Blog number 1108. ಆನಂದಪುರಂ ಇತಿಹಾಸ ಸಂಖ್ಯೆ-89. ವಿಶ್ವವ್ಯಾಪಿ ಗಣೇಶ ಪ್ರದರ್ಶನದ ಮೂಲಕ ಪ್ರಖ್ಯಾತರಾಗಿದ್ದ ಸಾಗರದ ಗೋವದ೯ನ ಅಂಕೋಲೆಕರ್ ಬಹುಮುಖ ಪ್ರತಿಭೆಯ ವಿಸ್ಮಯ ವ್ಯಕ್ತಿತ್ವದ ಅಸಾಧಾರಣ ಸಾಧಕರು.
#ಆನಂದಪುರಂ_ಇತಿಹಾಸ_ಸಂಖ್ಯೆ_89 #ಸಾಗರದ_ಗೋವರ್ದನ_ಅಂಕೋಲೆಕರ್ #ಇವರ_ಗಣೇಶ_ವಿಗ್ರಹಗಳ_ಪ್ರದರ್ಶನ_ಪ್ರಖ್ಯಾತವಾಗಿತ್ತು. #ವಿಶ್ವವ್ಯಾಪಿ_ಗಣೇಶ_ಎಂಬ_ಹೆಸರಲ್ಲಿ_ದೇಶದಾದ್ಯಂತ_ಪ್ರದರ್ಶಿಸಿದವರು. #ಗಣಪತಿಗಾಗಿ_ವಿಶ್ವದಾದ್ಯಂತ_ಸಂಗ್ರಹ_ಪ್ರವಾಸ_ಮಾಡಿದವರು #ಸಾಗರದ_ಪ್ರತಿಷ್ಟಿತ_ಲಾಲ್_ಬಹದ್ದೂರ್_ಕಾಲೇಜ್_ಸ್ಥಾಪನೆಗೆ_ಕೆಹೆಚ್_ಶ್ರೀನಿವಾಸರಿಗೆ_ಬೆಂಗಾವಲಾಗಿದ್ದವರು #ಇವರ_ತಂದೆ_ಬಾಸ್ಕರ್_ಅಂಕೋಲೆಕರ್_ಮತ್ತು_ರಾಮಕೃಷ್ಣ_ಹೆಗಡೆ_ಸಹೋದರ_ಗಣೇಶ್_ಹೆಗಡೆ_ಪಾಲುದಾರರು #ಗೋಪಾಲಕೃಷ್ಣ_ಅಡಿಗರು_ಕಂಬಾರರು_ಜಿಕೆ_ಗೋವಿಂದರಾಯರ_ಒಡನಾಡಿಗಳು. #ಇವರ_ಸಹೋದರ_ಅಪ್ಪು_ಸಾಗರದ_ಪ್ರಖ್ಯಾತ_ಕ್ರಿಕೆಟ್_ಆಟಗಾರರಾಗಿದ್ದರು. #ನಿನ್ನೆ_ನಮ್ಮಲ್ಲಿಯೆ_ಉಳಿಸಿಕೊಂಡು_ಬೆಳಗಿನ_ರೈಲಿನಲ್ಲಿ_ಬೆಂಗಳೂರಿಗೆ_ಕಳಿಸಿದೆ. ಗೋವರ್ಧನ ಅಂಕೋಲೆಕರ್ ಒಬ್ಬ ಸಂಶೋದಕ, ಕಲಾವಿದ, ಹಾಡುಗಾರ, ಕಲಾವಿದರಿಗೆ ಮಾರ್ಗದರ್ಶಕ, ಕಲಾವಿದರು ತಮ್ಮ ಕಲಾಕೃತಿಗೆ ಮಾರುಕಟ್ಟೆ ಸೃಷ್ಠಿಸಿಕೊಳ್ಳಲು, ಗುಡಿಗಾರರ ಉದ್ಯಮಕ್ಕೆ ಆರ್ಥಿಕ ಸಹಾಯ, ಸಾಲ ಸೌಲಭ್ಯ ಮತ್ತು ಕಲಾವಿದರ ಕುಟು೦ಬದಲ್ಲಿ ಸಾವು ನೋವಾದರೆ ಅವರಿಗೆ ಎಲ್ಲಾ ದಾನಿಗಳಿಂದ ಹಣ ಒಟ್ಟು ಮಾಡಿ ಸಹಾಯ ಮಾಡುವುದು, ಪುಸ್ತಕಗಳ ಪ್ರಕಾಶನ ಹೀಗೆ ಒಂದೇ ಎರೆಡೇ... ಈ ಮನುಷ್ಯ ಒಂದು ಅರ್ಥ ಮಾಡಿಕೊಳ್ಳಲಾಗದ ವಿಸ್ಮಯ. ನಾವು ಸಣ್ಣವರಿದ್ದಾಗ ಸುದಾ ವಾರಪತ್ರಿಕೆ, ತರoಗ, ಪ್ರಜಾವಾಣಿ, ...