Skip to main content

Posts

Showing posts with the label Anandapuram railway canteen FAMOUS for idli vada of Vasanna

ಭಾಗ - 29, ಆನಂದಪುರಂನ ರೈಲು ನಿಲ್ದಾಣದ ಕ್ಯಾಂಟೀನ್ ಇಡೀ ದಕ್ಷಿಣ ಭಾರತೀಯ ರೈಲ್ವೇ ಇಲಾಖೆಯಲ್ಲಿ, ಚಿತ್ರ ನಟರು, ರಾಜಕಾರಣಿಗಳಂತ ಸೆಲೆಬ್ರಿಟಿಗಳಲ್ಲಿ ಪ್ರಸಿದ್ಧಿ ಪಡೆದದ್ದು ಇಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ವಾಸಣ್ಣರ ಕೈಚಳಕದ ವಡೆಯಿಂದ. ರಾಜಕುಮಾರ್ - ಲೋಕೇಶ್ - ರಾಮಕೃಷ್ಣ ಹೆಗ್ಗಡೆಯವರೂ ಕೂಡ ಇವರ ಕೈ ರುಚಿಗೆ ಮನ ಸೋತಿದ್ದರು.

#ಭಾಗ_29. #ಆನಂದಪುರಂ_ರೈಲು_ನಿಲ್ದಾಣ_ಪ್ರಸಿದ್ದಿಗೆ_ಬಂದಿದ್ದೇ_ವಾಸಣ್ಣನ_ವಡೆಯಿಂದ. #ಸಿನಿಮಾಕ್ಷೇತ್ರದವರು_ರಾಜಕಾರಣಿಗಳು_ಸೆಲೆಬ್ರಿಟಿಗಳು_ಅಧಿಕಾರಿಗಳು_ವಾಸಣ್ಣನ_ರೈಲ್ವೆ_ಕ್ಯಾಂಟೀನ್_ಅಭಿಮಾನಿಗಳು #ನರಸೀಪುರಗೋವಿಂದಪ್ಪ_1971ರ_ತನಕ_ಈ_ಕ್ಯಾಂಟೀನ್_ನಡೆಸಿದ್ದರು. #ದೇವರ_ಕಣ್ಣು_ಸಿನೆಮಾ_ರಾಜಕುಮಾರರ_ಅಕಸ್ಮಿಕ_ಸಿನೆಮಾ_ಆನಂದಪುರಂನಲ್ಲಿ_ಚಿತ್ರಿಕರಣ. #ರಾಜಕುಮಾರ್_ಲೋಕೇಶ್_ಅನಂತನಾಗ್_ಆರತಿ_ದೀರೆಂದ್ರಗೋಪಾಲ್_ಆಗಿನ_ಮುಖ್ಯಮಂತ್ರಿ_ರಾಮಕೃಷ್ಣಹೆಗಡೆ_##ವಾಸಣ್ಣರ_ಕೈರುಚಗೆ_ಪ್ರಶಂಸಿದ್ದರು       ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಮೂಲದ ಕೊಂಕಣಿ ದೈವಜ್ಞ ಬ್ರಾಹ್ಮಣ ವಾಸಣ್ಣ ಮತ್ತು ಪತ್ನಿ ರತ್ನಮ್ಮ ಆನಂದಪುರಕ್ಕೆ ಬಂದವರು 1971-72ರಿಂದ ಆನಂದಪುರಂ ರೈಲ್ವೆ ನಿಲ್ದಾಣದ ಕ್ಯಾಂಟೀನ್ ನಡೆಸಲು ಪ್ರಾರಂಬಿಸಿ ರೈಲು ಮಾರ್ಗ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆ ಕಾಮಗಾರಿಗಾಗಿ ಈ ರೈಲು ಮಾರ್ಗ ರದ್ದಾಗುವವರೆಗೆ ವಾಸಣ್ಣರ ಕ್ಯಾಂಟೀನ್ ಚಾಲು ಇತ್ತು.   ಆ ಕಾಲದಲ್ಲಿ ಉಗಿ ಇಂಜಿನ್ ರೈಲುಗಳಾದ್ದರಿಂದ ಈ ಮಾರ್ಗದ ಎಲ್ಲಾ ರೈಲು ಇಂಜೆನ್ ಗಳಿಗೆ ಬೇಕಾದ ನೀರು ಆನಂದಪುರಂನಲ್ಲೇ ತುಂಬಿಸಿಕೊಳ್ಳಬೇಕಾದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಾಸಣ್ಣನ ಕ್ಯಾಂಟೀನ್ ನಲ್ಲಿ ಸ್ವಾದಿಷ್ಟ ಇಡ್ಲಿ, ಉದ್ದಿನ ವಡೆ, ಮಸಾಲೆ ವಡೆ ಗಟ್ಟಿ ಚಟ್ನಿಯೊಂದಿಗೆ ತಿಂದು ಚಹ...