Blog number 1112. ಆನಂದಪುರಂನ ಸಾಹಿತ್ಯ ಹಬ್ಬ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ ಖ್ಯಾತ ಸಾಹಿತಿ ಅಂಕಣಕಾರ ಅರವಿಂದ ಚೊಕ್ಕಾಡಿಯವರು
#ನಾಳೆ_ದಿನಾಂಕ_11_ಡಿಸೆಂಬರ್_2022ರ_ಭಾನುವಾರ_ಬೆಳಿಗ್ಗೆ_11ರಿಂದ.
#ಆನಂದಪುರಂನ_ನಮ್ಮ_ಕೃಷ್ಣಸರಸ_ಕಲ್ಯಾಣಮಂದಿರದಲ್ಲಿ
#ಸಾಗರ_ತಾಲ್ಲೂಕ್_ಮತ್ತು_ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್ತು_ಆಯೋಜಿಸಿದೆ.
#ಸಾಹಿತ್ಯ_ಹಬ್ಬದಲ್ಲಿ_ನನ್ನೆರೆಡು_ಪುಸ್ತಕ_ಅವಲೋಕನ
#ಒಂದೇ_ಕುಟುಂಬದ_ತಂದೆ_ಮತ್ತು_ಆರು_ಮಕ್ಕಳು_ಸಾಹಿತ್ಯ_ರಚಿಸಿ_ವಿಶ್ವದಾಖಲೆ_ಮಾಡಿರುವ_ಅಂಕೋಲ_ಮೂಲದ
#ಹಬ್ಬು_ಕುಟುಂಬದವರ_ಜೊತೆ_ಸಾಹಿತ್ಯ_ಸಂವಾದ_ಪುಸ್ತಕ_ಪ್ರದರ್ಶನ.
#ಹಬ್ಬು_ಕುಟುಂಬ_ಪುಸ್ತಕ_ಪ್ರದರ್ಶನ_ಉದ್ಘಾಟನೆ_ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್ತು_ಅಧ್ಯಕ್ಷ_ಮಂಜುನಾಥರಿಂದ
#ಅಧ್ಯಕ್ಷತೆ_ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್_ಅಧ್ಯಕ್ಷ_ಬಿ_ಡಿ_ರವಿಕುಮಾರ್
#ಆಶಯ_ನುಡಿ_ಸಾಗರ_ತಾಲೂಕ್_ಸಾಹಿತ್ಯ_ಪರಿಷತ್_ಅಧ್ಯಕ್ಷ_ವಿ_ಟಿ_ಸ್ವಾಮಿಯವರಿಂದ
#ವೇದಿಕೆಯಲ್ಲಿ_ಡಿ_ಪಿ_ಸತೀಶ್_TV_18_ಸಂಸ್ಥೆ_ದಕ್ಷಿಣಭಾರತದ_ಉಸ್ತುವಾರಿ
#ತಾಳಗುಪ್ಪ_ಮೈಸೂರು_ರೈಲಿಗೆ_ಕುವೆಂಪು_ಹೆಸರು_ಸೂಚಿಸಿದವರು
#ಶಿವಮೊಗ್ಗ_ಜನಹೋರಾಟ_ದಿನಪತ್ರಿಕೆ_ಸಂಪಾದಕರಾದ_ಶೃಂಗೇಶ್
#ಜೊತೆಯಲ್ಲಿ_ನಾನು_ನೀವು
ಖ್ಯಾತ ಸಾಹಿತಿ ಉದಯ ಕುಮಾರ್ ಹಬ್ಬು ಅವರ ಗೆಳೆತನ ಪೇಸ್ ಬುಕ್ ನಲ್ಲಿ ತೀರ ಇತ್ತೀಚಿನ 2019 ರಿಂದ ಅವರ ಈವರೆಗೆ ಪ್ರಕಟವಾದ ಪುಸ್ತಕಗಳು 50ಕ್ಕೂ ಹೆಚ್ಚು, ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆ ಲೇಖನಗಳು ಸಾವಿರಕ್ಕೂ ಹೆಚ್ಚು.
