4106.ವ್ಯಾಸ_ಪೂರ್ಣಿಮೆ. ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ."ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ.
ವ್ಯಾಸ_ಪೂರ್ಣಿಮೆ.
ಈ ದಿನವನ್ನು 'ವೇದ ವ್ಯಾಸರ' ಜನ್ಮದಿನವಾಗಿಯೂ ಆಚರಿಸಲಾಗುತ್ತದೆ.
"ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||"
ಗುರು ಪೂರ್ಣಿಮೆಯು ಕೇವಲ ಒಂದು ದಿನದ ಹಬ್ಬವಲ್ಲ ಅದು ಪ್ರತಿಯೊಬ್ಬರ ಜೀವನದಲ್ಲೂ ಜ್ಞಾನದ ಮೌಲ್ಯವನ್ನು ಮತ್ತು ಗುರುವಿನ ಸ್ಥಾನವನ್ನು ನೆನಪಿಸುವ ಪವಿತ್ರವಾದ ಆಚರಣೆ.
ಜನ್ಮ ನೀಡಿದ ತಾಯಿ ಮತ್ತು ತಂದೆಯನ್ನು ಮೊದಲ ಗುರುಗಳೆಂದು ಸ್ಮರಿಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.
ನಾಲ್ಕು ವೇದಗಳನ್ನು ವಿಭಾಗಿಸಿ, ಮಹಾಭಾರತ, ಅಷ್ಟಾದಶ ಪುರಾಣಗಳನ್ನು ರಚಿಸಿದ ಮಹರ್ಷಿ ವೇದವ್ಯಾಸರನ್ನು ಜಗತ್ತಿನ ಪ್ರಥಮ ಗುರು ಎಂದು ಪರಿಗಣಿಸಿ ಈ ದಿನ ಅವರಿಗೆ ನಮನ ಸಲ್ಲಿಸಲಾಗುತ್ತದೆ.
ಗುರು ಪೂರ್ಣಿಮೆ ಎಂದರೆ ನಮಗೆ ತಕ್ಷಣ ನೆನಪಾಗುವುದು ಮಹರ್ಷಿ ವೇದವ್ಯಾಸರು ಅವರು ಸನಾತನ ಧರ್ಮದ ಜ್ಞಾನ ಪರಂಪರೆಗೆ ವೇದವ್ಯಾಸರು ನೀಡಿದ ಕೊಡುಗೆ ಅಪಾರ ಮತ್ತು ಅಪ್ರತಿಮ.
ಅಷ್ಟಕ್ಕೂ ವೇದವ್ಯಾಸರು ಯಾರು? ಅವರ ಮಹತ್ವವೇನು? ಇಲ್ಲಿದೆ ಒಂದು ಕಿರು ನೋಟ...
ವೇದವ್ಯಾಸರ ಮೂಲ ಹೆಸರು 'ಕೃಷ್ಣ ದ್ವೈಪಾಯನ'
ಇವರು ಮಹರ್ಷಿ ಪರಾಶರ ಮತ್ತು ಸತ್ಯವತಿಯ ಪುತ್ರ.
ಒಮ್ಮೆ ಪರಾಶರರು ಯಮುನಾ ನದಿಯನ್ನು ದಾಟಬೇಕಾದಾಗ, ದೋಣಿ ನಡೆಸುತ್ತಿದ್ದ ಸತ್ಯವತಿಯನ್ನು (ಮತ್ಸ್ಯಗಂಧಿ) ಭೇಟಿಯಾಗುತ್ತಾರೆ.
ತಮ್ಮ ದಿವ್ಯಜ್ಞಾನದಿಂದ ಸತ್ಯವತಿಯ ಗರ್ಭದಲ್ಲಿ ಜಗತ್ತಿಗೆ ಬೆಳಕು ನೀಡುವ ಮಹಾಪುರುಷನು ಜನ್ಮತಾಳಲಿದ್ದಾನೆ ಎಂಬುದನ್ನು ಅರಿತ ಪರಾಶರರು, ಆಕೆಯ ಸಮ್ಮತಿಯಂತೆ ಮಗುವನ್ನು ಅನುಗ್ರಹಿಸುತ್ತಾರೆ.
