ಪ್ರಸಿದ್ದ ಲೇಖಕ, ಸಂಶೋದಕ ಮತ್ತು ಕಾದಂಬರಿಕಾರ ಅಂಬ್ರಯ್ಯ ಮಠ ಬಿದನೂರು ನಗರದಲ್ಲಿ ವಿಶ್ರಾಂತ ಜೀವನ ಮಾಡುತ್ತಿದ್ದಾರೆ ಅವರು ಬರೆದ ಕೆಳದಿ ಕುಲ ತಿಲಕ ಹಿರಿಯ ವೆಂಕಟಪ್ಪ ನಾಯಕ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ.
#ಬಿದನೂರು_ನಗರ_ವಾಸಿ_ಸಂಶೋದಕ_ಲೇಖಕ_ಅಂಬ್ರಯ್ಯ_ಮಠ #ಬರೆದ_ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪ_ನಾಯಕ_ಐತಿಹಾಸಿಕ_ಕಾದಂಬರಿ. ಕೆಳದಿ ರಾಜರಲ್ಲಿ ದೀಘ೯ ಕಾಲದ ಆಡಳಿತ ಮಾಡಿದವರು, ಹೆಚ್ಚು ರಾಜ್ಯ ವಿಸ್ತಾರ ಮಾಡಿದವರು, ಇವತ್ತಿನ ಸಾಗರ ಪಟ್ಟಣ (ಸದಾಶಿವ ಸಾಗರ) ಕಟ್ಟಿದವರು, ಆನಂದಪುರ ಎಂದು ನಾಮಕರಣ, ಚಂಪಕ ಸರಸ್ಸು ನಿಮಿ೯ಸಿದ ರಾಜ ಹಿರಿಯ ವೆಂಕಟಪ್ಪ ನಾಯಕ ಕೆಳದಿ ಇತಿಹಾಸದಲ್ಲಿ ಅಗ್ರಶ್ರೇಯಾಂಕದಲ್ಲಿ ಇದ್ದರೂ ರಾಜ ವೆಂಕಟಪ್ಪ ನಾಯಕರನ್ನ ಉದ್ದೇಶ ಪೂವ೯ಕವಾಗಿ ಕಾಣದ ಕೈಗಳು ಬದಿಗೆ ಸರಿಸಲು ಅನೇಕ ಕಾರಣ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರ ಬಗ್ಗೆ ಹೆಚ್ಚು ಮಾಹಿತಿ ಸಾವ೯ಜನಿಕರಿಗೆ ಬೇಕಾಗಿದೆ ಇಂತಹ ಒಂದು ಉಪಯುಕ್ತ ಕೆಲಸ ಮಾನ್ಯ ಅಂಬ್ರಯ್ಯ ಮಠ 2012 ರಲ್ಲಿ #ಕೆಳದಿ_ಕುಲತಿಲಕ_ಹಿರಿಯ_ವೆಂಕಟಪ್ಪನಾಯಕ ಎಂಬ ಐತಿಹಾಸಿಕ ಕಾದಂಬರಿ ಪ್ರಕಟಿಸಿದ್ದಾರೆ, ಈ ಪುಸ್ತಕ ಮೂರು ತಿಂಗಳಿಂದ ಅನೇಕ ಬಾರಿ ಕೆಲ ಅಧ್ಯಾಯಗಳನ್ನು ಓದಿ ನನಗೆ ಬೇಕಾಗಿದ್ದ ಅನೇಕ ಮಾಹಿತಿ ಮನನ ಮಾಡಿಕೊಂಡೆ. ಈ ಪುಸ್ತಕ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಯ ಜನ ಮತ್ತು ಕೆಳದಿ ಇತಿಹಾಸದ ಬಗ್ಗೆ ತಿಳಿದು ಕೊಳ್ಳುವವರು ಓದಲೇ ಬೇಕು. ಸಾಗರ ಪಟ್ಟಣ ಕಟ್ಟಿದ ರಾಜ ವೆಂಕಟಪ್ಪ ನಾಯಕರ ಹೆಸರು ಎಲ್ಲಿಯೂ ಸ್ಮಾರಕವಾಗಿ ಸಾಗರದಲ್ಲೇ ಇಲ್ಲ!! ಎಂದರೆ ಅಥ೯ವಾದೀತು ರಾಜ ಮನೆತನದ ಹುನ್ನಾರ, ಅಂತರ್ ಜಾತಿ...