ಇವರ ಪೋಸ್ಟ್ ನಲ್ಲಿ ಇವರ ತಂದೆ ಬರೆದ ಪುಸ್ತಕ ಇವರ ಸಹೋದರರ ಪ್ರಕಟವಾದ ಪುಸ್ತಕಗಳ ಉಲ್ಲೇಖ ನೋಡಿ ನನಗೇ ಆಶ್ಚರ್ಯ ಒಂದೇ ಕುಟುಂಬದಲ್ಲಿ ತಂದೆ ಮತ್ತು ಅವರ ಆರು ಮಕ್ಕಳೂ ಸಾಹಿತಿಗಳಾಗುವುದು ಮತ್ತು ಅವರ ಪುಸ್ತಗಳು ಪ್ರಕಟವಾಗುವುದು! ಈ ರೀತಿಯ ಇನ್ನೊಂದು ಉದಾಹರಿಸಬಹುದಾದ ಕುಟುಂಬ ಕನ್ನಡದಲ್ಲಿ ಇದಿಯಾ ಅಂತ ನಾನು ನನ್ನ ಗೆಳೆಯರು ಹುಡುಕಾಡಿದಾಗ ಯಾವುದೂ ಇಲ್ಲವೆಂತಲೇ ಗೊತ್ತಾಯಿತು.
ದೇಶದ ಇತರ ಬಾಷೆಯಲ್ಲಿ ಅಷ್ಟೇಕೆ ವಿಶ್ವದಲ್ಲೇ ಇಂತಹ ಅಪರೂಪದ ಕುಟುಂಬ ಎಂದು ಗೊತ್ತಾದಾಗ ನಾನು ಲೇಖನ ಬರೆದದ್ದು ಹಬ್ಬು ಸಹೋದರರಿಗೆ ಆಶ್ವಯ೯ದ ವಿಷಯ, ಇತ್ತೀಚಿಗೆ ಇಂಡಿಯನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಇವರ ದಾಖಲೆ ಮಾಡಿದೆ ಮತ್ತು ಗಿನ್ನೆಸ್ ದಾಖಲೆಯಲ್ಲೂ ಸೇರಲಿದೆ. (ಅವರಾರು ಪ್ರಚಾರ ಸನ್ಮಾನ ಬಯಸದವರು) ನಂತರ ಎಲ್ಲಾ ಸಹೋದರರು ಈ ಕಾರಣದಿಂದ ನನ್ನ ಬೇಟೆಗೆ ಬರುವ ಕಾರ್ಯಕ್ರಮ ಹಾಕಿದರು ಇದನ್ನು ಆನಂದಪುರಂನ ಉತ್ಸಾಹಿ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರರಿಗೆ ತಿಳಿಸಿದ್ದೆ.
ಅವರು ಮತ್ತು ಸಾಗರ ತಾಲ್ಲೂಕ್ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಬಂದು ಮುಖತಃ ಬೇಟಿ ಮಾಡಿ ಸಾಹಿತ್ಯ ಹಬ್ಬ ಎಂಬ ಕಾರ್ಯಕ್ರಮ ವ್ಯವಸ್ಥೆ ಮಾಡಿದರು ಇದರಲ್ಲಿ ನನ್ನ ಎರೆಡು ಪುಸ್ತಕಗಳ ಅವಲೋಕನವೂ ಸೇರಿಸಿದರು ಬೇರೆ ಕಡೆ ಆದರೆ ನಾನು ಬರುವುದಿಲ್ಲ ಅಂತ ನಮ್ಮ ಕಲ್ಯಾಣ ಮಂಟಪದಲ್ಲಿ ಸ್ಥಳಾವಕಾಶ ಪಡೆದರು, ವಿ.ಟಿ. ಸ್ಟಾಮಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಮುರುಘಾ ಮಠದ ಸರ್ಕಾರಿ ಮಾಧ್ಯಮಿಕ ಶಾಲೆ ಶಿಕ್ಷಕರಾಗಿದ್ದರು ಆಗಲೇ ನಾನು ಆ ಶಾಲಾ ಆವರಣದಲ್ಲಿ ಕೆ.ವಿ.ಸುಬ್ಬಣ್ಣ ರಂಗಮಂದಿರ ನಿರ್ಮಿಸಿ ಉದ್ಘಾಟಿಸಿದ್ದು ನಂತರ ಅವರು ಇಲ್ಲಿ ಸೇವೆ ಸಲ್ಲಿಸುವಾಗಲೇ ಆಚಾಪುರದ ಶಾಸನ - ತೀರ್ಥಗಳ ಬಗ್ಗೆ ಸಂಶೋದನಾ ಪುಸ್ತಕ ಒಂದನ್ನು ಪ್ರಕಟಿಸಿದ್ದರು.
