Blog number 1678. ಸಿದ್ದ ಸಮಾದಿ ಯೋಗ ಸಂಸ್ಥೆ 2008ರಲ್ಲಿ ನೀಡಿದ ತರಬೇತಿ, ಶ್ರಾವಣ ಮಾಸದ ಆಚರಣೆ ಮತ್ತು ಧ್ಯಾನದ ಉಪಯೋಗ
#ಶ್ರಾವಣ_ಮಾಸ_ಬಂದಾಗ. #ಈ_ವರ್ಷ_ಅಧಿಕ_ಶ್ರಾವಣದ_ಬೋನಸ್ #ತೂಕ_ಇಳಿಸುವವರಿಗೆ_ದೇಹ_ಡಿಟಾಕ್ಸ್_ಮಾಡುವವರಿಗೆ_ವರದಾನ. #ದ್ಯಾನ_ಸರಿಯಾಗಿ_ಗುರು_ಮೂಲಕ_ಕಲಿತು_ಅನುಭವಿಸಿದರೆ_ಮಾತ್ರ_ಅದರ_ಅನುಭವ_ಸಾಧ್ಯ. ಪ್ರತಿ ವರ್ಷ ಶ್ರಾವಣ ಮಾಸ ಬಂದಾಗ ನಾನು ನನ್ನ ದೇಹ ಡಿಟಾಕ್ಸ್ ಮಾಡುವ ಕ್ರಮ ಪ್ರಾರಂಬಿಸುತ್ತೇನೆ ಅದಕ್ಕಾಗಿ ಶ್ರಾವಣ ಮಾಸ ಕಾಫಿ ಟೀ ಕೂಡ ಸೇವಿಸುವುದಿಲ್ಲ. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾಂಸಹಾರಿ ಕುಟುಂಬಗಳು ಮಾಂಸಹಾರ ತ್ಯಜಿಸುವುದು ಆ ಕುಟುಂಬದವರಿಗೆ ಇಂತಹ ಪ್ರಯೋಗ ಮಾಡಲು ಸಹಕಾರಿ. ಮಧ್ಯಪಾನ - ದೂಮಪಾನ - ತಂಬಾಕು - ಮಾಂಸಹಾರ ಸೇವನೆ ಶ್ರಾವಣ ಪ್ರಾರಂಭದ ಹಿಂದಿನ ದಿನದ ಭೀಮನ ಅಮಾವಾಸ್ಯೆ ದಿನಕ್ಕೆ ಕೊನೆಯಾಗುತ್ತದೆ ಇದನ್ನು ಮಹಾರಾಷ್ಟ್ರದಲ್ಲಿ ಗಟಾರ ಅಮವಾಸ್ಯೆ ಎಂದು ಹಾಸ್ಯದಿಂದ ಉಲ್ಲೇಖಿಸುತ್ತಾರೆ. ಇಡೀ ಶ್ರಾವಣ ಮಾಸ ಮಧ್ಯಪಾನ,ದೂಮಪಾನ ಮತ್ತು ಗುಟ್ಕಾ ಇತ್ಯಾದಿ ರೀತಿಯ ಚಟ ಅಥವ ಅಡಿಕ್ಷನ್ ಸ್ವಯಂ ನಿಯಂತ್ರಣಕ್ಕೆ ಕಾರಣವಾಗಲಿದೆ. ಮಹಾರಾಷ್ಟ್ರದಲ್ಲಿ ಶ್ರಾವಣ ಮುಗಿದು ಗಣಪತಿ ಹಬ್ಬದ ತನಕ ಈ ನಿಯಮ ಮುಂದುವರಿಸುತ್ತಾರೆ. ನನ್ನ 140 ಕಿಲೋ ದೇಹ ತೂಕ ಇಳಿಸುವ ನಿಟ್ಟಿನಲ್ಲಿ ದಿನದ ಒಂದು ಗಂಟೆ ಬೆಳಗಿನ ನಡಿಗೆ ಜೊತೆ ಸಿದ್ದ ಸಮಾದಿಯೋಗದ ವ್ಯಾಯಾಮ, ಪ್ರಾಣಯಾಮ, ಕಪಾಲ ಬಾತಿ ಮತ್ತು ಧ್ಯಾನ, ರಾತ್ರಿ ಊಟ ತ್ಯಜಿಸಿದರ ಜೊತೆ ಶ್ರಾವಣ ಮಾಸಾಚಾರಣೆ ನನಗೆ ತುಂಬಾ ಉಪಯ...