Skip to main content

Posts

Showing posts with the label our Primary school teacher Lobo couples

4001. ಲೋಬೋ ದಂಪತಿಗಳು ಶಿಕ್ಷಕರು

#ರಿಚರ್ಡ್_ಲೋಬೋ_ಮತ್ತು_ಲಿಲ್ಲಿಬಾಯಿ_ಶಿಕ್ಷಕ_ದಂಪತಿಗಳು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ಈ ಸರ್ಕಾರಿ ಪ್ರಾಥಮಿಕ ಶಾಲೆ. ವಿದ್ಯಾಮಂತ್ರಿಗಳಾಗಿದ್ದ #ಎ_ಆರ್_ಬದರಿನಾರಾಯಣ್_ಅಯ್ಯಂಗಾರ್ ವ್ಯಾಸಂಗ ಮಾಡಿದ ಸರ್ಕಾರಿ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ದೀರ್ಘಕಾಲ ಶಿಕ್ಷಕ ವೃತ್ತಿಮಾಡಿದ್ದ ರಿಚರ್ಡ್ ಲೋಬೋ ಮಾಸ್ಟರ್ ಮತ್ತು ಅವರ ಪತ್ನಿ ಲಿಲ್ಲಿಬಾಯಿ ಟೀಚರ್ ಇವರ ಶಿಸ್ತಿನ ವೃತ್ತಿ ಜೀವನ ಆನಂದಪುರಂಗೆ ಮಾದರಿ.  ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ, ಈ ಶಾಲೆಗೆ ಅವಶ್ಯವಿರುವ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ ಶಾಲೆಗೆ ಭೂದಾನ ಮಾಡಿದ್ದರಿಂದ ಅವರ ಹೆಸರು ಸ್ಕೂಲ್ ರಾಮಣ್ಣ ಅಂತ ಆಯಿತು.    ಈ ಜಾಗ ಕೆಳದಿ ರಾಜ #ವೆಂಕಟಪ್ಪನಾಯಕ ಮತ್ತು ರಂಗೋಲಿ ಪ್ರವೀಣೆ #ಚಂಪಕ_ರಾಣಿಯ ದುರಂತ ಪ್ರೇಮ ಕಥೆಗೆ ತಳಕು ಹಾಕಿಕೊಂಡಿದೆ.    ರಾಣಿ ಚಂಪಕಾಳ ಈ ಮೂಲ ಮನೆ ಜಾಗವೇ ಈ ಶಾಲಾ ಜಾಗವಾಗಿದೆ.   ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ  ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.   ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ #ಬಿ_ಡಿ._ರವಿಯ ತಾಯಿಯಾದ #ಲಕ್ಷ್ಮಮ್ಮನವರ ಅಜ್ಜ #ಸ್ಕೂಲ್_ರಾ...