ಭಾಗ -30, ಈಗ ಮುಂಡಗೋಡಿನಲ್ಲಿರುವ ಟಿಬೆಟ್ ಕ್ಯಾಂಪ್ ಮೊದಲಿಗೆ ಮಂಜೂರಾಗಿದ್ದು ಆನಂದಪುರಂನ ಕೆಂಜಿಗಾಪುರಕ್ಕೆ ಇದು ಮುಂಡಗೋಡಿಗೆ ಹೋಗಲು ಕಾರಣ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಹೋರಾಟ ಮತ್ತು ಆಗಿನ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ಕೃಪೆ.
#ಭಾಗ_30.
#ಆನ೦ದಪುರಂನ_ಕೆಂಜಿಗಾಪುರ_ಟಿಬೆಟ್_ನಿರಾಶ್ರಿತರ_ಕೇಂದ್ರವಾಗಿ_ರಾಜ್ಯಸಕಾ೯ರ_ಘೋಷಿಸಿತ್ತು.
#ಇದನ್ನು_ಇಲ್ಲಿಂದ_ಮುಂಡಗೋಡಿಗೆ_ಬದಲಾಯಿಸಲು_ಕಾರಣ_ಕತ೯ರು_ಆಗಿನ_ಮುಖ್ಯಮಂತ್ರಿ_ಕಡಿದಾಳು_ಮಂಜಪ್ಪನವರು
#ಇದರ_ಬಗ್ಗೆ_ಆಗಿನ_ಮುಖ್ಯಮಂತ್ರಿ_ಕಡಿದಾಳು_ಮಂಜಪ್ಪರನ್ನು_ಮನವೊಲಿಸಿದ್ದು_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ.
#ಕೆಂಜಿಗಾಪುರ_ಕೇಂದ್ರವಾಗಿ_ಯಡೇಹಳ್ಳಿ_ಇರುವಕ್ಕಿ__ಹೆಬ್ಬೋಡಿ_ಅಡೂರು_ತಾವರೇಹಳ್ಳಿಯ
#ಸುಮಾರು_5000_ಎಕರೆ_ಅರಣ್ಯ_ಭೂಮಿ_ಟಿಬೆಟ್_ನಿರಾಶ್ರಿತರಿಗೆ_ಗುರುತು_ಮಾಡಲಾಗಿತ್ತು.
#ಈ_ಕಾರಣದಿಂದ_ಯಡೇಹಳ್ಳಿ_ಶಾಲಾವರಣದ_ರಂಗಮಂದಿರಕ್ಕೆ
#ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ರಂಗಮಂದಿರ_ಎಂದು_ನಾಮಕರಣ_ಮಾಡಲಾಗಿದೆ.
ಆನಂದಪುರಂ ಸಮೀಪದ ಕೆಂಜಿಗಾಪುರ ವೀರಭದ್ರೇಶ್ವರ ದೇವಸ್ಥಾನ ಪುರಾತನ ಶಿಲಾಮಯ ದೇವಸ್ಧಾನ ಇದನ್ನು ವಿಜಯನಗರದ ಅರಸು ಪ್ರೌಡ ಪ್ರತಾಪ ರಾಯರು ಕ್ರಿ.ಶ.1419ರಲ್ಲಿ ನಿರ್ಮಿಸಿದ ಶಾಸನವಿದೆ, ಈ ವೀರಭದ್ರ ದೇವರ ಭಕ್ತರು ಅಸಂಖ್ಯ, ಪ್ರತಿ ವರ್ಷ ಹೋಳಿ ಹುಣ್ಣಿಮೆಯ ರಥೋತ್ಸವಕ್ಕೆ ಬಂದು ಸೇರುವ ಮತ್ತು ಕಾಣಿಕೆ ಸಲ್ಲಿಸುವ ಆಚರಣೆ ಇದೆ.
