Skip to main content

Blog number 1108. ಆನಂದಪುರಂ ಇತಿಹಾಸ ಸಂಖ್ಯೆ-89. ವಿಶ್ವವ್ಯಾಪಿ ಗಣೇಶ ಪ್ರದರ್ಶನದ ಮೂಲಕ ಪ್ರಖ್ಯಾತರಾಗಿದ್ದ ಸಾಗರದ ಗೋವದ೯ನ ಅಂಕೋಲೆಕರ್ ಬಹುಮುಖ ಪ್ರತಿಭೆಯ ವಿಸ್ಮಯ ವ್ಯಕ್ತಿತ್ವದ ಅಸಾಧಾರಣ ಸಾಧಕರು.

#ಆನಂದಪುರಂ_ಇತಿಹಾಸ_ಸಂಖ್ಯೆ_89

#ಸಾಗರದ_ಗೋವರ್ದನ_ಅಂಕೋಲೆಕರ್

#ಇವರ_ಗಣೇಶ_ವಿಗ್ರಹಗಳ_ಪ್ರದರ್ಶನ_ಪ್ರಖ್ಯಾತವಾಗಿತ್ತು.

#ವಿಶ್ವವ್ಯಾಪಿ_ಗಣೇಶ_ಎಂಬ_ಹೆಸರಲ್ಲಿ_ದೇಶದಾದ್ಯಂತ_ಪ್ರದರ್ಶಿಸಿದವರು.

#ಗಣಪತಿಗಾಗಿ_ವಿಶ್ವದಾದ್ಯಂತ_ಸಂಗ್ರಹ_ಪ್ರವಾಸ_ಮಾಡಿದವರು

#ಸಾಗರದ_ಪ್ರತಿಷ್ಟಿತ_ಲಾಲ್_ಬಹದ್ದೂರ್_ಕಾಲೇಜ್_ಸ್ಥಾಪನೆಗೆ_ಕೆಹೆಚ್_ಶ್ರೀನಿವಾಸರಿಗೆ_ಬೆಂಗಾವಲಾಗಿದ್ದವರು

#ಇವರ_ತಂದೆ_ಬಾಸ್ಕರ್_ಅಂಕೋಲೆಕರ್_ಮತ್ತು_ರಾಮಕೃಷ್ಣ_ಹೆಗಡೆ_ಸಹೋದರ_ಗಣೇಶ್_ಹೆಗಡೆ_ಪಾಲುದಾರರು

#ಗೋಪಾಲಕೃಷ್ಣ_ಅಡಿಗರು_ಕಂಬಾರರು_ಜಿಕೆ_ಗೋವಿಂದರಾಯರ_ಒಡನಾಡಿಗಳು.
 
#ಇವರ_ಸಹೋದರ_ಅಪ್ಪು_ಸಾಗರದ_ಪ್ರಖ್ಯಾತ_ಕ್ರಿಕೆಟ್_ಆಟಗಾರರಾಗಿದ್ದರು.

#ನಿನ್ನೆ_ನಮ್ಮಲ್ಲಿಯೆ_ಉಳಿಸಿಕೊಂಡು_ಬೆಳಗಿನ_ರೈಲಿನಲ್ಲಿ_ಬೆಂಗಳೂರಿಗೆ_ಕಳಿಸಿದೆ.

