ಭಾಗ - 43, ಆನಂದಪುರಂ ಇತಿಹಾಸ, ನಾರ್ಥ ಈಸ್ಟ್ ನ ಮಿಜೋರಾಂ ನಲ್ಲಿ ಹುಟ್ಟಿ ಕರ್ನಾಟಕದ ಕೇಡರ್ ಆಗಿ ಪ್ರಸಿದ್ದ ರಾಗಿದ್ದ ಹೆಚ್.ಟಿ.ಸಾಂಗ್ಲಿಯಾನರ ಆನಂದಪುರಂ ನಿಕಟ ಸಂಬಂದಗಳು
#ಆನಂದಪುರಂ_ಇತಿಹಾಸ.
#ನಾಥ೯_ಈಸ್ಟ್_ಮಿಜೋರಾಂ_ರಾಜ್ಯದ_ಸಾಂಗ್ಲಿಯಾನರ_ಆನಂದಪುರಂ_ಸಂಬಂದ
#ಸಾಗರದಲ್ಲಿ_ಎಎಸ್ಪಿ_ಆಗಿ_ಸೇವೆಗೆ_ನಂತರ_ಶಿವಮೊಗ್ಗ_ಎಸ್ಪಿ.
#ಆನಂದಪುರಂನ_ಎಸ್ಸಾರ್ಕೆ_ಮಾಸ್ತರ_ಗೆಳೆತನ.
#ಆನಂದಪುರಂನಲ್ಲಿ_ನಡೆಯುತ್ತಿದ್ದ_ಶಾಲಾ_ಪ್ರಭಾತ್_ಪೇರಿಯಲ್ಲಿ_ಭಾಗವಹಿಸಿ_ಅವರು_ವಿದ್ಯಾರ್ಥಿಗಳಿಗೆ_ಹುರಿದುಂಬಿಸುತ್ತಿದ್ದರು.
ಹೆಚ್.ಟಿ.ಸಾಂಗ್ಲಿಯಾನ ಅಂದರೆ ಎಲ್ಲರಿಗೂ ನೆನಪಾಗುವುದು ಕನ್ನಡ ಚಲನ ಚಿತ್ರರಂಗದಲ್ಲಿ ಇವರ ಹೆಸರಲ್ಲಿ ಬಂದ ಮೂರು ಹಿಟ್ ಸಿನಿಮಾಗಳು ಆದರೆ ಆನಂದಪುರಂ ಜನತೆಗೆ ಸಾಂಗ್ಲಿಯಾನರ ಪರಿಚಯವೇ ಬೇರೆ ಕೋನದಲ್ಲಿದೆ.
1 ಜುಲ್ಯೆ 1943ರಲ್ಲಿ ಈಗಿನ ಮಿಜೋರಾಂ ರಾಜಧಾನಿ ಅಜ್ವಾಲ್ ನಲ್ಲಿ ಜನಿಸಿ ಮೇಘಾಲಯದ ಸೆಂಟ್ ಎಡ್ಮಂಡ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಐಪಿಎಸ್ ಉತ್ತೀರ್ಣರಾಗಿ 1968 ರಲ್ಲಿ ಕರ್ನಾಟಕ ಕೇಡರ್ ಆಗಿ ರಾಜ್ಯದ ಕರಾವಳಿಯ ವಿವಿದ ಠಾಣೆಗಳಲ್ಲಿ ಪ್ರೊಬೆಷನರಿ ಹುದ್ದೆ ನಿರ್ವಹಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಡಿವೈಎಸ್ಪಿ (ASP) ಪ್ರಥಮ ಹುದ್ದೆ ಸ್ವೀಕರಿಸಿದ್ದು ಇತಿಹಾಸ, ಆಗ ಸಾಗರ ಡಿವೈಎಸ್ಪಿ ವ್ಯಾಪ್ತಿ ಶಿವಮೊಗ್ಗದ ಅರ್ಧ ಜಿಲ್ಲೆ ಅಂದರೆ ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀಥ೯ಹಳ್ಳಿ ತಾಲ್ಲೂಕ್ ಸೇರಿತ್ತು.
1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಗೆ ಸ್ಪರ್ದಿಸಿದಾಗ ಅಲ್ಲಿನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸಾಂಗ್ಲಿಯಾನ ಇದ್ದರು.