ಇತ್ತೀಚಿಗೆ ಈ ದೇವಾಲಯ ಸಂಪೂರ್ಣ ನವೀಕರಣ ಆಗಿದೆ ಮತ್ತು ನೂತನ ಕಲ್ಯಾಣ ಮಂಟಪ ಕೂಡ ನಿರ್ಮಾಣ ಆಗುತ್ತಿದೆ ಇದಕ್ಕೆ ಮುಖ್ಯ ಕಾರಣ ಈ ದೇವರ ಭಕ್ತರೇ ಆದ ಸಮೀಪದ ತುಮರಿಕೊಪ್ಪದ ಬಂಗಾರಪ್ಪ ಗೌಡರ ಸೋದರರ ಪುತ್ರ ಮೇಘರಾಜ್ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಯಡೂರಪ್ಪರಿಗೆ ನಿಕಟವರ್ತಿ ಆಗಿರುವುದರಿಂದ ಯಡೂರಪ್ಪರಿಂದ ಕೋಟ್ಯಾಂತರ ರೂಪಾಯಿ ಅನುದಾನ ತರಲು ಸಾಧ್ಯವಾಯಿತು,ಈಗ ಮೇಘರಾಜ್ ಜಿಲ್ಲಾ ಬಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
ಚೀನಾ ದೇಶದ ಅಕ್ರಮಣದಿಂದ ಟಿಬೆಟ್ ದೇಶದ ನಿರಾಶ್ರಿತ ಬೌದ್ದರು ದಲಾಯಿ ಲಾಮ ನೇತೃತ್ವದಲ್ಲಿ ಭಾರತದಲ್ಲಿ ಆಶ್ರಯ ಕೇಳಿದಾಗ ಆಗ ಕೇಂದ್ರ ಸರ್ಕಾರ ಇವರಿಗೆ ಆಶ್ರಯ ನೀಡಿ ಕೇಂದ್ರ ಟಿಬೆಟಿಯನ್ ಆಡಳಿತ ಮಂಡಳಿ ರಚಿಸಿ (CTA) ಟಿಬೆಟಿಯನ್ನರಿಗೆ ಹಿಮಾಚಲ ಪ್ರದೇಶದ ದರ್ಮಶಾಲ, ಮೈಸೂರಿನ ಬೈಲುಗುಪ್ಪೆ ಮತ್ತು ಕಾರವಾರದ ಮುಂಡಗೋಡುನಲ್ಲಿ ಅವರಿಗೆ ಅವಕಾಶ ಮಾಡಿದೆ.
ಕಾರವಾರದ ಮುಂಡಗೋಡಿನಲ್ಲಿ 1960 ರಲ್ಲಿ CTA ಮನವಿ ಮೇರೆಗೆ ರಾಜ್ಯ ಸರ್ಕಾರ 4045 ಎಕರೆ ಅರಣ್ಯ ಭೂಮಿ ಮಂಜೂರು ಮಾಡಿದೆ ಅಲ್ಲಿ 1966 ರಲ್ಲಿ ಟಿಬೇಟ್ ಕ್ಯಾಂಪ್ ಪ್ರಾರಂಭ ಆಗಿ ಈಗ ಅಲ್ಲಿ ಶಾಲೆ, ಕಾಲೇಜು ಮತ್ತು ಆಸ್ಪತ್ರೆ ಹಾಗೂ ಬುದ್ದ ವಿಹಾರ ನಿರ್ಮಿಸಿದ್ದಾರೆ.
ಮುಂಡಗೋಡಿಗಿಂತ ಮುಂಚೆ ಇವರಿಗೆ ಸುಮಾರು 5000 ಎಕರೆ ಅರಣ್ಯ ಭೂಮಿ ಆನಂದಪುರಂ ಕೆಂಜಿಗಾಪುರ ಕೇಂದ್ರವಾಗಿಸಿ ಯಡೇಹಳ್ಳಿ, ಇರುವಕ್ಕಿ, ಅಡೂರು, ಹೆಬೋಡಿ ಮತ್ತು ತಾವರೇಹಳ್ಳಿಗಳ ಪ್ರದೇಶ ಗುರುತು ಮಾಡಲಾಗಿತ್ತು.