   ಗೋವರ್ಧನ ಅಂಕೋಲೆಕರ್ ಒಬ್ಬ ಸಂಶೋದಕ, ಕಲಾವಿದ, ಹಾಡುಗಾರ, ಕಲಾವಿದರಿಗೆ ಮಾರ್ಗದರ್ಶಕ, ಕಲಾವಿದರು ತಮ್ಮ ಕಲಾಕೃತಿಗೆ ಮಾರುಕಟ್ಟೆ ಸೃಷ್ಠಿಸಿಕೊಳ್ಳಲು, ಗುಡಿಗಾರರ ಉದ್ಯಮಕ್ಕೆ ಆರ್ಥಿಕ ಸಹಾಯ, ಸಾಲ ಸೌಲಭ್ಯ ಮತ್ತು ಕಲಾವಿದರ ಕುಟು೦ಬದಲ್ಲಿ ಸಾವು ನೋವಾದರೆ ಅವರಿಗೆ ಎಲ್ಲಾ ದಾನಿಗಳಿಂದ ಹಣ ಒಟ್ಟು ಮಾಡಿ ಸಹಾಯ ಮಾಡುವುದು, ಪುಸ್ತಕಗಳ ಪ್ರಕಾಶನ ಹೀಗೆ ಒಂದೇ ಎರೆಡೇ... ಈ ಮನುಷ್ಯ ಒಂದು ಅರ್ಥ ಮಾಡಿಕೊಳ್ಳಲಾಗದ ವಿಸ್ಮಯ.
   ನಾವು ಸಣ್ಣವರಿದ್ದಾಗ ಸುದಾ ವಾರಪತ್ರಿಕೆ, ತರoಗ, ಪ್ರಜಾವಾಣಿ, ಉದಯವಾಣಿ, ಡೆಕ್ಕನ್ ಹೆರಾಲ್ಡ್, ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್ ಗಳಲ್ಲಿ ಗೋವರ್ಧನ ಅಂಕೋಲೆ ಕರ್ ಅವರು ಶ್ರೀ ಗಂದದಿಂದ ಮುದ್ಗಲ ಪುರಾಣದಲ್ಲಿ ಉಲ್ಲೇಖವಾಗಿರುವ 32 ಪ್ರಬೇದಗಳ ಗಣಪತಿ ವಿಗ್ರಹಗಳು, ದೇಶ ವಿದೇಶಗಳಲ್ಲಿರುವ ಗಣೇಶನ ಪ್ರತಿರೂಪಗಳ #ವಿಶ್ವವ್ಯಾಪಿ_ಗಣೇಶ ಪ್ರದರ್ಶನದ ಬಗ್ಗೆ ಸಚಿತ್ರ ವರದಿಗಳು ಬರುತ್ತಿತ್ತು, ಗೋವರ್ದನ ಅಂಕೋಲೆಕರ್ ನಮ್ಮ ಸಾಗರದವರೆಂಬ ಹೆಮ್ಮೆ ನನಗೆ.
  ಆನಂದಪುರಂಗೂ ಗೋವರ್ಧನ ಅಂಕೋಲೆಕರ್ ಗೂ ಅನೇಕ ವಿಚಾರದಲ್ಲಿ ನಿಕಟ ಸಂಪರ್ಕವಿತ್ತು.
   ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ 1995-2000 ಅವದಿಯಲ್ಲಿ ಇವರ ನಿಕಟ ಸಂಪರ್ಕ ನನಗಿತ್ತು, ನನ್ನ ಮನೆ ಎದುರಿನ ಯಡೇಹಳ್ಳಿ ಸರ್ಕಲ್ ನಲ್ಲಿ 1995ರಲ್ಲಿ ಅಂಬೇಡ್ಕರ್ ವೃತ್ತ ನಿಮಿ೯ಸಿ ಅಲ್ಲಿ ದ್ವಜಸ್ಥಂಭ ಸ್ಥಾಪಿಸಿದಾಗ ಅದರ ಉದ್ಫಾಟನೆ ಆಗಿನ ರಾಜ್ಯ ಸರ್ಕಾರದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಖ್ಯಾತ ಕವಿ ಕುವೆಂಪು ವಂಶಸ್ಥೆ ಸ್ವಣಾ೯ಪ್ರಭಾಕರ್ ನೆರವೇರಿಸಿದಾಗ ಗೋವರ್ಧನ ಅಂಕೋಲೆಕರ್ ಮುಖ್ಯ ಅತಿಥಿ ಅವರ ಹೆಸರು ಈಗಲೂ ಇಲ್ಲಿನ ಶಿಲಾಫಲಕದಲ್ಲಿದೆ.
  ಆನಂದಪುರಂನಲ್ಲಿ ನಡೆದ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆ ಸುಮಾರಂಭದಲ್ಲಿ ಆನಂದಪುರಂನ ಕನ್ನಡ ಸಂಘದಿಂದಲೂ ಸನ್ಮಾನಿಸಲಾಗಿತ್ತು.
   ಇತ್ತೀಚೆಗೆ ಇವರ ಪೋಟೋಗಾಗಿ ಅನೇಕರನ್ನು ಸಂಪರ್ಕಿಸಿದಾಗ ಅವರಲ್ಲ ಹೇಳಿದ್ದು ಗೋವರ್ಧನ ಅಂಕೋಲೆಕರ್ ಇಹಲೋಕದಲ್ಲಿಲ್ಲ ಅಂತ ಮತ್ತು ಅದಕ್ಕೆ ಸಬೂತಾಗಿ ಪತ್ರಿಕೆಗಳಲ್ಲಿ ಬಂದ ಸುದ್ದಿ ಆಗಿತ್ತು.!?
  ಮೊನ್ನೆ ನಾನು ಸಾಗರದ ಅದ್ಬುತ ಕಲಾವಿದರಾಗಿದ್ದ ನಯನ -ನವೀನ ಹ್ಯಾಂಡಿಕ್ರಾಫ್ಟ್ ಷಣ್ಮುಖಪ್ಪ ಮಿಂಚಿ ಮಾಯವಾದ ಲೇಖನ ಪೇಸ್ ಬುಕ್ ನಲ್ಲಿ ಬರೆದಾಗ #ವಿಶ್ವ_ವಸು_ಅಂಕೋಲೆಕರ್ ಎಂಬುವವರು ಪ್ರತಿಕ್ರಿಯೆ ಹಾಕಿದ್ದರು ಇವರ ಹೆಸರಲ್ಲಿ ಅಂಕೋಲೆಕರ್ ಇದ್ದಿದ್ದರಿಂದ ಇವರಿಗೆ ಗೋವರ್ಧನ ಅಂಕೋಲೆಕರ್ ಪೋಟೋ ಸಿಗುತ್ತಾ ಅಂದೆ ಸಿಗುತ್ತೆ ಅಂದಾಗ,ನಿಮಗೇನಾಗಬೇಕು ಅವರು ಅಂದಾಗ ಮಗ ಎಂದು ಉತ್ತರಿಸಿದಾಗ ತುಂಬಾ ಖುಷಿ ನನಗಾಯಿತು.
 ಮೊನ್ನೆ ವಿಶ್ವ ವಸು ಅಂಕೋಲೆಕರ್ ಪೋನ್ ಮಾಡಿ "ನಮ್ಮ ತಂದೆ ಗೋವಾದಿಂದ ಮುರ್ಡೇಶ್ವರಕ್ಕೆ ಬಂದು ಅಲ್ಲಿಂದ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯ ನಿಮ್ಮನ್ನು ಬೇಟಿ ಮಾಡುತ್ತಾರಂತೆ" ಅಂದಾಗಲೇ ನನಗೆ ಗೊತ್ತಾಗಿದ್ದು ಗೋವರ್ದನ ಅಂಕೋಲೆಕರ್ ಬದುಕಿದ್ದಾರೆಂದು.!!
