ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ ಹೆಚ್ ಡಿ ಮಾಗ೯ದಶ೯ಕರಾದ ಡಾ. ಜನಾದ೯ನ ಭಟ್ಟರು ಮಾಡಿರುವ ಬೆಸ್ತರ ರಾಣಿ ಚ೦ಪಕಾ ವಿಮಷೆ೯ - 10
#ನಾನೆಲ್ಲಿ_ನನ್ನ_ಚೊಚ್ಚಲ_ಕಾದಂಬರಿ_ಎಲ್ಲಿ_ಇದನ್ನು_ವಿದ್ವಾ೦ಸರು_ವಿಮಷಿ೯ಸುತ್ತಾರೆಂದರೆ ನನಗೆ ನನ್ನನ್ನೇ ನಂಬಲಾಗುತ್ತಿಲ್ಲ?! #ಡಾ_ಜನಾದ೯ನ_ಭಟ್ಟರು ಬರಹಗಾರರು, ವಿಮಷ೯ಕರು ಅವರ ಬಳಗ ದೊಡ್ಡದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಮೆಮೋರಿಯಲ್ ರೀಸಚ್೯ ಸೆಂಟರ್ ನಲ್ಲಿ ಪಿ.ಹೆಚ್.ಡಿ. ಮಾಗ೯ದಶ೯ಕರಾಗಿ ದೊಡ್ಡ ಹುದ್ದೆ ನಿವ೯ಹಿಸುತ್ತಿದ್ದಾರೆ. ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿಯವರ ಮೊದಲ ವಿಮಶೆ೯ ಇವರಿಗೆ ಈ ಪುಸ್ತಕ ಓದಲು ಪ್ರೇರೇಪಿಸಿದೆ. ತಮ್ಮ ಕಾಯಾ೯ಭಾರದ ಸಮಯ ಅಭಾವದಲ್ಲೂ ಸಮಯ ಹೊಂದಿಸಿ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಆಗಿದೆ. ಕುಂಬಳೆಯ ಅನಂದಪುರದ ಕೊಳದಲ್ಲಿ ರಹಸ್ಯವಾಗಿ ನಿಧಿ ಇದೆ ಎಂಬ ಬಗ್ಗೆ ಕೇಂದ್ರದ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ ಸಂಶೋದನೆಗಾಗಿ 15 ಲಕ್ಷ ಹಣ ಮಂಜೂರು ಮಾಡಿದೆ ಅಂತ ಕುಂಬಳೆಯ ಅರಮನೆ ವಂಶಸ್ಥರಾದ ರಮಾಕಾಂತ ಕುಂಬಳೆ ಈ ಪುಸ್ತಕದ ಬಗ್ಗೆ ಅವರಲ್ಲಿ ಹೋಗಿ ಚಚಿ೯ಸಿದಾಗ ತಿಳಿಸಿದ್ದರು. ಸಂಶೋದಕರಿಗೆ ಕೆಳದಿ ಇತಿಹಾಸದ ಇನ್ನೊಂದು ಆಸಕ್ತಿಕರ ವಿಷಯ ಇದೆ ಅದೇನೆಂದರೆ ಕೆಳದಿ ರಾಜ ಮನೆತನ ಲಿಂಗಾಯಿತ ವೀರಶೈವರಾಗಿದ್ದದ್ದು ಅಂತ್ಯದಲ್ಲಿ ರಾಮಕ್ಷತ್ರಿಯರಾಗುತ್ತದೆ ಇದು ಇನ್ನೊಂದು ಪುಸ್ತಕ ಬರೆಯುವಷ್ಟು ಇದೆ. ಅವರ ವಸ್ತು ನಿಷ್ಟ ವಿಮಷೆ೯ ನಿಮಗಾಗಿ #ಶಿವಮೊಗ್ಗ_ಜಿಲ್ಲೆಯ_ಆನಂದಪುರಂನ_ಕೆ_ಅರುಣಪ...