ಭಾಗ - 29, ಆನಂದಪುರಂನ ರೈಲು ನಿಲ್ದಾಣದ ಕ್ಯಾಂಟೀನ್ ಇಡೀ ದಕ್ಷಿಣ ಭಾರತೀಯ ರೈಲ್ವೇ ಇಲಾಖೆಯಲ್ಲಿ, ಚಿತ್ರ ನಟರು, ರಾಜಕಾರಣಿಗಳಂತ ಸೆಲೆಬ್ರಿಟಿಗಳಲ್ಲಿ ಪ್ರಸಿದ್ಧಿ ಪಡೆದದ್ದು ಇಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ವಾಸಣ್ಣರ ಕೈಚಳಕದ ವಡೆಯಿಂದ. ರಾಜಕುಮಾರ್ - ಲೋಕೇಶ್ - ರಾಮಕೃಷ್ಣ ಹೆಗ್ಗಡೆಯವರೂ ಕೂಡ ಇವರ ಕೈ ರುಚಿಗೆ ಮನ ಸೋತಿದ್ದರು.
#ಭಾಗ_29.
#ಆನಂದಪುರಂ_ರೈಲು_ನಿಲ್ದಾಣ_ಪ್ರಸಿದ್ದಿಗೆ_ಬಂದಿದ್ದೇ_ವಾಸಣ್ಣನ_ವಡೆಯಿಂದ.
#ಸಿನಿಮಾಕ್ಷೇತ್ರದವರು_ರಾಜಕಾರಣಿಗಳು_ಸೆಲೆಬ್ರಿಟಿಗಳು_ಅಧಿಕಾರಿಗಳು_ವಾಸಣ್ಣನ_ರೈಲ್ವೆ_ಕ್ಯಾಂಟೀನ್_ಅಭಿಮಾನಿಗಳು
#ನರಸೀಪುರಗೋವಿಂದಪ್ಪ_1971ರ_ತನಕ_ಈ_ಕ್ಯಾಂಟೀನ್_ನಡೆಸಿದ್ದರು.
#ದೇವರ_ಕಣ್ಣು_ಸಿನೆಮಾ_ರಾಜಕುಮಾರರ_ಅಕಸ್ಮಿಕ_ಸಿನೆಮಾ_ಆನಂದಪುರಂನಲ್ಲಿ_ಚಿತ್ರಿಕರಣ.
#ರಾಜಕುಮಾರ್_ಲೋಕೇಶ್_ಅನಂತನಾಗ್_ಆರತಿ_ದೀರೆಂದ್ರಗೋಪಾಲ್_ಆಗಿನ_ಮುಖ್ಯಮಂತ್ರಿ_ರಾಮಕೃಷ್ಣಹೆಗಡೆ_##ವಾಸಣ್ಣರ_ಕೈರುಚಗೆ_ಪ್ರಶಂಸಿದ್ದರು
ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಮೂಲದ ಕೊಂಕಣಿ ದೈವಜ್ಞ ಬ್ರಾಹ್ಮಣ ವಾಸಣ್ಣ ಮತ್ತು ಪತ್ನಿ ರತ್ನಮ್ಮ ಆನಂದಪುರಕ್ಕೆ ಬಂದವರು 1971-72ರಿಂದ ಆನಂದಪುರಂ ರೈಲ್ವೆ ನಿಲ್ದಾಣದ ಕ್ಯಾಂಟೀನ್ ನಡೆಸಲು ಪ್ರಾರಂಬಿಸಿ ರೈಲು ಮಾರ್ಗ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆ ಕಾಮಗಾರಿಗಾಗಿ ಈ ರೈಲು ಮಾರ್ಗ ರದ್ದಾಗುವವರೆಗೆ ವಾಸಣ್ಣರ ಕ್ಯಾಂಟೀನ್ ಚಾಲು ಇತ್ತು.
ಆ ಕಾಲದಲ್ಲಿ ಉಗಿ ಇಂಜಿನ್ ರೈಲುಗಳಾದ್ದರಿಂದ ಈ ಮಾರ್ಗದ ಎಲ್ಲಾ ರೈಲು ಇಂಜೆನ್ ಗಳಿಗೆ ಬೇಕಾದ ನೀರು ಆನಂದಪುರಂನಲ್ಲೇ ತುಂಬಿಸಿಕೊಳ್ಳಬೇಕಾದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಾಸಣ್ಣನ ಕ್ಯಾಂಟೀನ್ ನಲ್ಲಿ ಸ್ವಾದಿಷ್ಟ ಇಡ್ಲಿ, ಉದ್ದಿನ ವಡೆ, ಮಸಾಲೆ ವಡೆ ಗಟ್ಟಿ ಚಟ್ನಿಯೊಂದಿಗೆ ತಿಂದು ಚಹ ಕುಡಿದು ಮುಂದಿನ ಪ್ರಯಾಣ ಮಾಡಲು ಕಾಲಾವಕಾಶ ಸಿಗುತ್ತಿತ್ತು.