  ನಿನ್ನೆ ಪೂರ್ತಿ ನಮ್ಮಲ್ಲೇ ಉಳಿಸಿಕೊಂಡು ಅನೇಕ ವಿಚಾರ ಮಾತಾಡಿದೆವು, ನನ್ನ ಊರ ವರಸಿದ್ಧಿ ವಿನಾಯಕ ದೇವಸ್ಥಾನ ದರ್ಶನ ಮಾಡಿ ಅಲ್ಲಿನ ಸುಂದರ ಸಿದ್ಧಿವಿನಾಯಕ ದೇವರ ವಿಗ್ರಹ ಕೋಲಾರದ ಶಿವಾರ ಪಟ್ಟಣದ ರಾಷ್ಟ್ರ ಪ್ರಶಸ್ತಿ ವಿಜೇತ ನರಸಿಂಹಾಚಾರ್ ರಿಂದ ಬೆಂಗಳೂರಿನ ಪ್ರಖ್ಯಾತ ಜೋತಿಷಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರಿಗಳು ಮಾಡಿಸಿದರು ಎಂಬ ವಿಚಾರ ಮತ್ತು ನನ್ನ ಲಾಡ್ಜ್ ಪ್ರವೇಶ ದ್ವಾರದ ಶಿಲಾ ಶಕ್ತಿ ಗಣಪತಿ ಅವರದ್ದೆ ಕೊಡುಗೆ ಅಂದಾಗ ಶಾಸ್ತ್ರೋಕ್ತವಾಗಿ ಮುದ್ಗಲ ಪುರಾಣದ ಶ್ಲೋಕದಂತೆ ಸಣ್ಣ ವ್ಯತ್ಯಾಸವೂ ಇಲ್ಲದೆ ನಿರ್ಮಿಸಿರುವ ಗಣಪತಿಯ ಶಿಲಾ ವಿಗ್ರಹಗಳೆಂದು ಹೇಳಿದರು. ಸಿಲೋನ್, ಜಾವಾ, ಬಾಲಿ೯ ಮತ್ತು ಬೋರ್ನಿಯಾ ದೇಶಗಳಲ್ಲಿ ಇರುವ ಗಣಪತಿ ದೇವಾಲಯಗಳ ಬಗ್ಗೆ ಮತ್ತು ಅಲ್ಲಿಗೆಲ್ಲ ಹೋಗಿ ಬಂದದ್ದು ನೆನಪಿಸಿಕೊಂಡರು.
  ಇವರ ವಿಶ್ವವ್ಯಾಪಿ ಗಣೇಶ ದೆಹಲಿ - ಗುಜರಾತ್ - ಮಧ್ಯಪ್ರದೇಶ - ಮಹಾರಾಷ್ಟ್ರ - ಕೇರಳ - ಆಂದ್ರ ಮತ್ತು ಕನಾ೯ಟಕದಲ್ಲಿ ಒಟ್ಟು ನೂರು ಪ್ರದರ್ಶನವಾಗಿತ್ತಂತೆ.
   ವಿಶ್ವವ್ಯಾಪಿ ಗಣಪತಿ ವಿಗ್ರಹಕ್ಕೆ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರು ಶ್ರೀಗಂದ ವಿಶೇಷ ರಿಯಾಯಿತಿ ಕಿಲೋಗೆ ಕೇವಲ ಏಳು ರೂಪಾಯಿಗೆ ನೀಡಿದ್ದು ಸ್ಮರಿಸಿದರು.
  ವಿಶ್ವವ್ಯಾಪಿ ಗಣೇಶ ವಿಗ್ರಹಗಳನ್ನು ಸಾಗರದ ಗುಡಿಗಾರರು ಕೆತ್ತಲಿಲ್ಲ ಆದರೆ ಆಗಿನ ಕೇರಳ ಸರ್ಕಾರದ ಕೇರಳ ಹ್ಯಾಂಡಿಕ್ರಾಫ್ಟ್ ಕಾರ್ಪೋರೇಷನ್ ಆಪ್ ಕೇರಳದ ಗುಡಿಗಾರರಿಂದ ತಯಾರಾಗಿದ್ದಂತೆ.
