https://youtu.be/FVHRkjyFOYQ?feature=shared #ಶಿಕಾರಿಪುರದ_ನೆಲವಾಗಿಲಿನ_ನಾಗೇಂದ್ರಪ್ಪ #ಜನ_ಇವರನ್ನು_ಡ್ರೈವರ್_ನಾಗೇಂದ್ರಪ್ಪ_ಮೆಕ್ಯಾನಿಕ್_ನಾಗೇಂದ್ರಪ್ಪ_ಅಂತಲೂ_ಕರೆಯುತ್ತಾರೆ. #ನಾನೂ_ಇವರೂ_ಹಾಸನ_ಮೈಸೂರು_ಮಂಡ್ಯ_ಕೊಡಗು_ಜಿಲ್ಲೆಗಳಲ್ಲಿ_ಅನೇಕ_ದಿನ_ತಿರುಗಾಡಿದ್ದೆವು #ನಿಸ್ವಾರ್ಥಿ_ಪರೋಪಕಾರಿ_ಅನ್ಯಾಯದ_ವಿರುದ್ದ_ಸಿಡಿದೇಳುವ_ಇವರು_ಕಲಾವಿದರೂ_ಹೌದು. #ನಮ್ಮ_ಊರಿನ_ವರಸಿದ್ದಿ_ವಿನಾಯಕ_ದೇವಸ್ಥಾನದ_ಪಾರುಪತ್ತೆದಾರರು. 80 ರ ದಶಕದಲ್ಲಿ ನಮ್ಮ ಊರಲ್ಲಿ ರೈಸ್ ಮಿಲ್ ಮೆಕ್ಯಾನಿಕ್ ಆಗಿ ಬಂದ ಶಿಕಾರಿಪುರ ತಾಲ್ಲೂಕಿನ ನೆಲವಾಗಿಲಿನ ನಾಗೇಂದ್ರಪ್ಪ ಈಗ ನಮ್ಮ ಊರಿನ ನಿವಾಸಿಗಳು. ಇವರು ರೈಸ್ ಮಿಲ್ ಮೆಕ್ಯಾನಿಕ್ ಮಾತ್ರವಲ್ಲ ಅತ್ಯುತ್ತಮ ಡ್ರೈವರ್ ಕೂಡ ಅನೇಕ ವರ್ಷ ಶಿವಮೊಗ್ಗದ ಜಯಪ್ರಕಾಶ್ ಶೆಣೈ ಅವರ ವಿಜಯಾ ಮೋಟಾರ್ಸ್ ಸಂಸ್ಥೆಯ ನಂಬಿಕಸ್ತ ಮತ್ತು ಯಶಸ್ವೀ ಡ್ರೈವರ್ ಆಗಿದ್ದರು, ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರಿಗೂ ಆಪ್ತರಾಗಿದ್ದರು. ಕನ್ನಡ ಸಾಹಿತ್ಯದ ಓದು, ಹಾಡುವುದು, ಭಜನೆ, ನಾಟಕಗಳಲ್ಲಿ ಅಭಿನಯಿಸುವುದು ಇವರ ಹವ್ಯಾಸ. ಧಾರ್ಮಿಕ-ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ಇವರು ಶ್ರದ್ದಾ ಭಕ್ತಿಯಿಂದ ಭಾಗವಹಿಸುತ್ತಾರೆ. ಅನ್ಯಾಯ ದೌರ್ಜನ್ಯದ ವಿರುದ್ಧ ತಕ್ಷಣ ಸಿಡಿದೇಳುವ ಇವರ ಜೀವನ ಶಿಸ್ತು ಬದ್ದವಾಗಿ ನಡೆದು ಬಂದಿದೆ....