ಪಶ್ಚಿಮ ಘಟ್ಟದ ಮಲೆನಾಡಿನ ರುಚಿಯಾದ ಉಪಹಾರ ಪತ್ರೋಡೆ, ಚಿತ್ರಾನ್ನಾ, ಕಾಯಿ ಹೋಳಿಗೆ, ಮಾವಿನ ಹಣ್ಣಿನ ರಸಾಯನ ಮತ್ತು ಪಿಲ್ಟ್ ರ್ ಕಾಫಿ
#ಮಾವಿನ_ಹಣ್ಣಿನ_ರಸಾಯನದ_ಜೊತೆ_ಕಾಯಿಹೋಳಿಗೆ.
#ಮರಕೆಸದ_ಎಲೆಯ_ಬಿಸಿಬಿಸಿ_ಗರಿಗರಿ_ಪತ್ರೋಡೆ
#ಗಮಗಮಿಸುವ_ಗಂಧಸಾಲೆ_ಅಕ್ಕಿಯ_ಚಿತ್ರಾನ್ನ
#ಆಹ್ಲಾದಕರ_ಹಬೆಯಾಡುವ_ಪಿಲ್ಟರ್_ಕಾಫಿ .
ನನ್ನ ಇಷ್ಟದ ಕಾಯಿ ಹೋಳಿಗೆ ಮತ್ತು ಮಾವಿನ ಹಣ್ಣಿನ ರಸಾಯನ (ಮಲ್ಲಿಕಾ ಮಾವಿನ ಹಣ್ಣು ಮತ್ತು ಆಲೇಮನೆ ಬೆಲ್ಲದೊಂದಿ ತಯಾರಿಸಿದ್ದು)
ಮರ ಕೆಸದ ಎಳೆ ಎಲೆಗಳಿಂದ ಶುದ್ಧ ಗಾಣದ ಕೊಬ್ಬರಿ ಎಣ್ಣೆ ಬಳಸಿ ಹುರಿದ ಪತ್ರೋಡೆಗಳು.
ಪರಿಮಳದ ಗಂಧಸಾಲೆ ಅಕ್ಕಿಯಲ್ಲಿ ತಯಾರಿಸಿದ ಗಮಗಮಿಸುವ ಚಿತ್ರಾನ್ನ.
ಜೊತೆಯಲ್ಲಿ ಕೋಥಾಸ್ ಕಾಫಿ .
ಗೆಳೆಯರೆ ಇದು ಇವತ್ತಿನ ಮುಂಜಾನೆಯ ಉಪಹಾರ, ಹೋಳಿಗೆ ತುಪ್ಪ ಮತ್ತು ಬಿಸಿ ಬಿಸಿ ಪತ್ರೋಡೆ ಬೆಳಗ್ಗೆಯೇ ತಮ್ಮ ಹೆಗ್ಗೋಡು ಸಮೀಪದ ತೋಟದ ಕಡೆಗೆ ಶಿವಮೊಗ್ಗದಿಂದ ಹೊರಟಿದ್ದ ಪತ್ರಕರ್ತ ಮಿತ್ರ #ಶೃಂಗೇಶ್ ಗೆ ಪ್ಯಾಕ್ ಮಾಡಿ ಕೊಟ್ಟಿದ್ದೇನೆ (ಚಿತ್ರನ್ನಾ ಮತ್ತು ಮಾವಿನ ಹಣ್ಣಿನ ರಸಾಯನ ಇನ್ನೂ ತಯಾರಾಗಿರಲಿಲ್ಲ) ರುಚಿ ವಿಮರ್ಶೆ ಅವರಿಂದ ಬರಬಹುದು.
ನನಗಂತೂ ಇವತ್ತು ಹಬ್ಬ, ಈ ಪೋಸ್ಟ್ ನೋಡಿದವರ ಪ್ರತಿಕ್ರಿಯೆಗೂ ಸ್ವಾಗತ ಇದೆ ಗೆಳೆಯರೆ.
#ಸ್ವರ್ಗಕ್ಕೆ_ಕಿಚ್ಚು_ಹಚ್ಚೆಂದದ್ದು_ಇದಕ್ಕೆ_ಅಲ್ಲವೇ?
Comments
Post a Comment