Skip to main content

Posts

Showing posts with the label Activist of Ever Red costume man crossed 98 years

Blog number 1131. ಶಿವಮೊಗ್ಗದ ಕಾಮ್ರೇಡ್ ಲಿಂಗಪ್ಪನವರಿಗೆ 98ನೇ ವರ್ಷ ಪೂರೈಸಿದ ಸಮಯದಲ್ಲಿ ಸನ್ಮಾನ, ಕ್ರಾಂತಿ ಭಗತ್ ಪತ್ರಿಕೆ ಸಂಪಾದಕರು, ಸದಾ ಕೆಂಪು ಬಣ್ಣದ ಉಡುಗೆ ತೊಡುಗೆ ಎಲ್ಲದೂ ಕೆಂಪು.

#ಕಾಮ್ರೇಡ್_ಲಿಂಗಪ್ಪರ_ನಿಮಗೇನು_ಗೊತ್ತು. #ಇದೇ_ತಿಂಗಳ_31ಕ್ಕೆ_ಸನ್ಮಾನವಿದೆ #ಅವರಿಗೆ_98ರ_ಪ್ರಾಯ. #ಶಿವಮೊಗ್ಗದ_ಕ್ರಾಂತಿ_ಭಗತ್_ಪತ್ರಿಕೆ_ಸಂಪಾದಕರು. #ಸದಾ_ಸೂಟು_ಬೂಟು_ಹ್ಯಾಟು_ಎಲ್ಲದೂ_ಕೆಂಪು. #ಒಂಟಿ_ದ್ವನಿಯ_ಏಕ_ವ್ಯಕ್ತಿ_ಹೋರಾಟ_ಇವರದ್ದು #ಜೊತೆಗೆ_ಜಾಗಟೆ_ಶಂಖ   ನಾನು 1995ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಸಭೆಗಳು ಶಿವಮೊಗ್ಗದ ಡಿಸಿಸಿ ಸಭಾಂಗಣದಲ್ಲಿ ನಡೆಯುತ್ತಿತ್ತು ಅಲ್ಲಿ ಪತ್ರಕರ್ತರ ಗ್ಯಾಲರಿಯಲ್ಲಿ ಕೆಂಪು ಟೋಪಿ, ಕೆಂಪು ಕೋಟು, ಕೆಂಪು ಟೈ, ಕೆಂಪು ಪ್ಯಾಂಟು, ಕೆಂಪು ಬೆಲ್ಟ್ ಮತ್ತು ಕೆಂಪು ಸಾಕ್ಸ್ ಬೂಟು ಮಾತ್ರ ಕಪ್ಪು ಧರಿಸಿದ್ದ ಕಾಮ್ರೆಡ್ ಲಿಂಗಪ್ಪ ಹೊಳೆಯುತ್ತಿದ್ದರು.   ಇವರನ್ನ 1985ರಿಂದ ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ಕ್ರಾಸಿನ ಸಮಾಜವಾದಿ ಪಿ.ಪುಟ್ಟಯ್ಯನವರ ಪ್ರಕೃತಿ ಮುದ್ರಣಾಲಯದಲ್ಲಿ ನೋಡುತ್ತಿದ್ದ ಪರಿಚಯ ನನ್ನದು ಇವರ #ಕ್ರಾಂತಿ_ಭಗತ್ ಪತ್ರಿಕೆ ಅಲ್ಲೇ ಮುದ್ರಣ ಆಗುತ್ತಿತ್ತು.   ಆ ಸಂದರ್ಭದಲ್ಲಿ ಸೊರಬದ ರಾಮಚಂದ್ರರ ಸಂಪಾದಕತ್ವದ #ಒಂಟಿ_ಧ್ವನಿ ಕೂಡ ಪ್ರಕೃತಿ ಮುದ್ರಣಾಲಯದಲ್ಲಿ ಮುದ್ರಣ ಆಗುತ್ತಿತ್ತು ಬಹಶಃ ಪುಟ್ಟಯ್ಯನವರು ಉಚಿತವಾಗಿ ಮುದ್ರಿಸಿ ಕೊಡುತ್ತಿದ್ದರು.    ಕಾಮ್ರೇಡ್ ಲಿಂಗಪ್ಪನವರು ಮತ್ತು A. V. ಶ್ರೀನಿವಾಸರು ಪುಟ್ಟಯ್ಯರ ಹತ್ತಿರ ತೆಗಿ... ತೆಗಿ... ಹತ್ತು ರೂಪಾಯಿ ಅಂತ ಅನ್ನುವುದು ಪುಟ್ಟಯ್ಯನವರು ತಮಾಷೆಯಾಗಿ ನಿಮ...