Skip to main content

Posts

Showing posts with the label Mysore Chalo Agitation

4092. ಸ್ವಾತಂತ್ರ್ಯ ನಂತರ ನಡೆದ #ಮೈಸೂರು_ಚಲೋ_ಚಳವಳಿ ಕಾಲದಲ್ಲಿ ಸಾಗರದಲ್ಲಿ ಪ್ಲೇಗ್ ಹರಡಿದ್ದ ಆತಂಕದ ಮದ್ಯೆ ರಾಷ್ಟ್ರಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರು ಸಾಗರದ ತಾಲ್ಲೂಕ್ ಕಛೇರಿ ಮೇಲೆ ತ್ರಿವರ್ಣ ರಾಷ್ಟ್ರಧ್ವಜ ಹಾರಿಸಿದ್ದರಿಂದ ಇವರನ್ನೆಲ್ಲ ಬಂದನ ಮಾಡಲಾಗಿತ್ತು.

ಆಗಸ್ಟ್_15_ಸ್ವಾತಂತ್ರ್ಯ_ದಿನಾಚರಣೆಯ_ಸಂದರ್ಭದಲ್ಲಿ #ನಮ್ಮ_ಸಾಗರ_ತಾಲ್ಲೂಕಿನ_ಈ_ಮಹಾನಿಯರ #ಸ್ಮರಣೆ_ಮಾಡೋಣ.  ಸ್ವಾತಂತ್ರ್ಯ ನಂತರ ನಡೆದ #ಮೈಸೂರು_ಚಲೋ_ಚಳವಳಿ ಕಾಲದಲ್ಲಿ ಸಾಗರದಲ್ಲಿ ಪ್ಲೇಗ್ ಹರಡಿದ್ದ ಆತಂಕದ ಮದ್ಯೆ ರಾಷ್ಟ್ರಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರು ಸಾಗರದ ತಾಲ್ಲೂಕ್ ಕಛೇರಿ ಮೇಲೆ ತ್ರಿವರ್ಣ ರಾಷ್ಟ್ರಧ್ವಜ  ಹಾರಿಸಿದ್ದರಿಂದ ಇವರನ್ನೆಲ್ಲ ಬಂದನ ಮಾಡಲಾಗಿತ್ತು.   ಈ ಚಳವಳಿಯಲ್ಲಿ ಭಾಗವಹಿಸಿ ಜೈಲು ಸೇರಿದವರಲ್ಲಿ ನಮ್ಮೂರು ಆನಂದಪುರಂನಿಂದ ಇಬ್ಬರು ಮಹಾನಿಯರು ಭಾಗವಹಿಸಿದ್ದರು ಅವರು ಬದರಿನಾರಾಯಣ ಅಯ್ಯಂಗಾರ್ ಮತ್ತು ರಾಮರಾವ್.    1947 ಆಗಸ್ಟ್ 15ಕ್ಕೆ ಸ್ಟಾತಂತ್ರ್ಯ ಲಭಿಸಿ ಈಗ 80ನೇ ವರ್ಷಾಚಾರಣೆಯಲ್ಲಿದ್ದೇವೆ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಿ ಮಾಡೋಣ ಮತ್ತು ಆ ಕುಟುಂಬಗಳನ್ನು ಪ್ರೀತಿಯಿಂದ ಆಧರಿಸೋಣ.   ಈ ಸಂದರ್ಭದಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಮೈಸೂರು ಚಲೋ ಚಳವಳಿ ನೆನಪಿಸಿ ಕೊಳ್ಳಬೇಕಾಗಿದೆ.   ಇದು ಬ್ರಿಟಿಷರ ವಿರುದ್ದ ನಡೆದ ಸ್ವಾತಂತ್ರ್ಯ ಚಳವಳಿ ಅಲ್ಲ, ಮೈಸೂರು ಸರಕಾರವು ಸ್ವತಂತ್ರ ಭಾರತದಲ್ಲಿ ಐಕ್ಯವಾಗಿ ಅರಸೊತ್ತಿಗೆ ಅಳಸಿಹಾಕಲು ಮೀನಾ - ಮೇಷ ಎಣಿಸಿತ್ತು.   ಆದ್ದರಿಂದ ಕಾಂಗ್ರೇಸ್ #ಮೈಸೂರು_ಚಲೋ ಚಳವಳಿಗೆ ಕರೆ ಕೊಟ್ಟಿತ್ತು.   ಈ ಚಳವಳಿ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಹಬ್ಬಿ ಉಗ್ರ ರೂಪ ತಾಳಿತು ಇದಕ್ಕೆ ಎಲ್ಲೆಲ...