Skip to main content

3596. ಡಾಕ್ಟರ್ ಕೋಣಂದೂರು ಲಿಂಗಪ್ಪ


#ಡಾಕ್ಟರ್_ಕೋಣಂದೂರುಲಿಂಗಪ್ಪ.

 ನಾಡಿನ ಪ್ರಖ್ಯಾತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಕ್ಷೇತ್ರ ತೀರ್ಥಹಳ್ಳಿಯ ಉತ್ತರಾಧಿಕಾರಿ ಆದವರು.

  ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಇವತ್ತು ಮೇ -6ರಂದು - ಬುದವಾರ ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ #ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.

   ಈ ಸಮಾರಂಭದಲ್ಲಿಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.#ಶರತ್_ಅನಂತಮೂರ್ತಿ ತಿಳಿಸಿದ್ದಾರೆ.

   ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ #ಕೋಣಂದೂರುಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ #ಕೆ_ವಿ_ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. #ಹೆಚ್_ಎ_ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದು ಘೋಷಿಸಿದ್ದಾರೆ.

#ಕೋಣಂದೂರು_ಲಿಂಗಪ್ಪ

  ಶ್ರೀ ಕೋಣಂದೂರು ಲಿಂಗಪ್ಪನವರು
ಹುಟ್ಟಿದ ಸ್ಥಳ ಶಿವಮೊಗ್ಗ ಜಿಲ್ಲೆಯ #ಕೋಣಂದೂರು.

   ಇವರ ಶೈಕ್ಷಣಿಕ ಅರ್ಹತೆ ಬಿಎ, ಬಿಎಲ್,ವೃತ್ತಿಯಲ್ಲಿ  ವಕೀಲರು 
ಸಾಮಾಜಿಕ ಮತ್ತು ಇತರ ಚಟುವಟಿಕೆಗಳಲ್ಲಿ ನಿರತರು.

 ವಿವಾಹಿತರು ಒಬ್ಬಳೇ ಮಗಳು ಇಸ್ರೋದಲ್ಲಿ ವಿಜ್ಞಾನಿ ಆಗಿದ್ದಾರೆ ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.

   ಇವರ ಪುತ್ರಿ #ಕೆ_ಎಲ್_ಶಿವಾನಿ ಇಸ್ರೋದ ಚಂದ್ರಯಾನ -3 ಯೋಜನೆಯಲ್ಲಿ ಕಾರ್ಯನರ್ವಹಿಸಿದ್ದರು.

ಇಸ್ರೋದ ಚಂದ್ರಯಾನ 3 (Chandrayaan 3) ಯೋಜನೆಯ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿದಿತ್ತು, ವಿಜ್ಞಾನಿಗಳ ಈ ಕಾರ್ಯವನ್ನು ಭಾರತೀಯರು ಕೊಂಡಾಡಿದ್ದರು ಈ ಯೋಜನೆಯಲ್ಲಿ (Chandrayaan 3) ಶಿವಮೊಗ್ಗದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸಿದ್ದು, ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿತ್ತು.

 ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಅಂಡ್‌ ಕಮಾಂಡ್‌ ನೆಟ್‌ವರ್ಕ್‌ ವಿಭಾಗದ ಡೆಪ್ಯೂಟಿ ಡೈರೆಕ್ಟರ್‌ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

   ಕೋಣಂದೂರು ಲಿಂಗಪ್ಪನವರ ಪುತ್ರಿ ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಶಿವಮೊಗ್ಗದ ಜವಾಹರಲಾಲ್‌ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ,1992ರಲ್ಲಿ ಈ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್‌ ಅಂಡ್‌ ಕಮ್ಯೂನಿಕೇಷನ್‌ ಇಂಜಿನಿಯರಿಂಗ್‌ ಪದವಿ ಪಡೆದರು,1993ರಲ್ಲಿ ಡಾ. ಯು.ಆರ್‌.ರಾವ್‌ ಅವರು ಇಸ್ರೋದ ಅಧ್ಯಕ್ಷರಾಗಿದ್ದಾಗ ಇಸ್ರೋ ಸಂಸ್ಥೆಗೆ ಸೇರಿದರು. ಅಂದಿನಿಂದ ಬಾಹ್ಯಾಕಾಶದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.

   ಕೋಣಂದೂರು ಲಿಂಗಪ್ಪರ ತಂದೆಗೆ ಕೃಷಿ ಭೂಮಿ ಇರಲಿಲ್ಲ ಆದರೆ ಅವರ ಕೃಷಿಯ ಮೇಲಿನ ಆಸಕ್ತಿ ಮತ್ತು ಕೃಷಿ ಭೂಮಿ ಹೊಂದುವ ಆಸೆ ಗಮನಿಸಿ   ಶಾಂತವೇರಿ ಗೋಪಾಲಗೌಡರು ಕೋಣಂದೂರಿನಲ್ಲಿ ಅವರಿಗೆ ಮಂಜೂರು ಮಾಡಿದ ಕೃಷಿ ಜಮೀನು ತಂದೆಯಿಂದ ಕೋಣಂದೂರು ಲಿಂಗಪ್ಪನವರು ಉಳಿಸಿಕೊಂಡಿದ್ದಾರೆ.