   ಈಗ 86 ರ ವಯೋಮಾನದ ಗೋವದ೯ನ ಅಂಕೋಲೆಕರ್ ರಲ್ಲಿ ಜೀವನೊತ್ಸವದ ಕೊರತೆ ಕಾಣಲಿಲ್ಲ ಆದರೆ ವಯೋ ಸಹಜ ವೃದ್ದಾಪ್ಯದ ದೈಹಿಕ ಸಮಸ್ಯೆಗಳು ಇದೆ ಆದರೂ ಅವರು ತಿರುಗಾಟ ಬಿಟ್ಟಿಲ್ಲ.
  ಸಾಗರದ ಲಾಲ್ ಬಹದ್ದೂರು ಕಾಲೇಜ್ 1967ರಲ್ಲಿ ಸ್ಥಾಪಿಸಲು ಇವರ ಗೆಳೆಯ ಕೆ.ಹೆಚ್.ಶ್ರೀನಿವಾಸರಿಗೆ (ದೇವರಾಜ ಅರಸರ ಸಂಪುಟದಲ್ಲಿ ನಂತರ ಮಂತ್ರಿಗಳಾದರು) ಭುಜ ಕೊಟ್ಟವರು ಇವರು.
  ಕೆಲವೊಮ್ಮೆ ಸಂಬಳಕ್ಕೆ ಕೂಡ ಇವರು ಸಹಾಯ ಮಾಡುತ್ತಿದ್ದ ನೆನಪುಗಳ ಜೊತೆ ಆಗ ಲಾಲ್ ಬಹದ್ದೂರ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರ , ಕಂಬಾರರ, ಜಿ ಕೆ . ಗೋವಿಂದರಾವ್ ರ ಒಡನಾಟಗಳೂ ಕೂಡ ನೆನಪಿಸಿಕೊಂಡರು ಆಗ ಲಾಲ್ ಬಹದ್ದೂರ್ ಕಾಲೇಜಿಗೆ ಸೈನ್ಸ್ ವಿಭಾಗ ತರಲು ಆಗ ಲ್ಯಾಬೋರಟರಿ ಕಾಲೇಜಿನಲ್ಲಿ ಇರಲಿಲ್ಲಂತೆ ಅಷ್ಟು ಹಣ ವಿನಿಯೋಗಿಸಲು ಸಾದ್ಯವಿಲ್ಲದಂತ  ದಿನಗಳಲ್ಲಿ ok ತಿಪಟೂರಿನ ಕಾಲೇಜಿನಿಂದ ಎರವಲು ತಂದು ಸೈನ್ಸ್ ವಿಭಾಗ ಮಂಜೂರು ಮಾಡುವ ತಜ್ಞರ ಸಮಿತಿ ಬಂದು ಪರಿಶೀಲಿಸಿ ಹೋದ ನಂತರ ವಾಪಾಸು ಮಾಡುವ ಕೆಲಸ ಗೋವರ್ಧನ ಅಂಕೋಲೆಕರ್ ಮಾಡಿದ್ದರಂತೆ.
   ಇವರ ತಂದೆ ಬಾಸ್ಕರ್ ಅಂಕೋಲೆ ಕರ್ ಮತ್ತು ತಾಯಿ ಶಾಂತಾಬಾಯಿ ದಂಪತಿಗಳಿಗೆ ನಾಲ್ವರು ಪುತ್ರರು ಗೋವರ್ಧನ್, ಪುರುಶೋತ್ತಮ, ವಿನಾಯಕ ಮತ್ತು ಗೋಪಾಲ ಇದರಲ್ಲಿ ಗೋವರ್ಧನ ಅಂಕೋಲೆಕರ್ ಒಬ್ಬರೆ ಬದುಕಿರುವುದು.