1972-73ರಲ್ಲಿ ಪೋಲಿಸ್ ಜೀಪೊಂದು ಆನಂದಪುರದ ಎರೆಡೂ ಕೆರೆ ದಂಡೆ ಮೇಲೆ ನಿಲ್ಲುತ್ತಿತ್ತು ಜೀಪಲ್ಲಿ ಕುಳಿತಿದ್ದೇ ತರುಣ ಪೋಲಿಸ್ ಸಮವಸ್ತ್ರದಾರಿ ತನ್ನ ರೈಪಲ್ಲಿನಿಂದ ಕೆರೆ ಮಧ್ಯದಲ್ಲಿರುತ್ತಿದ್ದ ಕಡು ನೀಲಿ ಮೈಬಣ್ಣದ ಕೆಂಪು ಕುಕ್ಕಿನ ನೀರ ಕೋಳಿ (ರಾಮ ಕೋಳಿ) ಗೆ ಗುರಿ ಇಟ್ಟು ತನ್ನ ರೈಪಲ್ಲಿನಿಂದ ಹತ್ತಾರು ಹಕ್ಕಿ ಹೊಡೆಯುತ್ತಿದ್ದರು ಇದನ್ನು ನೋಡಲು ನೆರೆಯುತ್ತಿದ್ದ ಸ್ಥಳಿಯರು ಶಿಕಾರಿ ಮಾಡಿದ ಹಕ್ಕಿ ಕೆರೆಗೆ ಇಳಿದು ತೆಗೆದು ತಂದು ಕೊಡುತ್ತಿದ್ದರು ಅದರಲ್ಲಿ ನಾಕಾರು ಮಾತ್ರ ತೆಗೆದುಕೊಂಡು ಉಳಿದದ್ದು ತಂದವನಿಗೆ ಕೊಡುತ್ತಿದ್ದರು ಮತ್ತು ಅವನ ಶ್ರಮಕ್ಕೆ ಆ ಕಾಲದಲ್ಲಿ ಭಕ್ಷೀಸು ಬೇರೆ.
ಆಗೆಲ್ಲ ಇವರು ನಡೆಸುತ್ತಿದ್ದ ತನಿಖೆ ಎಂದರೆ ಕಳ್ಳತನ ಮಾಡಿದ ಕಳ್ಳ, ಕೊಲೆಗಾರ ತಕ್ಷಣ ಇವರ ಬಂದನಕ್ಕೆ ಒಳಗಾಗುವಂತ ಚಾಕ ಚಕ್ಯತೆ ಇವರದ್ದು ಹಾಗಾಗಿ ಇವರ ವ್ಯಾಪ್ತಿಯಲ್ಲಿ ಇವರ ಅವದಿಯಲ್ಲಿ ಕಳ್ಳತನ ಮತ್ತು ಕೊಲೆ ಪ್ರಕರಣಗಳು ಅತ್ಯಂತ ಕಡಿಮೆ ಆಗಿತ್ತು.
ಮಲೆನಾಡಿನ ಟಿಂಬರ್ ಮಾಪಿಯಾದ ಲಾರಿಗಳನ್ನು ಇವರು ಪೋಲಿಸ್ ಜೀಪಿನಲ್ಲಿ ಚೇಸ್ ಮಾಡಿದ್ದು ಆನಂದಪುರಂ ಆಸ್ಪತ್ರೆ ಎದರು ಟಿಂಬರ್ ಲಾರಿ ಟೈರ್ ಗೆ ಶೂಟ್ ಮಾಡಿ ಹಿಡಿದಿದ್ದು ಒ0ದು ರೀತಿ ಜೇಮ್ಸ್ ಬಾಂಡ್ ಸಿನಿಮಾದಂತೆ ಇತ್ತು.
ಆಗ ಆನಂದಪುರಂನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಆಗಿನ ಶಿಸ್ತಿನ ದೈಹಿಕ ಶಿಕ್ಷಕರಾದ ಸೇವಾದಳದ ಎಸ್.ಆರ್.ಕೃಷ್ಣಪ್ಪರ ಪ್ರಭಾತ್ ಪೇರಿಗಳು ಸಾಂಗ್ಲಿಯಾನರ ಮೆಚ್ಚುಗೆಗೆ ಕಾರಣ ಆಗಿತ್ತು, ರಾಷ್ಟ್ರೀಯ ಹಬ್ಬದ ಪ್ರಬಾತ್ ಪೇರಿ ನಂತರದ ಗಾರ್ಡ್ ಆಪ್ ಹಾನರ್ ಸ್ವೀಕರಿಸಿ ರಾಷ್ಟ್ರ ಧ್ವಜಾರೋಹಣ ಸಾಂಗ್ಲಿಯಾನರು ನೆರವೇರಿಸಿ ನಂತರ ಭಾಗವಹಿಸುವ ವಿದ್ಯಾರ್ಥಿ ವೃಂದ ಮತ್ತು ಈ ಅದ್ದೂರಿ ಪ್ರಬಾತ್ ಪೇರಿ ಮತ್ತು ಸಾಂಗ್ಲಿಯಾನರನ್ನು ನೋಡಲು ನೆರೆಯುತ್ತಿದ್ದ ಸಾವಿರಾರು ಆನಂದಪುರಂ ನಿವಾಸಿಗಳನ್ನು ಉದ್ದೇಶಿಸಿ ಸಾಂಗ್ಲಿಯಾನರು ಮಾಡುತ್ತಿದ್ದ ಭಾಷಣ ಅದನ್ನು ಯಥಾ ಅನುವಾದಿಸುತ್ತಿದ್ದ ಎಸ್ ಆರ್ ಕೆ ಅವರ ಕಂಚಿನ ಕಂಠ ಈಗಲೂ ನೆನಸಿಕೊಂಡರೆ ರೋಮಾಂಚನವೇ ಹಾಗಾಗಿ ಆನಂದಪುರಂ ಜನತೆಗೆ ಸಾಂಗ್ಲಿಯಾನ ಅಂದರೆ ಪ್ರೀತಿ ಮತ್ತ ಸಾಂಗ್ಗಿಯಾನರಿಗೂ ಈಗಲೂ ಆನಂದಪುರಂನವರೆಂದು ಪರಿಚಯ ಮಾಡಿಕೊಂಡರೆ ಆಷ್ಟೇ ಅಭಿಮಾನ.
ಆಗೆಲ್ಲ ಬಿಡಾಡಿ ದನಗಳು ಜಿಲ್ಲಾ ಕೇಂದ್ರ ತಾಲ್ಲೂಕ್ ಕೇಂದ್ರದಲ್ಲಿ ಬೀದಿ ತುಂಬಾ ಓಡಾಡಿಕೊಂಡಿರುತ್ತಿದ್ದವು ಇದರಿಂದ ಅಪಘಾತ ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸುವುದು ಅಸಾಧ್ಯ ಅಂತ ತೀಮಾ೯ನವಾಗಿದ್ದ ಕಾಲದಲ್ಲಿ ಸಾಂಗ್ಲಿಯಾನ ಸ್ವತಃ ಬಿಡಾಡಿ ದನಗಳನ್ನು ಹಿಡಿದು ದೊಡ್ಡಿಗೆ ಸೇರಿಸಿದಾಗ ಬಿಡಿಸಿಕೊಳ್ಳಲು ಬಂದ ಮಾಲಿಕರಿಗೆ ಕಡಕ್ ವಾರ್ನಿಂಗ್ ಮಾಡಿ ಬಿಡಾಡಿ ದನದ ಸಮಸ್ಯೆ ಬಗೆಹರಿಸಿದ್ದರು.
ಬೆಂಗಳೂರು ಪೋಲಿಸ್ ಕಮಿಷನರ್, ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಆಗಿ ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ.
ಸಾಂಗ್ಲಿಯಾನ ಇವರ ಪತ್ನಿ ಹೆಸರು ಸಿ. ರೋದನ್ ಪುಯಿ ಈ ದಂಪತಿಗಳಿಗೆ ನಾಲ್ಕು ಪುತ್ರಿಯರು ಸಾರಾ, ರೆಬೆಕಾ, ಎಲಿಜಾಬೆತ್ ಮತ್ತು ರಚೆಲ್ .
14ನೇ ಲೋಕಸಭೆಗೆ ಬಿಜೆಪಿಯಿಂದ ಬೆಂಗಳೂರಿಂದ ಆಯ್ಕೆ ಆಗಿದ್ದರು, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾದ್ಯಕ್ಷರೂ ಆಗಿದ್ದರು.
Comments
Post a Comment