Skip to main content

Posts

Showing posts with the label Koragajja God of Common People

4110. ಕೊರಗಜ್ಜ_ನಂಬಿದವರನ್ನು_ಎಂದೂ_ಕೈಬಿಡದತುಳುನಾಡಿನ_ಪವಾಡ_ಪುರುಷ.

ಕೊರಗಜ್ಜ_ನಂಬಿದವರನ್ನು_ಎಂದೂ_ಕೈಬಿಡದ ತುಳುನಾಡಿನ_ಪವಾಡ_ಪುರುಷ.   ​ತುಳುನಾಡಿನ ಕಾರಣಿಕ ದೈವ, ಭಕ್ತರ ಆಪತ್ಬಾಂಧವ ಶ್ರೀ ಕೊರಗಜ್ಜ.   ಇಂದಿನ ಆಧುನಿಕ ಯುಗದಲ್ಲೂ ಕೊರಗಜ್ಜನ ಪವಾಡಗಳು ಕಡಿಮೆಯಾಗಿಲ್ಲ,ಜಾತಿದರ್ಮಗಳ ಗಡಿಯನ್ನು ಮೀರಿ ಕೊರಗಜ್ಜನನ್ನು ಆರಾಧಿಸುವ ಭಕ್ತರು ಪ್ರಪಂಚದಾದ್ಯಂತ ಇದ್ದಾರೆ.   ​ತುಳುನಾಡು ಎಂದರೆ ಪವಿತ್ರ ದೈವರಾಧನೆಯ ಪುಣ್ಯಭೂಮಿ ಇಲ್ಲಿನ ಪ್ರತಿಯೊಂದು ಶಕ್ತಿಯ ಹಿಂದೆ ದೊಡ್ಡ ಪವಾಡ ಮತ್ತು ಸತ್ಯದ ಕಥೆಯಿದೆ.    ಅಂತಹ ಅಪಾರ ಕಾರಣಿಕ ಹಾಗೂ ಧಾರ್ಮಿಕ ನಂಬಿಕೆಯ ಪ್ರತೀಕವೇ ‘ಶ್ರೀ ಕೊರಗಜ್ಜ’.   ​ಕೊರಗಜ್ಜನನ್ನು ತುಳುನಾಡಿನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ತಕ್ಷಣವೇ ಭಕ್ತರ ಪ್ರಾರ್ಥನೆಗೆ ಓಗೊಡುವ ದೈವವೆಂದು ನಂಬಲಾಗುತ್ತದೆ.     ಕಷ್ಟದಲ್ಲಿದ್ದಾಗ, ವಸ್ತುಗಳು ಕಳೆದುಹೋದಾಗ ಅಥವಾ ಜೀವನದಲ್ಲಿ ದಿಕ್ಕು ತೋಚದಿದ್ದಾಗ "ಕೊರಗಜ್ಜಾ ಕಾಪಾಡು" ಎಂದು ಶ್ರದ್ಧೆಯಿಂದ ನೆನೆದರೆ ಆತ ಭಕ್ತರ ನೆರವಿಗೆ ಧಾವಿಸುತ್ತಾನೆ ಎಂಬುದು ಕೋಟ್ಯಂತರ ಜನರ ಅನುಭವ.   ​ಕೊರಗಜ್ಜ ದೇವರಿಗೆ ಯಾವುದೇ ಆಡಂಬರದ ಪೂಜೆ-ಪುರಸ್ಕಾರಗಳ ಅಗತ್ಯವಿಲ್ಲ,ಶುದ್ಧ ಮನಸ್ಸಿನ ಪ್ರಾರ್ಥನೆ, ನಂಬಿಕೆ ಮತ್ತು ಸರಳ ನೇಮ-ನಿಷ್ಠೆಗಳೇ ಆತನಿಗೆ ಪ್ರಿಯ.   ತಮಲಪಾಲು (ವೀಳ್ಯದೆಲೆ, ಅಡಿಕೆ), ಸುರಾಪಾನ (ಕಳ್ಳು/ಶೇಂದಿ) ಮತ್ತು ಸಿಹಿತಿಂಡಿಗಳನ್ನು ಅಗೇಲು ಸೇವೆಯಾಗಿ ಅರ್ಪಿಸುವುದು ಇಲ್ಲಿನ ...