  ಅಪ್ಪು ಎಂದು ಕರೆಯುತ್ತಿದ್ದ ಇವರ ಸಹೋದರ ಪುರುಶೋತ್ತಮ್ ಆ ಕಾಲದ ಪ್ರಸಿದ್ಧ ಕ್ರಿಕೆಟ್ ಆಟಗಾರರು ಇವರ ಕ್ರಿಕೆಟ್ ಬ್ಯಾಟಿಂಗ್ ತುಂಬಾ ಆಕರ್ಷಕವಾಗಿರುತ್ತಿತ್ತು ಸ್ಟತಃ ನಾನು ಇವರ ಆಟ ಸಾಗರದ ನೆಹರು ಮೈದಾನದಲ್ಲಿ ನೋಡಿದ್ದೆ.
   ಗೋವರ್ದನ ಅಂಕೋಲೆಕರ್ ಮತ್ತು ಪುಷ್ಪ ದಂಪತಿಗಳಿಗೆ ಏಕೈಕ ಪುತ್ರ ವಿಶ್ವ ವಸು ಅಂಕೋಲೆಕರ್ ಇವರೂ ತಂದೆಯಂತೆ ದೇವರ ವಿಗ್ರಹಗಳ ಮಾರಾಟಗಾರರಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಓಂ ಎಂಟರ್ಪ್ರೈಸೆಸ್ ಮಾಡಿದ್ದಾರೆ.
   ಗೋವರ್ಧನ ಅಂಕೋಲೆಕರ್ ಪತ್ನಿ ಈಗಿಲ್ಲ ಇವರು ಈಗ ಮಗ ಸೊಸೆ ಮತ್ತು ಮೊಮ್ಮಗ ತನ್ಮಯಿ ಜೊತೆ ಬೆಂಗಳೂರಲ್ಲೇ ನೆಲೆಸಿದ್ದಾರೆ.
  ಇವರ ತಂದೆ ಆ ಕಾಲದಲ್ಲಿ ಸಾಗರದಲ್ಲಿ ವಿಘ್ನೇಶ್ವರ ಕಂಪನಿ ಎಂಬ ಅಡಿಕೆ ಕಂಪನಿ ಸ್ಥಾಪಿಸಿದ್ದರು, ಇದರ ಶಾಖೆ ಸಿದ್ದಾಪುರಕ್ಕೆ ರಾಮಕೃಷ್ಣ ಹೆಗಡೆ ಸಹೋದರ ಗಣೇಶ್ ಹೆಗಡೆ ಪಾಲುದಾರರಾಗಿದ್ದರು.
  ಇವರ ತಂದೆ ಅಂಕೋಲ ಮೂಲದವರು ಅಲ್ಲಿ ಶಿಕ್ಷಕರಾಗಿ ಬಡತನದಿಂದ ಜೀವನ ಮಾಡಿದವರು 1930ರಲ್ಲಿ ಸಾಗರಕ್ಕೆ ವಲಸೆ ಬಂದವರು.
  1958ರಿಂದ ಅಡಿಕೆ ವ್ಯಾಪಾರ ಮತ್ತು ಕುಟುಂಬದ ಯಜಮಾನಿಕೆ ಪಡೆದ ಗೋವರ್ಧನ ಅಂಕೋಲೆಕರ್ ಕುಟುಂಬದ ವ್ಯವಹಾರ ಇವರ ಚತುರತೆಯಿಂದ ಮೇಲ್ಮಟ್ಟಕ್ಕೆ ಒಯ್ದು ಸಾದನೆ ಮಾಡಿದ್ದರು.
  ಆಗ ಸಾಗರದ ಆರ್.ಎಸ್.ಎಸ್.ಪ್ರಚಾರಕರಾಗಿದ್ದ ನಾ.ಕೃಷ್ಣಪ್ಪ ಮತ್ತು ಇವರ ಗೆಳೆತನ ಮುಂದೆ ನಾ.ಕೃಷ್ಣಪ್ಪನವರು ಕ್ಯಾನ್ಸರ್ ಕಾಯಿಲೆಯನ್ನು ಗೆದ್ದ ಬಗ್ಗೆ #ಮೃತ್ಯು_ಮಿತ್ರ ಎಂಬ ಸಾವನ್ನು ಗೆದ್ದ ಸಾದಕರು ಎಂಬ ಪುಸ್ತಕ ಸಾಗರದ ಖ್ಯಾತ ಸಾಹಿತಿ ಡಾ.