ನನ್ನ_ಪ್ರತಿವರ್ಷದ_ಶ್ರಾವಣ_ಮಾಸದ ಸದುಪಯೋಗ_ಹೀಗಿದೆ.. #ಇದು_ನನ್ನ_ಸ್ವಂತ_ಪ್ರಯೋಗ_ಯಶಸ್ವಿ_ಆದ_ಕಥೆ. #ಇದು_ಪುಸ್ತಕ_ರೂಪದಲ್ಲೂ_ಬರಲಿದೆ. ನೀವು ಕೂಡ ಹಂತ ಹಂತವಾಗಿ ಶ್ರಾವಣ ಮಾಸದಿಂದಲೇ ನಿಮ್ಮ ಸ್ಥೂಲಕಾಯ ನಿವಾರಣೆಗಾಗಿ, ಡಯಾಬಿಟೀಸ್ -ಬಿಪಿ ನಿಯಂತ್ರಣಕ್ಕಾಗಿ ಇದನ್ನು ಪ್ರಾರಂಭಿಸ ಬಹುದು. ಇವತ್ತಿನಿಂದ ಶ್ರಾವಣ ಮಾಸ ಅಂದರೆ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭವಾಗಿ ಮುಂದಿನ ಅಮವಾಸ್ಯೆ ದಿನಾಂಕ 11 - ಸೆಪ್ಟೆಂಬರ್ -2026 ಶುಕ್ರವಾರದ ತನಕ ಇರಲಿದೆ. ಶ್ರಾವಣ ಮಾಸ ಬಂತು ಎಂದರೆ ಹಬ್ಬಗಳ ಸಾಲು ಸಾಲು ಪ್ರಾರಂಭ.. ಶ್ರಾವಣ ಸೋಮವಾರ ಆಚರಣೆ, ವರಮಹಾಲಕ್ಷ್ಮಿ ವೃತ,ನಾಗರ ಪಂಚಮಿ, ರಕ್ಷಾ ಬಂಧನ, ಕೃಷ್ಣಾಷ್ಟಮಿಗಳು. ಹಿಂದೂ ಧರ್ಮದಲ್ಲಿ ಪ್ರತಿ ಮನೆಗಳಳಲ್ಲಿ ಅಸ್ತಿಕ -ನಾಸ್ತಿಕರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಬೇರೆ ಧರ್ಮಗಳಲ್ಲಿ ನಾಸ್ತಿಕರಿಗೆ ಪ್ರಾರ್ಥನ ಮಂದಿರ ಮತ್ತು ಅವರ ಸಮಾದಿಗಳಲ್ಲಿ ಕೆಲವು ಕಠಿಣ ಕಟ್ಟುಪಾಡುಗಳಿದೆ ಆದರೆ ಹಿಂದೂ ಧರ್ಮದಲ್ಲಿ ನಾಮಕರಣ - ವಿವಾಹ ಮತ್ತು ಅಂತ್ಯ ಸಂಸ್ಕಾರದಲ್ಲಿ ಅಂತಹ ಕಟ್ಟು ಪಾಡು ಇಲ್ಲ. ನಾನು ಪ್ರತಿ ವರ್ಷ ಶ್ರಾವಣ ಮಾಸವನ್ನ ನನ್ನದೇ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಆಚರಿಸುತ್ತೇನೆ. ಇದರಲ್ಲಿ ನನ್ನ ತೂಕ ನಿಯಂತ್ರಣ, ಡಯಾಬಿಟೀಸ್ ಮತ್ತು ಬಿಪಿ ನಿಯಂತ್ರಣವನ್ನ ಕೇಂದ್ರಿಕರಿ...