Skip to main content

Posts

Showing posts with the label My Little Contribution to Ayodya Ramamandira

ಅಯೋಧ್ಯ ರಾಮ ಮಂದಿರ ನಿಮಾ೯ಣಕ್ಕೆ ಕಿರು ಕಾಣಿಕೆ ಮತ್ತು ಗಾಂಧೀಜೀ ಕನಸಿನ ರಾಮರಾಜ್ಯದ ನನಸಾಗಲಿ ಎಂಬ ಹಾರೈಕೆ

#ಅಯೋಧ್ಯ_ರಾಮಮಂದಿರಕ್ಕೆ_ನನ್ನ_ದೇಣಿಗೆ_ಸಂದಾಯ        ಒಂದು ನೆನಪು ಸಾಗರದಿಂದ ಆಯೋಧ್ಯೆಗೆ ಇಟ್ಟಿಗೆಗಳನ್ನು ಕಳಿಸುವಾಗ ಅದರ ಪೂಜೆ ಸಜ್ಜನ ರಾಜಕಾರಣಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ಪೂಜೆ ಮಾಡಿದ್ದರು ( ಆಗ ಅವರು ಮಾಜಿ ಶಾಸಕರಾಗಿರಬೇಕು) ನಮ್ಮ ತಂದೆ ಅವರ ಅನುಯಾಯಿ ಮತ್ತು ಬೆಂಬಲಿಗರು.         ಇವತ್ತು ರಾಮ ಮಂದಿರ ನಿರ್ಮಾಣಕ್ಕಾಗಿ ಇಡೀ ದೇಶದಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದೆ, ಇವತ್ತಿಗೆ ಒ0ದು ಸಾವಿರ ಕೋಟಿ ದೇಣಿಗೆ ಸಂದಾಯ ಆಗಿದೆ ಅಂತ ಸಂಚಾಲಕರಾದ ಉಡುಪಿ ಪೇಜಾವರ ನೂತನ ಸ್ವಾಮಿ ಪತ್ರಿಕಾ ಹೇಳಿಕೆ ಇದೆ.        ನಾನು ಮತ್ತು ಸಹೋದರ ನಮ್ಮ ಸಂಸ್ಥೆಯಿಂದ ನಮಗೆ ಸದ್ಯ ಸಾಧ್ಯವಾದಷ್ಟು 1000, 100 ಮತ್ತು 10 ರೂಪಾಯಿ ಕೂಪನ್ ಗಳನ್ನು ಹಣ ನೀಡಿ ರಶೀದಿ ಆಗಿ ಪಡೆದವು.      ಇದು ನಮ್ಮ ದಾಖಲೆಯಲ್ಲಿ ಸಂರಕ್ಷಿಸಿಟ್ಟು ರಾಮ ಮಂದಿರ ನಿಮಾ೯ಣದ ನಂತರ ದೇವಾಲಯ ದರ್ಶನ ನನ್ನ ಕನಸು ಕೂಡ.       ನಾನು ಆಸ್ತಿಕ ದೇವರ ಮೇಲೆ ಅಪಾರ ನಂಬಿಕೆ ಇಟ್ಟು ಜೀವನ ಮಾಡುವ ಜೊತೆಗೆ ಪರದಮ೯ ವನ್ನೂ ಗೌರವಿಸುವವನು.        ಹಿರಿಯ ಗೆಳೆಯರಾದ ಗನ್ನಿ ಸಾಹೇಬರಿಗೆ ಮೆಕ್ಕಾ ಯಾತ್ರೆ ಕೂಡ ಮಾಡಿಸಿದ್ದು ಸ್ಮರಿಸುತ್ತಾ ದೇವನೊಬ್ಬ ನಾಮ ಹಲವು ಎಂಬ ಸಿದ್ಧಾಂತ ಒಪ್ಪಿದವನು.     ...