ಆ ಮಗುವೇ ಮುಂದೆ ವೇದಗಳನ್ನು ವಿಂಗಡಿಸಿದ ಮಹರ್ಷಿ ವೇದವ್ಯಾಸರು.
ಇವರು ಕಪ್ಪು ವರ್ಣದವರಾಗಿದ್ದು, ದ್ವೀಪವೊಂದರಲ್ಲಿ ಜನ್ಮತಾಳಿದ್ದರಿಂದ ಇವರಿಗೆ 'ಕೃಷ್ಣ ದ್ವೈಪಾಯನ' ಎಂಬ ಹೆಸರು ಬಂದಿತು.
'ವೇದವ್ಯಾಸ' ಎಂಬ ಹೆಸರು ಹೇಗೆ ಬಂತು?...
ಪ್ರಾಚೀನ ಕಾಲದಲ್ಲಿದ್ದ ಅಪಾರವಾದ ಜ್ಞಾನರಾಶಿಯಾದ ವೇದಗಳನ್ನು ನಾಲ್ಕು ಭಾಗಗಳಾಗಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ವಿಂಗಡಿಸಿ, ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳೀಕರಿಸಿದ ಕಾರಣಕ್ಕೆ ಇವರಿಗೆ 'ವೇದವ್ಯಾಸ' ವೇದಗಳನ್ನು ವಿಂಗಡಿಸಿದವರು ಎಂಬ ಅಭಿದಾನ ಒಲಿಯಿತು.
ವೇದವ್ಯಾಸರ ಮುಖ್ಯ ಕೊಡುಗೆಗಳು
ಮಹಾಭಾರತ ರಚನೆ,
ಜಗತ್ತಿನ ಅತಿ ದೊಡ್ಡ ಕಾವ್ಯವಾದ 'ಮಹಾಭಾರತ'ವನ್ನು ರಚಿಸಿದವರು ಇವರೇ.
ಭಗವಾನ್ ಶ್ರೀ ಗಣೇಶನ ಸಹಾಯದಿಂದ ಈ ಮಹಾಕಾವ್ಯ ಲಿಖಿತ ರೂಪ ಪಡೆಯಿತು.
#ಶ್ರೀಮದ್ಭಗವದ್ಗೀತೆ ಜಗತ್ತಿಗೆ ಜೀವನ ಧರ್ಮವನ್ನು ಬೋಧಿಸುವ ಭಗವದ್ಗೀತೆಯು ಮಹಾಭಾರತದ ಭೀಷ್ಮ ಪರ್ವದ ಭಾಗವಾಗಿದ್ದು, ವ್ಯಾಸರ ಕೊಡುಗೆಯಾಗಿದೆ.
18 ಮಹಾಪುರಾಣಗಳು ಮತ್ತು ಉಪನಿಷತ್ತುಗಳ ಸಾರವಾದ 'ಬ್ರಹ್ಮಸೂತ್ರ'ಗಳನ್ನು ರಚಿಸಿ ಆಧ್ಯಾತ್ಮಿಕ ಚಿಂತನೆಗೆ ಭದ್ರ ಬಾದಾದಿ ಹಾಕಿಕೊಟ್ಟರು.
ಈ ಜಗತ್ತಿನಲ್ಲಿರುವ ಎಲ್ಲ ಜ್ಞಾನವೂ ಈಗಾಗಲೇ ವ್ಯಾಸರಿಂದ ಸ್ಪರ್ಶಿಸಲ್ಪಟ್ಟಿದೆ ಅಥವಾ ಹೇಳಲ್ಪಟ್ಟಿದೆ. ಜಗತ್ತಿನ ಯಾವುದೇ ತತ್ತ್ವಶಾಸ್ತ್ರವಾಗಲಿ, ಆಧ್ಯಾತ್ಮಿಕ ಚಿಂತನೆಯಾಗಲಿ ವ್ಯಾಸರ ಬರವಣಿಗೆಯ ಹೊರತಾಗಿಲ್ಲ!