ಪ್ರಾರಂಭದಲ್ಲಿ ವಾಸಣ್ಣ ದಂಪತಿಗಳೇ ಎಲ್ಲಾ ಕೆಲಸ ಮಾಡಿ ಕೊಳ್ಳುತ್ತಿದ್ದರು, ಕೈಯಲ್ಲೇ ಅಕ್ಕಿ, ಉದ್ದಿನ ಬೇಳೆ ಕಲ್ಲಿನಲ್ಲಿ ರುಬ್ಬಿಕೊಳ್ಳುತ್ತಿದ್ದರು ನಂತರ ತಿಂಡಿ ಕೃಷ್ಣಣ್ಣನ ಸಹೋದರ ವೆಂಕಟೇಶ್ ಮತ್ತು ರಾಮಣ್ಣ ಸೇರಿಕೊಂಡರು.
ದೇವರ ಕಣ್ಣು ಎಂಬ ಸಿನಿಮಾ ಇದೇ ನಿಲ್ದಾಣದಲ್ಲಿ ಚಿತ್ರಿಕರಣ ಆಗಿತ್ತು ಲೋಕೇಶ್, ಅನಂತನಾಗ್ ಅಂಬರೀಷ್, ಆರತಿ, ದೀರೇಂದ್ರ ಗೋಪಾಲ್, ಶಕ್ತಿ ಪ್ರಸಾದ್, NS ರಾವ್ ತಾರಾಗಣದಲ್ಲಿ ಆಗಿನ ಖ್ಯಾತ ನಿರ್ದೇಶಕರಾದ YR ಸ್ವಾಮಿ ನಿರ್ದೇಶಿಸಿದ್ದರು ಆಗ ವಾಸಣ್ಣರ ರೈಲ್ವೆ ಕ್ಯಾಂಟೀನ್ ಕೇಂದ್ರ ಬಿಂದು ಆಗಿತ್ತು.
ಆನಂದಪುರಂ ರೈಲು ನಿಲ್ದಾಣ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ರಾಣಿಯ ಸ್ಮರಣಾಥ೯ ನಿರ್ಮಿಸಿರುವ ಇಲ್ಲಿನ ಸುಂದರ #ಚಂಪಕಸರಸ್ಸು YR ಸ್ವಾಮಿ ಚೆನ್ನಾಗಿ ಬಳಸಿಕೊಂಡಿದ್ದಾರೆ.
ವಾಸಣ್ಣ ನೀಳ ಕಾಯದ ಸ್ಪುರದ್ರೂಪಿ,ಯಾವಾಗಲೂ ಕೈಯಲ್ಲಿ ಸಿಗರೇಟು,ಹಾಸ್ಯದ ಹೊನಲು ಹರಿಸುವ ಚಟಾಕಿ ಹಾರಿಸುತ್ತ ಸುತ್ತಲಿನ ಪರಿಸರ ಲವಲವಿಕೆ ಉಂಟು ಮಾಡುತ್ತಿದ್ದ ಸ್ನೇಹ ಜೀವಿ ಆಗಿದ್ದರು ಅವರಿಗೆ ಅವರ ಸುಪ್ರಸಿದ್ದ ವಡೆಯ ರೆಸಿಪಿ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೆ ಅವರ ಪ್ರಕಾರ ಉದ್ದಿನ ಬೇಳೆ ಎಷ್ಟು ನಿದಾನವಾಗಿ ಕೈಯಲ್ಲಿ ತಿರುವುತ್ತಾ ರುಬ್ಬುತ್ತೀರೋ ಅಷ್ಟು ರುಚಿ ಬರುತ್ತದೆ ಆದರೆ ಗ್ರೈಂಡರ್ ನಲ್ಲಿ ರುಬ್ಬಿದರೆ ರುಚಿ ಮತ್ತು ವಡೆಯ ಸಂಖ್ಯೆ ಕೂಡ ಕಡಿಮೆ ಅನ್ನುತ್ತಿದ್ದರು.