ನನ್ನ ಕಾದಂಬರಿಯ ಮೊದಲ ಓದುಗರಾಗಿ ವಿಮಷೆ೯ ಮಾಡಿದ್ದ ಮತ್ತು ನನ್ನ ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿದ್ದ ಖ್ಯಾತ ಲೇಖಕ, ಅಂಕಣಕಾರ ಅರವಿಂದ ಚೊಕ್ಕಾಡಿ ಅವರನ್ನು ಕೂಡ ನಾನು ಬೇಟಿ ಆಗಿಲ್ಲ, ಗಾಂಧೀವಾದಿ ಆದ ಇವರ ತರ್ಕ ನನಗೆ ಇಷ್ಟ ಕೆಲವೊಮ್ಮೆ ಆ ಚರ್ಚೆಯಲ್ಲಿ ನನ್ನನ್ನು ಸೇರಿಸುತ್ತಾರೆ,ಅವರ ಅಕಾಡೆಮಿ ಪ್ರಶಸ್ತಿ ಪಡೆದ ಪುಸ್ತಕ ಕಾಣದ ತೀರ ಈಗಲೂ ನನಗೆ ಕಾಡುತ್ತಿದೆ, ಅವರ ಅಭಿಮಾನಿ ಆದ ನಾನು ಅವರಿಗೆ ಈ ಕಾರ್ಯಕ್ರಮ ಉದ್ಘಾಟಿಸಿ ನನ್ನ ಎರೆಡು ಪುಸ್ತಕ ನೀವೇ ಅವಲೋಕನ ಮಾಡಿ ಎಂದು ವಿನಂತಿಸಿದಾಗ ಒಪ್ಪಿದರು.
ಸಾಗರ ತಾಲ್ಲೂಕಿನ ಹಾಲಿ ವಿಶ್ವ ಮನ್ನಣೆಯ ಪಡೆದಿರುವ ಯುವ ಪತ್ರಕರ್ತ ಡಿ.ಪಿ. ಸತೀಶ್ ಗೆ ಆಹ್ವಾನಿಸಿದಾಗ ಅವರು ದೆಹಲಿಯಿಂದ ಬಿಡುವು ಮಾಡಿ ಬರಲಿದ್ದಾರೆ ಇವರ ವಿನಂತಿಯಿಂದಲೇ ತಾಳುಗುಪ್ಪ ಮೈಸೂರು ರೈಲು ಜಿಲ್ಲೆಯ ಹೆಮ್ಮೆಯ ಕವಿ ಕುವೆಂಪು ನಾಮಕರಣವಾದ್ದರಿಂದ ವೈಯಕ್ತಿಕವಾಗಿ ಅಭಿನಂದಿಸಲು ನನಗೆ ಅವಕಾಶ ಆಗಿದೆ.
ನನ್ನ ಎರೆಡೂ ಪುಸ್ತಕ ಅವರ ಮುದ್ರಣ ಸಂಸ್ಥೆಯಲ್ಲಿ ಅಚ್ಚುಹಾಕಿಸಿಕೊಟ್ಟ,ಕಾದಂಬರಿ ಮತ್ತು ಕಥಾ ಸಂಕಲನಕ್ಕೆ ಮುನ್ನುಡಿ ಬರೆದು ಪುಸ್ತಕ ಬಿಡುಗಡೆ ಮಾಡಿದ್ದ ಶಿವಮೊಗ್ಗ ಜನಹೋರಾಟ ದಿನಪತ್ರಿಕೆ ಶೃಂಗೇಶ್ ಕೂಡ ಬರಲು ಒಪ್ಪಿದ್ದಾರೆ.
ರಾಜ್ಯದ ಹಿರಿಯ ಪತ್ರಕರ್ತ ಆರ್.ಟಿ.ವಿಠಲಮೂರ್ತಿ ಅವರನ್ನು ಆಹ್ವಾನಿಸಿದ್ದೆ ಆದರೆ ಚುನಾವಣಾ ಪೂರ್ವ ಸಮೀಕ್ಷಾ ವರದಿಗಾಗಿ ಪ್ರವಾಸದಲ್ಲಿರುವುದರಿಂದ ಅವರು ಬರಲಾಗುತ್ತಿಲ್ಲ.
ಇದಿಷ್ಟು ನಾಳೆಯ ಕಾರ್ಯಕ್ರಮದ ನೀಲನಕ್ಷೆ.
Comments
Post a Comment