Skip to main content

Posts

Showing posts with the label For awareness of Lokayukta and Right to information act I made Bullock cart yatra through out sagar and Hosanagara taluk in 2011

Blog number 1411. ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಉಪಯೋಗವನ್ನು ಜನರಿಗೆ ತಿಳಿಸುವ ಜನ ಜಾಗೃತಿ ಜಾಥ ನಾನು 2011ರಲ್ಲಿ ಎತ್ತಿನ ಗಾಡಿ ಮೇಲೆ ಸಾಗರ ವಿಧಾನಸಭಾ ಕ್ಷೇತ್ರದಾದ್ಯಂತ ನಡೆಸಿದ್ದು ಒ0ದು ನೆನಪು.

#2011 ರ ನನ್ನ ಎತ್ತಿನ ಗಾಡಿ ಯಾತ್ರೆಯಲ್ಲಿ ಶರಾವತಿ ನದಿ ದಾಟಿಸುವ ತುಮರಿಯ ಲಾಂಚ್ ನವರು ಎತ್ತಿನ ಗಾಡಿ ಸಾಗಿಸಲು ನಿರಾಕರಿಸಿದ್ದರು!.     2011ರಲ್ಲಿ ನಾನು ಮತ್ತು ನನ್ನ ಗೆಳೆಯರು ಸೇರಿ ಮಾಹಿತಿ ಹಕ್ಕು ಮತ್ತು ಲೋಕಾಯುಕ್ತದ ಜನ ಜಾಗೃತಿಗಾಗಿ ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯ೦ತ ಸುಮಾರು ಏಳು ದಿನ ಎತ್ತಿನ ಗಾಡಿಯಲ್ಲಿ ಜಾತ ನಡೆಸಿದ್ದೆವು,ಬೆಳೆಗ್ಗೆಯಿಂದ ರಾತ್ರಿ ತನಕ ಅನೇಕ ಸಭೆಗಳು ನಡೆಸಿದೆವು.    ಸ್ಥಳಿಯ ಪ್ರಗತಿ ಪರ ಚಿಂತನೆಯವರು, ಸಂಘಟನೆಗಳು ನಮಗೆ ಬೆಂಬಲಿಸಿ ಸಹಕರಿಸಿದರು, ಮಾಹಿತಿ ಹಕ್ಕಿನಲ್ಲಿ ಅಜಿ೯ಸಲ್ಲಿಸಿ ಮಾಹಿತಿ ಪಡೆಯುವುದು, ದಾಖಲೆ ಸಮೇತ ಅವ್ಯವಹಾರಗಳನ್ನ ಲೋಕಾಯುಕ್ತಕ್ಕೆ ಹೇಗೆ ದೂರು ನೀಡುವುದು ಇತ್ಯಾದಿ ಮಾಹಿತಿ ನೀಡುತ್ತಾ ಹೋಗಿದ್ದು ಒಂದು ವಿಶಿಷ್ಟ ಅನುಭವ.     ರಾಜಕೀಯ ಗುರುಗಳಾದ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಎತ್ತಿನ ಗಾಡಿಯಲ್ಲಿ ಗಾದಿ ಹಾಸಿ ಕುಳಿತುಕೊಳ್ಳಬಾರದು ಕೇವಲ ಕಂಬಳಿ ಹಾಸಿ ಕುಳಿತು ಈ ಯಾತ್ರೆ ಮುಗಿಸಲು ತಾಕೀತು ಮಾಡಿದ್ದರು ಅದರಂತೆ ಮಾಡಿದೆ, ಹೊಸನಗರದಲ್ಲಿ ನನ್ನ ಗಾಡಿ ಏರಿದ ಮಾಜಿ ಜಿ.ಪಂ.ಸದಸ್ಯ ಗೆಳೆಯ ಬಿ.ಪಿ. ರಾಮಚಂದ್ರ ಕುಳಿತು ಕೊಳ್ಳಲಾಗದೆ ಇಳಿದರು, ನೀವು ಹ್ಯಾಗೆ 8 ದಿನದಿಂದ ಗಾಡಿಲಿ ಕುಳಿತೇ ಇದ್ದಿರಾ ಅಂತ ಆಶ್ಚಯ೯ ಪಟ್ಟರು ಹಾಗಂತ ನನಗೆ ಸಲೀಸಾಗಿತ್ತು ಪ್ರಯಾಣ.      ಎತ್ತಿ...