Skip to main content

Posts

Showing posts with the label local people can collect and publish their village history

Blog number 1917. ಬಿದ್ದು ಮಣ್ಣು ಸೇರಿರುವ ಶಿಲಾ ಶಾಸನ ಎತ್ತಿಡುವ ಕೆಲಸಕ್ಕೆ ಸ್ಥಳಿಯರು ಮುಂದಾಗಬೇಕು, ಪ್ರತಿ ಊರಿಗೂ ಇತಿಹಾಸ ಇದೆ ಆಯಾ ಊರಿನವರು ಅದನ್ನು ಸಂಗ್ರಹಿಸಿ ಪುಸ್ತಕ ಮಾಡುವ ಮೂಲಕ ಅವರವರ ಊರಿನ ಇತಿಹಾಸ ಚರಿತ್ರೆಯಲ್ಲಿ ಸೇರಿಸಲಿ.

#ಸಾಗರದ_ಪ್ರತಿಷ್ಟಿತ_ಇಂದಿರಾಗಾಂಧಿ_ಪದವಿ_ಕಾಲೇಜಿನ #ಇತಿಹಾಸ_ಉಪನ್ಯಾಸಕರಾದ_ನೇಂದ್ರಪ್ಪ_ನನ್ನ_ಅತಿಥಿಗಳು  #ನಿಮ್ಮ_ಊರಿನ_ಇತಿಹಾಸ_ನೀವು_ಸಂಗ್ರಹಿಸಿ_ನೀವೊಂದು_ಪುಸ್ತಕ_ಮಾಡಿ. #ಅದು_ನಿಮ್ಮ_ಊರಿನ_ದಾಖಲೆಯಾಗಿ_ಮುಂದಿನ_ಸಾವಿರಾರು_ವರ್ಷಕ್ಕೂ_ಉಳಿದೀತು #ಇಲ್ಲದಿದ್ದರೆ_ನಿಮ್ಮ_ಊರಿನ_ಅಪೂರ್ವ_ಇತಿಹಾಸ_ಚರಿತ್ರೆಯಲ್ಲಿ_ಕಳೆದು_ಹೋಗಲಿದೆ #ಚರಂಡಿಯ_ಕಲ್ಲಾಗಿರುವ_ಶಾಸನಗಳು. #ಮಣ್ಣಲ್ಲಿ_ಬಿದ್ದಿರುವ_ಶಿಲಾಶಾಸನ_ಎತ್ತಿ_ನಿಲ್ಲಿಸುವ_ಅಭಿಯಾನ_ಸ್ಥಳಿಯರಿಂದ_ಎಲ್ಲೆಡೆ_ಪ್ರಾರಂಭವಾಗಲಿ #ನಮ್ಮ_ಆನಂದಪುರಂ_ಇತಿಹಾಸ_ಪುಸ್ತಕ_ಆಗುತ್ತಿದೆ #ಇಂತಹ_ಅಮೂಲ್ಯ_ಕೆಲಸಕ್ಕೆ_ಮುಂದಾಗುವವರಿಗೆ_ನನ್ನ_ಮಾರ್ಗದರ್ಶನ_ಸಲಹೆ_ಇದೆ. #ಶಿಲಾಶಾಸನಗಳ_ಪಿತಾಮಹರೆಂದೇ_ಖ್ಯಾತರಾದ_ಬೆಂಜಮನ್_ಲೂಯಿಸ್_ರೈಸ್_ಆನಂದಪುರಂಗೆ_ಬಂದು_ತಂಗಿದ್ದರು.    ಇತ್ತೀಚೆಗೆ ನಮ್ಮ ಆನಂದಪುರಂ ಸಮೀಪದ ಗೌತಮಪುರದ ನೇಂದ್ರಪ್ಪನವರು ಬಂದಿದ್ದರು ಅವರು ಸಾಗರದ ಪ್ರತಿಷ್ಠಿತ ಇಂದಿರಾ ಗಾಂಧಿ ಪದವಿ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿದ್ದಾರೆ.    ಅವರು ತಮ್ಮ ಪ್ರೌಢ ಶಿಕ್ಷಣ ಆನಂದಪುರಂನಲ್ಲಿ ಮಾಡಿದ್ದಾರೆ ಆಗ ನಾನು ಜಿಲ್ಲಾ ಪಂಚಾಯಿತಿಯ ಸದಸ್ಯನಾಗಿದ್ದೆ, ಇವರ ಜೊತೆಗಾರ ಈಗ ರಿಪ್ಪನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ವೃತ್ತಿ ಮಾಡುತ್ತಿರುವ ನನ್ನ ಶಿಷ್ಯ ಪರಮೇಶರವರ ಗೆಳೆಯರು ಮತ್ತು ಅವರ ಮನೆಯ ಪಕ್ಕದವರು.   ಇತಿಹಾಸದ ಉಪನ್ಯಾಸಕರಾದ ನೇಂದ್ರಪ್ಪನವರಿಗೆ ಆನಂದಪುರ...