Blog number 1494. ಮಂಗಳೂರಿನ ಒಂದು ಕಾಲದ ಪ್ರಖ್ಯಾತ ಅತ್ರಿ ಬುಕ್ ಸೆಂಟರ್ ಅಶೋಕವರ್ಧನರು ಚಂಪಕ ಸರಸ್ಸು ದರ್ಶನ ಮಾಡಿ ನನ್ನ ಕಾದಂಬರಿ ಓದಿ ಅಭಿಪ್ರಾಯಿಸಿದ್ದಾರೆ.
#ಚಂಪಕ_ರಾಣಿ ನನ್ನ ಕಾದಂಬರಿ ಓದಿ ವಿಮಷೆ೯ ಮಾಡಿದವರು ಮಂಗಳೂರಿನ #ಅಶೋಕವರ್ಧನ್ ಇವರು ಬಹು ಮುಖ ಪ್ರತಿಭೆಯ ವಾಸ್ತವವಾದಿ. ಸುಮಾರು 36 ವರ್ಷ #ಅತ್ರಿ_ಬುಕ್_ಸೆಂಟರ್ ನಡೆಸಿದವರು, ಎಲ್ಲಾ ಖ್ಯಾತ ಲೇಖಕರ ಒಡನಾಟ ಹೊಂದಿದವರು ಸ್ವತಃ ಬರಹಗಾರರು ಇತ್ತೀಚಿಗೆ ಹೆಗ್ಗೋಡು ನೀನಾಸಂಗೆ ಮೋಟರ್ ಬೈಕ್ ನಲ್ಲಿ ದಂಪತಿಗಳು (ಬಹುಶಃ 60 ವರ್ಷ ಮೀರಿದ ಸೀನಿಯರ್ ಸಿಟಿಜನ್) ಬಂದಾಗ ಅಲ್ಲಿ ಗೆಳೆಯ #ಶೈಲೇಂದ್ರ_ಬಂದಗದ್ದೆ ನೀಡಿದ ಮಾಹಿತಿಯಿಂದ ಸ್ವಯ೦ ಪ್ರೇರಣೆ ಇಂದ ನಮ್ಮ ಊರಿನ ಚಂಪಕ ಸರಸ್ಸುವಿಗೆ ಬೇಟಿ ನೀಡಿ ಪೇಸ್ ಬುಕ್ ನಲ್ಲಿ ಮತ್ತು ಅವರ ಬ್ಲಾಗ್ ನಲ್ಲಿ ಚಿತ್ರ - ವರದಿ ಮಾಡಿದಾಗ ನಾನೇ ಅವರನ್ನು ಸಂಪರ್ಕಿಸಿ ನನ್ನ ಕಾದಂಬರಿ ಅಂಚೆಯಲ್ಲಿ ಕಳಿಸಿದ್ದೆ. ತಮ್ಮ ಸದಾ ಪ್ರವಾಸ, ಬರವಣಿಗೆ ಪೋಟೋಗ್ರಪಿಯಲ್ಲಿ ಬಿಡುವಿಲ್ಲದವರಾದ ಈ ಹಿರಿಯರು ನನ್ನಂತ ಸಾಹಿತ್ಯ ಲೋಕದಲ್ಲಿ ಮೊದಲ ಕಾದಂಬರಿ ಬರೆದು ಅಂಬೆಗಾಲು ಇಡುವಂತಹ ನನ್ನ ಕಾದಂಬರಿ ಓದಿ ವಸ್ತುನಿಷ್ಟ ವಿಮಷೆ೯ಯ ಪ್ರತಿ ರೂಪದ ಮಿಂಚಂಚೆ ಪತ್ರದ ಪ್ರತಿ ಇಲ್ಲಿ ಪೋಸ್ಟ್ ಮಾಡಿದ್ದೇನೆ. """"""""""'''''''''''''''''' ಪ್ರಿಯ ಅರುಣ ಪ್ರಸಾದ್ ನನ್ನ ತಿರುಗಾಡಿತನಕ್ಕೆ ಚಂಪಕಸರಸು ಸಿಕ್ಕಿದ್ದು, ನಾನದರ ಬಗ್ಗೆ ಏನೋ ಗೀಚಿದ್ದು ದೊಡ್ಡ ಸಂಗತಿಯಲ್ಲ. ಆ...