ಆಷಾಢ ಮಾಸದ ಪೂರ್ಣಿಮೆಯ ದಿನದಂದು ವೇದವ್ಯಾಸರು ಜನ್ಮತಾಳಿದರೆಂಬ ನಂಬಿಕೆಯಿದೆ ಆದ್ದರಿಂದ ಈ ದಿನವನ್ನು 'ವ್ಯಾಸ ಪೂರ್ಣಿಮೆ' ಅಥವಾ 'ಗುರು ಪೂರ್ಣಿಮೆ'ಯಾಗಿ ಜಗತ್ತಿನಾದ್ಯಂತ ಪೂಜಿಸಲಾಗುತ್ತದೆ.
ಸನಾತನ ಧರ್ಮದ ಜ್ಞಾನದೀಪವನ್ನು ಬೆಳಗಿಸಿದ ಮಹರ್ಷಿ ವೇದವ್ಯಾಸರಿಗೆ ನಮ್ಮ ಶತಕೋಟಿ ಪ್ರಣಾಮಗಳು, ಗುರು ಪೂರ್ಣಿಮೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ದಿನ.
ಇದು ನಮಗೆ ಅಜ್ಞಾನದ ಕತ್ತಲೆಯನ್ನು ದೂರಗೊಳಿಸಿ, ಜ್ಞಾನದ ಬೆಳಕನ್ನು ತೋರುವ ಪ್ರತಿಯೊಬ್ಬ ಗುರುವಿಗೆ ಕೃತಜ್ಞತೆ ಮತ್ತು ಗೌರವವನ್ನು ಸಲ್ಲಿಸುವ ವಿಶೇಷ ಪರ್ವಕಾಲ.
ಗುರು ಪೂರ್ಣಿಮೆಯ ಮಹತ್ವ
ಗುರು ಎಂದರೆ ಯಾರು?...
'ಗು' ಎಂದರೆ ಅಂಧಕಾರ (ಅಜ್ಞಾನ), 'ರು' ಎಂದರೆ ಅದನ್ನು ಹೋಗಲಾಡಿಸುವವನು. ಜೀವನದ ಸರಿಯಾದ ಹಾದಿಯನ್ನು ತೋರಿಸುವ ಪ್ರತಿಯೊಬ್ಬ ಮಾರ್ಗದರ್ಶಕನೂ ಗುರುವೇ.
ಬೌದ್ಧ ಧರ್ಮೀಯರ ನಂಬಿಕೆಯಂತೆ ಗೌತಮ ಬುದ್ಧನು ಜ್ಞಾನೋದಯದ ನಂತರ ತನ್ನ ಮೊದಲ ಐದು ಜನ ಶಿಷ್ಯರಿಗೆ ಸಾರನಾಥದಲ್ಲಿ ಮೊದಲ ಉಪದೇಶ (ಧರ್ಮಚಕ್ರ ಪ್ರವರ್ತನ) ನೀಡಿದ್ದು ಇದೇ ದಿನ.
ಜೈನ ಪರಂಪರೆಯಲ್ಲಿ, ಮಹಾವೀರರು ತಮ್ಮ ಮೊದಲ ಶಿಷ್ಯರಾದ ಗೌತಮ ಗಂಧರರಿಗೆ ಜ್ಞಾನ ಬೋಧನೆ ಮಾಡಿದ ದಿನವಿದು.
ಶಿಷ್ಯರು ತಮ್ಮ ಗುರುಗಳನ್ನು ಭೇಟಿ ಮಾಡಿ, ಪಾದಪೂಜೆ ನೆರವೇರಿಸಿ, ಅವರ ಆಶೀರ್ವಾದ ಪಡೆಯುತ್ತಾರೆ.
ಮಠ ಮತ್ತು ಆಶ್ರಮಗಳಲ್ಲಿ ವಿಶೇಷ ಪೂಜೆ, ಹೋಮ, ವೇದ ಪಾರಾಯಣ ಹಾಗೂ ಭಜನೆಗಳು ಜರುಗುತ್ತವೆ.
#Vedavyasa #GuruPurnima #SanatanaDharma #IndianHistory #Mahabharata #SpiritualWisdom #KannadaPost
Comments
Post a Comment