Blog number 1125. ಸಾಗರದ ಶಾಸಕರು ಹಾಲಿ MSIL ಅಧ್ಯಕ್ಷರೂ ಆದ ಹರತಾಳು ಹಾಲಪ್ಪನವರು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕ ಪುಸ್ತಕದ ಅಂಗಡಿಯಲ್ಲಿ ಖರೀದಿಸಿ ಓದಿ ಪ್ರಶಂಸಿಸಿ ಪತ್ರ ಬರೆದಿದ್ದಾರೆ.
#ಸ್ವತಃ_ಪೇಸ್_ಬುಕ್_ವಾಟ್ಸಪ್_ಬಳಸುವವರೆಷ್ಟು ?
#ಪುಸ್ತಕ_ಖರೀದಿಸಿ_ಓದಿ_ಪ್ರಶಂಸಿಸಿ_ಪತ್ರ_ಬರೆದ_ಶಾಸಕರು_ಹರತಾಳು_ಹಾಲಪ್ಪನವರು.
#ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ.
#ಕೆಳದಿ_ಅರಸರ_ಮೂಲ_ದೀವರಾಗಿದ್ದಾರೆ_ಈ_ಬಗ್ಗೆ_ಸಂಶೋದನೆಗಳಾಗಲಿ.
ಇವತ್ತು ಅಂಚೆಯಲ್ಲಿ ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಮಂತ್ರಿಗಳೂ ಹಾಲಿ ಅಧ್ಯಕ್ಷರು MSIL ಆದ ಹರತಾಳು ಹಾಲಪ್ಪರ ಪತ್ರ ಓದಿ ಸಂತೋಷ ಆಯಿತು.
ಇತಿಹಾಸದ ಆಸಕ್ತಿ, ಪತ್ರಿಕೆಗಳ ನಿರಂತರ ಓದು, ಸ್ವತಃ ಪೇಸ್ ಬುಕ್, ವಾಟ್ಸ್ ಪ್ ನಿರ್ವಹಿಸುವ ಹಾಲಪ್ಪನವರು ಮಾತಾಡಲು ನಿಂತರೆ ಬಂಗಾರಪ್ಪರಂತೆ ವಾಗ್ಜರಿ ಹರಿಸುತ್ತಾರೆ.
ಇವತ್ತಿನ ರಾಜಕಾರಣಿಗಳಲ್ಲಿ ಇವೆಲ್ಲ ಅಪರೂಪ,ಅವರ ಪೇಸ್ ಬುಕ್ ನಿರ್ವಹಣೆ ಮಾಸಿಕ 15 ಸಾವಿರ ನೀಡಿ ಹೊರಗುತ್ತಿಗೆ ನೀಡಿರುತ್ತಾರೆ, ನಿತ್ಯ ಪತ್ರಿಕೆ ಓದುವುದೂ ಇಲ್ಲ, ಪುಸ್ತಕಗಳಂತೂ ಮುಟ್ಟುವುದೂ ಇಲ್ಲ, ಪತ್ರ/ಅರ್ಜಿ ಬರೆದರೆ ಉತ್ತರಿಸುವುದೂ ಇಲ್ಲ ಆದರೆ ಹರತಾಳು ಹಾಲಪ್ಪನವರು ಬಿನ್ನರಾಗಿ ಕಾಣುತ್ತಾರೆ.
ಇವರು ನನ್ನ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ" #ಬೆಸ್ತರ_ರಾಣಿ_ಚಂಪಕಾ ಪುಸ್ತಕ ಸಾಗರದಲ್ಲಿ ಪುಸ್ತಕದ ಅಂಗಡಿಯಲ್ಲಿ ಖರೀದಿಸಿ ಓದಿ ಬರೆದ ಪತ್ರ ಇಲ್ಲಿ ಲಗತ್ತಿಸಿದ್ದೇನೆ ಓದಿ.
ಕೆಳದಿ ಸಾಮ್ರಾಜ್ಯದಲ್ಲಿ ದೀರ್ಘ ಅವದಿ ಅಂದರೆ 43 ವರ್ಷ ಆಡಳಿತ ಮಾಡಿ ಸಾಮ್ರಾಜ್ಯ ವಿಸ್ತರಿಸಿದ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಎಂಬ ಪಟ್ಟಣವೇ ಈಗಿನ ಸಾಗರ ಪಟ್ಟಣ.
ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ಈ ಪಟ್ಟಣ ನಿರ್ಮಿಸಿದ್ದು ಈಗಿನ ಗಣಪತಿ ಕೆರೆಯೆ ಸದಾಶಿವ ಸಾಗರ.