ಜಿ.ಎಸ್.ಭಟ್ಟರಿಂದ ಬರೆಸಿ ಇವರದೇ ಪ್ರಕಾಶನ ವಿಶ್ವವ್ಯಾಪಿ ಪ್ರಕಾಶನದಿಂದ ಈವರೆಗೆ ಸುಮಾರು ಹತ್ತು ಸಾವಿರ ಪ್ರತಿ ಮಾರಾಟ ಮಾಡಿದ್ದಾರೆ, ಈ ಪ್ರಕಾಶನದ ಮೂಲಕ ಹತ್ತಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದ್ದಾರೆ.
   ಇವರ ಸಂಗ್ರಹದಲ್ಲಿದ್ದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಅನೇಕ ಉಪಯುಕ್ತ ಪುಸ್ತಕಗಳನ್ನು ಕೃಷ್ಣಾ ಪೌಂಡೇಶನ್ ಗೆ ದಾನ ಮಾಡಿದ್ದಾರೆ, ವಿಶ್ವವ್ಯಾಪಿ ಗಣೇಶಗಳ ವಿಗ್ರಹಗಳನ್ನು ಕೂಡ ಅನೇಕ ದೇವಾಲಯಗಳಿಗೆ ದಾನ ಮಾಡಿದ್ದಾರೆ ಕಾರಣ ವೃದ್ಧಾಪ್ಯ ಮತ್ತು ಅವುಗಳ ಸಂರಕ್ಷಣೆಗೆ ಬೆಂಗಳೂರಲ್ಲಿ ಸ್ಥಳಾಭಾವ.
  ಆ ಕಾಲದಲ್ಲಿ ಇವರ ದೃಷ್ಟಿ ಗಣಪತಿ ಪೋಟೋ ಇಲ್ಲದ ಮನೆಯೇ ಇರಲಿಲ್ಲ ಅದೇ ರೀತಿ ಧನ್ವಂತರಿ ಶ್ಲೋಕ ಮತ್ತು ಚಿತ್ರದ ಪಟ ಕೂಡ.
   ಗಣೇಶನ ಪರಮ ಭಕ್ತರು ಆದ ಗೋವದ೯ನ ಅಂಕೋಲೆಕರ್ ಜೊತೆ ಒಂದು ದಿನ ಕಳೆದದ್ದು ಸದಾ ನೆನಪಿನಲ್ಲಿ ಉಳಿಯುವಂತಾದ್ದು ಇವರು ಗೋವಾದಲ್ಲಿ ಪ್ರಾರಂಭ ಆಗಲಿರುವ ಆಯುಷ್ ವೈದ್ಯ ಕಾಲೇಜಿಗೆ ಧನ್ವಂತರಿ ವಿಗ್ರಹಗಳ ಮಾದರಿ ತೋರಿಸಲು ಅವರ ಆಹ್ವಾನದ ಮೇಲೆ ವಾಸ್ಕೋಗೆ ಒಯ್ದಿದ್ದ ಲೋಹದ ದನ್ವಂತರಿ ವಿಗ್ರಹ ಒಂದನ್ನು ಖರೀದಿಸಿ ನನ್ನ ಟೇಬಲ್ ಮೇಲೆ ಇಟ್ಟಿದ್ದೇನೆ.
  ಗೋವರ್ದನ ಅಂಕೋಲೆಕರ್ ಸೆಲ್ ನಂಬರ್  93410 80609.
  ಇವರ ಪುತ್ರ ವಿಶ್ವವಸು ಅಂಕೋಲೆಕರ್ ಸೆಲ್ ನಂಬರ್
 98455 58427

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