Blog number 1109. ಈಶ್ವರಪ್ಪನವರು ಉಪ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ವಿಶೇಷ ಕರ್ತವ್ಯಾಧಿಕಾರಿ ಆಗಿದ್ದ ಸಾಗರದ ಕುಗ್ವೆಯ ಮ೦ಜುನಾಥ ಶರ್ಮ ಮತ್ತು ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ.ಸುದೀ೦ದ್ರರು ನನ್ನ ಅತಿಥಿಗಳು
#ಇವತ್ತಿನ ಅತಿಥಿಗಳು ಈಶ್ವರಪ್ಪನವರು ಉಪ ಮುಖ್ಯಮಂತ್ರಿ ಆಗಿದ್ದಾಗ ಅವರ ವಿಶೇಷ ಕತ೯ವ್ಯಧಿಕಾರಿಗಳಾಗಿದ್ದ ಮಂಜುನಾಥ ಶಮಾ೯ ಮತ್ತು ಭದ್ರಾವತಿ ಆಕಾಶವಾಣಿಯಲ್ಲಿ ನಿವೃತ್ತರಾಗಿರುವ ಡಾ.ಸುದೀ೦ದ್ರ.#
ಮಂಜುನಾಥ ಶಮಾ೯ರು ಸಾಗರದ ಸಮೀಪದ ಕುಗ್ವೆಯವರು ಸಾಗರದ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಓದಿದವರು, ತಹಸೀಲ್ದಾರ್ ಆಗಿ ಶಿವಮೊಗ್ಗದಲ್ಲಿ ಲಕ್ಷ್ಮಿನಾರಾಯಣ ಜಿಲ್ಲಾಧಿಕಾರಿಗಳಾಗಿದ್ದಾಗ ಅವರೊಂದಿಗೆ ಕೇ೦ದ್ರ ಸ್ಥಾನದಲ್ಲಿ ಕೆಲಸ ನಿವ೯ಹಿಸಿದ್ದರು, ಇವರ ಅಣ್ಣ ಶ್ರೀಧರ ಪ್ರಸಾದರು ಕೃಷಿಕರು ಸಾಗರದ ಕುಗ್ವೆಯಲ್ಲಿ ಇದ್ದರು ಅವರು ತೀ ನಾ ಶ್ರೀನಿವಾಸ ಮತ್ತು ನಮ್ಮೆಲ್ಲರ ಜನಪರ ಹೋರಾಟಕ್ಕೆ ಸದಾ ಬೆಂಬಲಿಸುತ್ತಿದ್ದರು (ಇತ್ತೀಚಿಗೆ ನಿಧನರಾದರು).
ನಂತರ ಶಮಾ೯ರವರು ಈಶ್ವರಪ್ಪರ ಜೊತೆ ಇದ್ದವರು ಅವರು ಉಪ ಮುಖ್ಯಮಂತ್ರಿ ಆಗಿದ್ದಾಗಲೂ ಸೇವೆ ಸಲ್ಲಿಸಿದವರು ಮತ್ತು ಯಾವುದೇ ಕಳOಕ ಇಲ್ಲದೆ ಒಳ್ಳೆಯ ಹೆಸರು ಪಡೆದು ಈಗ ನಿವೃತ್ತರಾಗಿ ಕುಟು೦ಬದೊಂದಿಗೆ ಸ೦ತೃಪ್ತ ಜೀವನ ನಡೆಸುತ್ತಿದ್ದಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.
ಡಾ.ಸುದೀOದ್ರ ಭದ್ರಾವತಿ ಆಕಾಶವಾಣಿಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಅದೇ ಸಮಯದಲ್ಲಿ ರೇಡಿಯೋ ನಾಟಕಗಳ ಬಗ್ಗೆ ಸಂಶೋದನೆ ಮಾಡಿ ಡಾಕ್ಟರೇಟ್ ಪಡೆದವರು ನಿವೃತ್ತರಾದರೂ ಡಿಜಿಟಲ್ ಮೀಡಿಯಾದಲ್ಲಿ ಸದಾ ಬಾಗಿಯಾಗಿದ್ದಾರೆ ಒಂದು ವಿಶೇಷ ಅಂದರೆ ಸಾಗರದಲ್ಲಿ ನಮಗೆ ವಿಜ್ಞಾನ ಶಿಕ್ಷಕರಾಗಿದ್ದ ನಂತರ ರಾಷ್ಟ್ರ ಪ್ರಶಸ್ತಿ ವಿಜೇತ ಪೋಟೋಗ್ರಾಪರ್ ಆಗಿದ್ದ ಹನುಮ೦ತ ಜೊಯಿಸರ ಕಿರಿಯ ಸಹೋದರ ಇವರು.
ರಾಜಕಾರಣ, ಜಿಲ್ಲೆಯ ಇತರ ವಿಚಾರಗಳ ಮಾತಾಡುತ್ತಾ ನನ್ನ ಆತಿಥ್ಯದ ಕಾಪಿ ನೀಡಿದೆ, ಸಾಗರ ತಾಲ್ಲೂಕಿನವರೆ ಆದ RT ವಿಠಲಮೂತಿ೯ಯವರ ಪುಸ್ತಕ ಸವಿ ನೆನಪಿಗಾಗಿ ನೀಡಿದೆ.
Comments
Post a Comment