ಮಾಂಸಹಾರಿ ಶೂದ್ರ ಹೆಣ್ಣು ಮಗಳ ರಂಗೋಲಿಯಿಂದ ಆಕರ್ಷಿತರಾಗಿ ಮದುವೆ ಆಗಿದ್ದು ಪಟ್ಟದ ರಾಣಿ ಭದ್ರಮ್ಮಾಜಿ ಅವರಿಗೆ ಆಗಿ ಬರದೆ ಅನ್ನಾಹಾರ ತ್ಯಜಿಸಿ ಮೃತರಾಗುವುದು ಇದರಿಂದ ನೊಂದ ಬೆಸ್ತರ ರಾಣಿ ಚಂಪಕಾ ವಜ್ರದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಪ್ರೇಮ ಸೌಧವೆ ಆನಂದಪುರಂನ ಚಂಪಕ ಸರಸ್ಸು ಈ ಸ್ಮಾರಕಕ್ಕೆ 2025ರಲ್ಲಿ 400 ನೇ ವರ್ಷಾಚಾರಣೆ ಇದೆ.
ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸಾಗರದ ಈಗಿನ ಶಾಸಕರು ಹಾಲಪ್ಪನವರು, ಇವರ ಕಾಳಜಿಯಿಂದಲೇ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಗಣಪತಿ ಕೆರೆ ಅಭಿವೃದ್ಧಿ ಆಗುತ್ತಿದೆ,ಮುಂದಿನ ದಿನಗಳಲ್ಲಿ ಚಂಪಕ ಸರಸ್ಸುವಿನ ಅಭಿವೃದ್ಧಿ ಕೂಡ ಇವರೇ ಮಾಡಬಹುದಾಗಿದೆ.
ಈ ಪ್ರೇಮದ ಸ್ಮಾರಕ ತಾಜ್ ಮಹಲಿಗಿಂತ 28 ವಷ೯ ಮೊದಲೇ ನಿರ್ಮಾಣವಾಗಿದೆ ಅನ್ನುವುದೇ ಒಂದು ವಿಶೇಷ.
ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯೇ ರಾಜ ವೆಂಕಟಪ್ಪ ನಾಯಕರನ್ನು ಜಾತಿ ಕಾರಣದಿಂದ ಇತಿಹಾಸದಲ್ಲಿ ಮುಸುಕು ಮಾಡಲು ಕಾರಣವಾಗಿದೆ, ರಾಜಾಶ್ರಯದ ಕವಿಗಳೂ ಇದನ್ನು ದಾಖಲಿಸಲು ಸಾಧ್ಯವೂ ಇಲ್ಲ.
ಕೆಳದಿ ಅರಸರ ಮೂಲ ಅವರು ಈ ಭಾಗದ ಬಹುಸಂಖ್ಯಾತ ದೀವರ ಜಾತಿಯವರು ಈ ಬಗ್ಗೆ 10 ನೇ ಶತಮಾನದ ಶಿಲಾ ಶಾಸನಗಳಲ್ಲಿ ಕಾಣಬಹುದು ಆದರೆ ಇದನ್ನು ಹೇಳಲು ಬರೆಯಲು ಅಗೋಚರ ಭಯ ಈ ಜನಾಂಗದಲ್ಲಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಬರಹಗಳು ಬರಬಹುದು.
ಮಾನ್ಯ ಶಾಸಕರಲ್ಲಿ ವಿನಂತಿ ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಮಾಡುವಂತೆ ಸಾಗರ ಪಟ್ಟಣದಲ್ಲಿನ ರಸ್ತೆ, ರಂಗಮಂದಿರಗಳಿಗೆ ಅವರ ಹೆಸರು ಇಡಬೇಕು.
ಆನಂದಪುರಂನಲ್ಲಿ ಕನ್ನಡ ಸಂಘದ ಎದುರು ಪದವಿ ಪೂರ್ವ ಕಾಲೇಜ್ ಮತ್ತು ಕೆ.ಎಂ.ಎಸ್ ರೈಸ್ ಮಿಲ್ ಮಧ್ಯದ ಹಾಳು ಬಿದ್ದಿರುವ ನಕಾಶೆ ಕಂಡ ರಸ್ತೆ ರಾಜರು ನಿರ್ಮಿಸಿದ ಚಂಪಕ ಸರಸ್ಸು ರಸ್ತೆ ಇದನ್ನು ಸರಿಪಡಿಸಿ ಚಂಪಕ ಸರಸ್ಸುವಿಗೆ ವೀಕ್ಷಣೆಗೆ ಪ್ರವಾಸಿಗಳಿಗೆ ಅನುವು ಮಾಡಿ ಕೊಡಲು ವಿನಂತಿಸುತ್ತೇನೆ.
ವಂದನೆಗಳೊಂದಿಗೆ
ಕೆ.ಅರುಣ್ ಪ್ರಸಾದ್.
17-ಡಿಸೆಂಬರ್ -2022.
Comments
Post a Comment