Skip to main content

Posts

Showing posts with the label Our village Yadehalli Sri varsiddhi Vinayaka Swami temple Rathotsava and Special Holige ghee pradadam

Blog number 1963. ನಮ್ಮ ಊರಿನ ವರಸಿದ್ಧಿ ವಿನಾಯಕ ದೇವರ ಜಾತ್ರೆಯಲ್ಲಿ ಹೋಳಿಗೆ ತುಪ್ಪದ ಅನ್ನ ಸಂತರ್ಪಣೆ

#ನಮ್ಮ_ಊರಿನ_ಜಾತ್ರೆಯಲ್ಲಿ_ಹೋಳಿಗೆ_ತುಪ್ಪದ_ಅನ್ನಸಂತರ್ಪಣೆ #ಭಕ್ತರಿಗೆ_ಮದುವೆ_ಮನೆ_ರೀತಿ_ಊಟೋಪಚಾರ #ಬಫೆ_ಪದ್ದತಿ_ಇಲ್ಲ #ಇದಕ್ಕೆ_ಕಾರಣ_ಇದೆ....   ಮಳೆ ನಿಂತರೂ ಮಳೆಯ ಹನಿಗಳು ನಿಂತಿಲ್ಲ ಎಂಬಂತೆ ನಮ್ಮೂರ ಜಾತ್ರೆಯ ಝುಲಕುಗಳು....      ನಮ್ಮ ಊರಾದ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಏಕೈಕ #ಶ್ರೀವರಸಿದ್ಧಿವಿನಾಯಕ_ಸ್ವಾಮಿ ದೇವಸ್ಥಾನ ಇರುವುದು ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿದೆ.   ಈ ವರ್ಷದ ಜಾತ್ರೆ ಮತ್ತು ರಥೋತ್ಸವ 18ನೆ ವರ್ಷದ್ದು (13- ಪೆಬ್ರುವರಿ- 2024 ಮಂಗಳವಾರ)  ಕಳೆದ ಕೆಲವು ವರ್ಷಗಳಿಂದ ಭಕ್ತರಿಗೆ ಅನ್ನ ಸಂತರ್ಪಣೆ ದೇವಾಲಯದ ಆವರಣದಲ್ಲೇ ಕುಳ್ಳಿರಿಸಿ ಟೇಬಲ್ ಊಟ ನೀಡಲಾಗುತ್ತಿದೆ.   ಇದಕ್ಕೂ ಮೊದಲಿನ ವರ್ಷಗಳಲ್ಲಿ ಬಫೆ ಸಿಸ್ಟಮ್ ನಲ್ಲಿ ದೇವಾಲಯದಿಂದ ದೂರದಲ್ಲಿ ಅನ್ನಸಂತರ್ಪಣೆ ನಡೆಸುತ್ತಿದ್ದೆವು,ಇದು ತುಂಬಾ ಸುಲಭವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಆಗುತ್ತಿತ್ತು ಆದರೆ ಅನ್ನಪ್ರಸಾದ ಸ್ವೀಕರಿಸುವವರಿಗೆ ಇದು ತುಂಬಾ ಕಷ್ಟವಾಗುತ್ತಿತ್ತು ಅದರಲ್ಲೂ ವಯೋವೃದ್ದರಿಗೆ ಮತ್ತು ಮಕ್ಕಳ ಜೊತೆಗೆ ಬಂದ ಸ್ತ್ರೀಯರಿಗೆ ಹೊಟ್ಟೆ ತುಂಬಾ ಊಟ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.    ಊಟದ ತಟ್ಟೆಯಲ್ಲಿ ಎಲ್ಲವನ್ನು ಬಡಿಸುತ್ತಿದ್ದರು ಇದೊಂದು ರೀತಿ ಅಯೋಮಯ ಅನ್ನ ಸಂತರ್ಪಣೆ ಆಗುತ್ತಿತ್ತು.    ಪ್ರತಿ ವರ್ಷ ರಥೋತ್ಸವದ ದಿನ ಬಂದು ಭಾಗವಹಿಸುವ ಸಾಗರದ ಸಿದ್ಧ ಸಮಾಧಿ ಯ...