ಈ ಸಂದರ್ಭದಲ್ಲೇ ಸಾಗರ ತಾಲ್ಲೂಕಿನ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಮಾಡದೆ ರಾಜ್ಯ ಸರ್ಕಾರ ವಿಳಂಭ ಮಾಡುತ್ತಿದ್ದರಿಂದ ರಾಜ್ಯ ಸರ್ಕಾರದ ಗಮನ ಸೆಳೆಯಲು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಕೆಂಜಿಗಾಪುರ ಭೂಮಿ ಹೋರಾಟ ಮಾಡುತ್ತಾರೆ, ಅವರು ಟಿಬೆಟ್ ನಿರಾಶ್ರಿತರ ಪುನರ್ ವಸತಿಗೆ ವಿರೋದಿಸುವುದಿಲ್ಲ ಆದರೆ ಈ ವಿಚಾರದ ಮೂಲಕ ಸರ್ಕಾರದ ಗಮನ ಸೆಳೆಯುವುದು ಗಣಪತಿಯಪ್ಪರ ಉದ್ದೇಶ ಆಗಿರುತ್ತದೆ.
ಆಗ ಮುಖ್ಯಮಂತ್ರಿಗಳಾಗಿದ್ದ ಕಡಿದಾಳು ಮಂಜಪ್ಪರಿಗೆ ಶಿಷ್ಠ ಗಣಪತಿಯಪ್ಪರ ಮೇಲಿನ ಅಭಿಮಾನದಿಂದ ಕೆಂಜಿಗಾಪುರ ಟಿಬೆಟ್ ಕ್ಯಾಂಪ್ ಪ್ರಸ್ತಾವನೆ ರದ್ದು ಮಾಡಿ ಈಗಿನ ಮುಂಡಗೋಡಿಗೆ ವರ್ಗಾಯಿಸುತ್ತಾರೆ ಇದರಿಂದ ಕೆಂಜಿಗಾಪುರದ ದೇವಾಲಯದ ಕೆರೆ ಕೆಳಗಿನ ಜಮೀನುಗಳು ಶರಾವತಿ ಮುಳುಗಡೆ ಸಂತ್ರಸ್ಥರ ಜೊತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಜಮೀನು ಮಂಜೂರು ಆಯಿತು ಸುಮಾರು ಐದು ಸಾವಿರ ಎಕರೆ ಅರಣ್ಯ ಭೂಮಿ ಹಾಗೆಯೇ ಉಳಿಯಿತು.
ಈ ಎಲ್ಲಾ ಕಾರಣದಿಂದ 1999 - 2000 ರಲ್ಲಿ ಯಡೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಅವರಣದಲ್ಲಿ ಬಯಲು ರಂಗಮಂದಿರ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಿರ್ಮಿಸಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ನಾಮಕರಣ ಮಾಡಿದೆವು ಆಗ ಈ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ಮಹೇಶ್ ಎಲಿಗಾರ್ ಮತ್ತು ಆಗಿನ ಗ್ರಾ.ಪಂ.ಅಧ್ಯಕ್ಷರಾಗಿದ್ದ ಗಣಪತಿ ಹೆಚ್ಚಿನ ಸಹಕಾರ ನೀಡಿದ್ದರು, ಅವತ್ತಿನ ಕಾರ್ಯಕ್ರಮದಲ್ಲಿ ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾಗಿದ್ದ ಜಿ.ಮಾದಪ್ಪನವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು ಗನ್ನಿ ಸಾಹೇಬರ ಅಧ್ಯಕ್ಷತೆಯಲ್ಲಿ ಗಣಪತಿಯಪ್ಪರಿಗೆ ಸನ್ಮಾನಿಸಿದ್ದು ಈಗ ನೆನಪಿಸಿಕೊಳ್ಳಲು ನಮಗೆಲ್ಲ ಹೆಮ್ಮೆಯ ಸಂಗತಿ.
(ನಾಳೆ ಮುಂದಿನ ಭಾಗ -31)
Comments
Post a Comment