Blog number 1121. ಭಾಗ - 6. ಆನಂದಪುರಂ ಸಾಹಿತ್ಯ ಹಬ್ಬ, ನನ್ನ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯoಜನ ಪುಸ್ತಕದ ಅವಲೋಕನ ಖ್ಯಾತ ಸಾಹಿತಿ, ಅಂಕಣಗಾರ , ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರಿಂದ.
#ಭಾಗ_6. #ಆನಂದಪುರಂ_ಸಾಹಿತ್ಯ_ಹಬ್ಬ #ನನ್ನ_ಕಥಾ_ಸಂಕಲನ_ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳ_ಅವಲೋಕನ #ಖ್ಯಾತ_ಸಾಹಿತಿ_ಶಿಕ್ಷಣ_ತಜ್ಞ_ಅರವಿಂದ_ಚೊಕ್ಕಾಡಿಯವರಿಂದ. ಈ ಕಥಾ ಸಂಕಲನ ಮುದ್ರಣಕ್ಕೆ ಮುನ್ನ ಪೂರ್ತಿ ಓದಿ ಮುನ್ನುಡಿ ಬರೆದವರು ಅರವಿಂದ ಚೊಕ್ಕಾಡಿ ಅವರು ಅವರಿಂದಲೇ ಸಾಹಿತ್ಯ ಪರಿಷತ್ತು ಅವಲೋಕನ ಕಾಯ೯ಕ್ರಮ ಅಳವಡಿಸಿದ್ದರಿಂದ ನನ್ನ ಕಥಾ ಸಂಕಲನಕ್ಕೊಂದು ಗರಿ ಕೂಡ. ಈ ಕಥಾ ಸಂಕಲನಕ್ಕೆ ಶಿರ್ಷಿಕೆ ಯಾವುದೆಂದು ನಿಗದಿ ಮಾಡಿರಲಿಲ್ಲ, ಆಗ ಮುನ್ನುಡಿ ಬರೆದ ಅರವಿಂದ ಚೊಕ್ಕಾಡಿ ಅವರಿಗೆ ಬಿಲಾಲಿ ಬಿಲ್ಲಿ ಕಥೆ ಹೆಚ್ಚು ಇಷ್ಟವಾದದ್ದರಿಂದ ಈ ಕಥಾ ಸಂಕಲನಕ್ಕೆ ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಅಂತಲೇ ಶಿರ್ಷಿಕೆ ಇಟ್ಟಿದ್ದು. ಈ ಕಥೆಯ ಕಥಾನಾಯಕಿ ಬಿಲಾಲಿ ಬಿಲ್ಲಿ ನಮ್ಮ ಮನೆಯ ಬೆಕ್ಕು ಅದು ಈಗಿಲ್ಲ ಅದರ ಪೋಟೋ ಕಥಾ ಸಂಕಲನದ ಮುಖಪುಟದಲ್ಲಿದೆ. ತಾಕತ್ ಬೊಂಡಾ ....ಸಾಹಿತ್ಯದ ಆಳಕ್ಕೆ ಇಳಿಯದೆ ಅನುಭವದ ಆಳಕ್ಕಿಳಿದು ಈ ಕಥೆಗಳು ರಚನೆ ಆಗಿದೆ ಅಂತ ಅವರು ಗ್ರಹಿಸಿದ್ದು ಮತ್ತು ಈ ಕಥೆಯ ಪಾತ್ರದಾರಿಗಳೆಲ್ಲ ಇಲ್ಲಿಯೇ ಓಡಾಡುತ್ತಿದ್ದಾರೆ.... ಹೀಗೆ ಕಥಾ ಸಂಕಲದ ಅವಲೋಕನದ ವಿಡಿಯೋ ಇಲ್ಲಿದೆ. ಈ ಕಥಾ ಸಂಕಲನಕ್ಕೆ ಅರವಿಂದ ಚೊಕ್ಕಾಡಿ ಅವರು ಬರೆದ ಮುನ್ನುಡಿ ಕೂಡ ...