   ಒಂದು ದುರಂತ ಎಂದರೆ ಕೆಲವೇ ದಿನದ ಮೊದಲು ಸಮಾಜವಾದಿ ಮತ್ತು ಭೂ ಹೋರಾಟಗಳ ಮೂಲಕ ಶಾಂತವೇರಿ ಗೋಪಾಲಗೌಡರ ಉತ್ತರಾಧಿಕಾರಿ ಆದ ಕೋಣಂದೂರು ಲಿಂಗಪ್ಪನವರ ಈ ಕೃಷಿ ಜಮೀನನ್ನು ಅರಣ್ಯ ಇಲಾಖೆ ಅತಿಕ್ರಮ ಎಂದು ವಶ ಪಡಿಸಿಕೊಳ್ಳಲು ನೋಟೀಸು ನೀಡಿ ಜಮೀನು ಮಧ್ಯ ಟ್ರೆಂಚ್ ಹೊಡೆದಿದೆ.

1. ಕನ್ನಡ ಚಳುವಳಿ, ವಿದ್ಯಾರ್ಥಿ ಚಳುವಳಿ ಮತ್ತು ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು.

2. ಸಾಹಿತ್ಯದಲ್ಲಿ ಆಸಕ್ತಿ, ನಾಟಕಗಳು, ಕವನ ಸಂಕಲನ, ದಿವಂಗತ ಶ್ರೀ ಎಸ್. ಗೋಪಾಲ ಗೌಡ ಮತ್ತು ಶ್ರೀ. ಜೆ. ಹೆಚ್. ಪಟೇಲ್ ಅವರ ಭಾಷಣಗಳನ್ನು ಸಂಪಾದಿಸಿ ಪ್ರಕಟಿಸಿದರು.

3. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಐತಿಹಾಸಿಕ ನಾಟಕಗಳನ್ನು (ದುರಂತ) ಕನ್ನಡದಲ್ಲಿ ಪ್ರಕಟಿಸಿದ್ದಾರೆ ಇದು ಭಾರತೀಯ ಭಾಷೆಗಳಲ್ಲಿ ಮೊದಲನೆಯದು.

4. ಅವರು 1972 ರಲ್ಲಿ ಐದನೇ ವಿಧಾನಸಭೆಯ ಸದಸ್ಯರಾಗಿದ್ದರು.

5. ಸ್ವಾತಂತ್ರ್ಯದ ನಂತರ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಕನ್ನಡ ಚಳುವಳಿಯನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ.

6. ವಿಧಾನ ಪರಿಷತ್ತಿಗೆ ಸರ್ವಾನುಮತದಿಂದ ಆಯ್ಕೆಯಾದರು.

  ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು.

   ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು.

  ಶಾಂತವೇರಿ ಗೋಪಾಲಗೌಡರ ನಂತರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಉತ್ತರಾಧಿಕಾರಿಯಾಗಿ ಶಾಸಕರಾಗಿದ್ದವರು ಕೋಣಂದೂರು ಲಿಂಗಪ್ಪ.

   ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು ಅಲ್ಲದೆ ರಾಜ್ಯಕ್ಕೆ #ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನೂ ಮಾಡಿದ್ದರು.

  ಇವರ77ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ 2013 ರಲ್ಲಿ ಪ್ರತಿಷ್ಠಿತ "ದೇವರಾಜ ಅರಸು ಪ್ರಶಸ್ತಿ" ನೀಡಿ ಗೌರವಿಸಿದೆ. 

  ಕುವೆಂಪು ವಿಶ್ವವಿದ್ಯಾಲಯ ತನ್ನ ಘಟಿಕೋತ್ಸವದಲ್ಲಿ ಕೋಣಂದೂರು ಲಿಂಗಪ್ಪನವರಿಗೆ ಅವರ ಸಮಾಜ ಸೇವೆಗಾಗಿ ಗೌರವ #ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದೆ #ಅಭಿನಂದನೆಗಳು ಕೋಣಂದೂರು ಲಿಂಗಪ್ಪನವರಿಗೆ.

   #kuvempuuniversity #klshivani #isro #chandrayan #shivamogga #thirthahalli #shanthaverigopalgowda #konandurulingappa 
#kuvempuuniversity #doctarate #SocialistParty

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...