯ ಮಾಡಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ.

 ಶಾಂತಲೆಯ ಸಾವಿನ ಬಗ್ಗೆ ಎರೆಡು ವೃತ್ತಾಂತಗಳು ಬೆಳಕಿಗೆ ಬಂದಿವೆ.

   ಮೊದಲನೆಯದಾಗಿ ಬೆಂಗಳೂರು ಸಮೀಪದ ಶಿವಗಂಗೆ ಬೆಟ್ಟದ ಮೇಲಿನಿಂದ ಕೆಳಬಿದ್ದು ಪ್ರಾಣ ಬಿಟ್ಟಳು ಎಂದು ಹೇಳಲಾಗುತ್ತದೆ ಆ ಸ್ಥಳವನ್ನ ಶಾಂತಲಾ ಡ್ರಾಪ್ ಎ೦ದೇ ಕರೆಯುತ್ತಾರೆ.

   ಎರಡನೆಯದಾಗಿ ರಾಣಿ ಶಾಂತಲಾ ಜೈನ ಧರ್ಮದ ಸಲ್ಲೇಖನ ವ್ರತವನ್ನು ಸ್ವೀಕರಿಸಿ ೨೧ ದಿನಗಳ ನಿರಂತರ ಉಪವಾಸದ ನಂತರ ೧೧೩೧ ರ ವಿರೋಧಿಕೃತ ಸಂವತ್ಸರದಲ್ಲಿ ಶಾಂತಲೆಯ ಆತ್ಮಜ್ಯೋತಿ ನಂದಿಹೋಯಿತು ಎಂಬ ಕಥೆಯೂ ಇದೆ.

 ಈ ಎರಡರಲ್ಲಿ ಯಾವ ವೃತ್ತಾಂತ ಸತ್ಯ ಎಂಬುದು ತಿಳಿದಿಲ್ಲ ಆದರೆ 
ಶಾಂತಲಾ ದೇವಿಯು ಶಾಲಿವಾಹನ ಶಕೆ 1131 ರಲ್ಲಿ ಶಿವಗಂಗೆಯಲ್ಲಿ " ಸಲ್ಲೇಖನ " (ಆಮರಣಾಂತ ಉಪವಾಸ) ಎಂಬ ಜೈನ ಪ್ರತಿಜ್ಞೆಯನ್ನು ಕೈಗೊಂಡಿದ್ದಕ್ಕಾಗಿ ಸಾಂಪ್ರದಾಯಿಕವಾಗಿ ಸ್ಮರಿಸಲಾಗುತ್ತದೆ.

   ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿರುವ  ಶಾಸನವು ಜೈನ ಸನ್ಯಾಸ
"ಪ್ರಭಾಚಂದ್ರ-ಸಿದ್ಧಾಂತ-ದೇವ" , ಅವಳ ಪತಿ ವಿಷ್ಣುವರ್ಧನ ಮತ್ತು ಅವಳ ತಾಯಿ "ಮಚಿಕಬ್ಬೆ" ಅವರ ಸಮ್ಮುಖದಲ್ಲಿ ಸಲ್ಲೇಖನ ಮೂಲಕ ಅವಳ ಮರಣವನ್ನು ಸ್ಪಷ್ಟವಾಗಿ ದಾಖಲಿಸುತ್ತದೆ.

   ಈ ಶಾಸನವು ಅವಳ ಧರ್ಮನಿಷ್ಠೆಯನ್ನು ಹೊಗಳುತ್ತದೆ, ಜೈನ ದೇವಾಲಯಗಳಿಗೆ ಅವಳು ನೀಡಿದ ದಾನಗಳನ್ನು ಉಲ್ಲೇಖಿಸುತ್ತದೆ ಮತ್ತು ಅವಳ ಕುಟುಂಬ ವಂಶಾವಳಿಯನ್ನು ವಿವರಿಸುತ್ತದೆ.

   ನಾಟ್ಯರಾಣಿ ವಿಷ್ಣುವರ್ದನರ ಪಟ್ಟದ ರಾಣಿ ಶಾಂತಲಾದೇವಿ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಗೆ ಬೇಟಿ ನೀಡಿ ಈ ಚರಿತ್ರೆ ಮುಂದಿನ ಪೀಳಿಗೆಗೆ ಪರಿಚಯಿಸಲು ವಿನಂತಿ.

#balligavi  #shikaripura #shivamogga #allamaprabhu #kalyanakarnataka #shantala 
#beluru #shivagange #Vishnuvardhana #shravanabelagola #hoysala

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...