ಮಗಳು ನಾಗಲಕ್ಷ್ಮಿ ಯಡೇಹಳ್ಳಿ ಸಮೀಪದ ಗೇರ್ ಬೇಸಿನ ವೆಂಕಟೇಶ ಮೇಸ್ತ್ರಿ ಪುತ್ರ ಸತೀಶ್ ರ ಜೊತೆ ವಿವಾಹ ಆಗಿ ಸಾಗರದಲ್ಲಿ ನೆಲೆಸಿದ್ದಾರೆ, ವಾಸಣ್ಣ ದಂಪತಿ ಈಗಿಲ್ಲ ಆದರೆ ಇವರ ಕೈ ರುಚಿಯ ಉಪಹಾರ ಸೇವಿಸಿದ ಅನೇಕರು ನನ್ನ ಈ ಸರಣಿ ಲೇಖನದಲ್ಲಿ ವಾಸಣ್ಣರ ಬಗ್ಗೆ ಬರೆಯುವಂತೆ ಒತ್ತಾಯಿಸುವಂತ ಜನಪ್ರಿಯತೆ ವಾಸಣ್ಣನವರದ್ದು.
1971 ಕ್ಕಿಂತ ಹಿಂದೆ ಆನಂದಪುರಂ ರೈಲು ನಿಲ್ದಾಣದ ಕ್ಯಾಂಟೀನ್ ನಡೆಸಿದವರು ನರಸೀಪುರದ ಗೋವಿಂದಪ್ಪ ಹೆಗ್ಗಡೆಯವರು ಇವರು ನರಸೀಪುರ ಖ್ಯಾತ ಆಯುರ್ವೇದ ವೈದ್ಯರಾದ ನಾರಾಯಣ ಮೂರ್ತಿ ಮತ್ತು ಶುಂಠಿ ವ್ಯಾಪಾರಿಗಳಾದ ಕೃಷ್ಣ ಮೂರ್ತಿ ಹೆಗ್ಗಡೆಯವರ ಸೋದರ ಸಂಬಂದಿಗಳು.
ನರಸೀಪುರ ಗೋವಿಂದಪ್ಪ ಗೌರಮ್ಮ ದಂಪತಿಗೆ ಲೀಲಾವತಮ್ಮ ಎಂಬ ಪುತ್ರಿ ಮತ್ತು ಲಕ್ಷ್ಮಿನಾರಾಯಣ ಎಂಬ ಪುತ್ರ.
ಮಗಳು ಲೀಲಾವತಮ್ಮ ಮತ್ತು ಅಳಿಯ ಮಡಸೂರು ಲಿಂಗದಳ್ಳಿಯ ವೆಂಕಟೇಶ್ ಗೆ ನಾಗರತ್ನ, ಚಂದ್ರಶೇಖರ್, ಕುಮಾರ ಸ್ವಾಮಿ, ಬದರಿನಾಥ, ಸುಬಾಷ್ ಮತ್ತು ಕೇಶವಮೂರ್ತಿ ಮಕ್ಕಳು ( ಕೇಶವ ಭಟ್ಟರು ಆನಂದಪುರಂನ ವಿಜಯವಾಣಿ ವರದಿಗಾರ & ಏಜೆಂಟ್) .
ಮಗ ಲಕ್ಷ್ಮೀನಾರಾಯಣರು ರೈಲ್ವೆ ಇಲಾಖೆ ಉದ್ಯೋಗಿ ಆಗಿದ್ದರು ಇವರ ಪತ್ನಿ ರುಕ್ಮಿಣಿಯಮ್ಮ, ಇವರಿಗೆ NL ಗೀತಾ ಎಂಬ ಪುತ್ರಿ ಮತ್ತು NL ಅಶೋಕ (ಹಾಲಿ ಆನಂದಪುರಂ ನಲ್ಲಿ ಇಂಜಿನಿಯರ್) ಇದ್ದಾರೆ.
ನರಸೀಪುರ ಗೋವಿಂದಪ್ಪ ಕೂಡ ಸುಮಾರು 25 ವಷ೯ ಆನಂದಪುರಂ ರೈಲ್ವೆ ಕ್ಯಾಂಟೀನ್ ನಡೆಸಿರುತ್ತಾರೆ.
ಇವತ್ತಿಗೂ ಜನ ನೆನೆಸುವ ರೈಲ್ವೆ ಕ್ಯಾಂಟೀನ್ ವಾಸಣ್ಣ ಹಣ ಆಸ್ತಿ ಗಳಿಸಲಿಲ್ಲ ಆದರೆ ಇಡೀ ದಕ್ಷಿಣ ಭಾರತ ರೈಲ್ವೆಯಲ್ಲಿ ಪ್ರಖ್ಯಾತಿಗಳಿಸಿದ್ದರು.
(ನಾಳೆ ಭಾಗ- 30)
Comments
Post a Comment