Blog number 1140. ಶಿವಮೊಗ್ಗ ಮುನೀರ್ ನೆನಪಿನ ಸರಣಿ-4. ಸಹ್ಯಾದ್ರಿ ಕಾಲೇಜಿನಲ್ಲಿ ನಿತ್ಯೋತ್ಸವ ಕವಿ ನಿಸಾರ್ ಆಹಮದ್ ಗುರುಗಳಾಗಿದ್ದು, ಬೆಂಗಳೂರಲ್ಲಿ ಬಿ.ವಿ.ಕಾರಂತರ ನಿರ್ಧೇಶನದಲ್ಲಿ ಪ್ರದರ್ಶನ ಕಂಡ ಹಯವದನ ನಾಟಕದ ಪ್ರಾಯೋಜಕತ್ವ ಶಿವಮೊಗ್ಗದ ಕನ್ನಡಾಭಿಮಾನಿ, ಸಾಹಿತ್ಯ ಪೋಷಕ, ಉದ್ಯಮಿ ಹಿರೇಹಾಳ್ ಇಬ್ರಾಹಿಂ ಸಾಹೇಬರಿಂದ ಅವತ್ತೆ ಇಬ್ರಾಹಿಂ ಸಾಹೇಬರ ಪರಿಚಯ ಮುಂದೆ 45 ವರ್ಷ ಮುಂದುವರಿದ ಕಥೆ.
#ಶಿವಮೊಗ್ಗ_ಮುನೀರ್_ನೆನಪಿನ_ಸರಳಿ_4.
#ನಿತ್ಯೋತ್ಸವದ_ನಿಸಾರ್_ಆಹಮದ್_ಗುರುಗಳು
#ಅವರ_ಶಿಪಾರಸ್ಸಿನಿಂದ_ಹೆಚ್_ಇಬ್ರಾಹಿಂ_ಸಾ೦ಗತ್ಯ
#ನಲವತೈದು_ವರ್ಷಗಳ_ಕಾಲ_ಅವರ_ಸಾಹಿತ್ಯ_ರಾಯಭಾರಿ.
#ಕುವೆಂಪು_ಬರೆದ_ರಕ್ತಾಕ್ಷಿ_ನಾಟಕ_ಶೇಕ್ಸಪೀಯರ್_ಆದಾರಿತ_ಕೆಳದಿ_ವಂಶಸ್ಥರದ್ದು.
#ನಾಟಕ_ಪೂರ್ತಿ_ನೋಡಿದ_ಕುವೆಂಪು.
ಶಿವಮೊಗ್ಗ ಮುನೀರ್ ಎಲೆಯ ಮರೆಯ ಕಾಯಿಯಂತೆ ಕನ್ನಡ ಸಾಹಿತ್ಯ ಲೋಕದ ರಾಯಭಾರಿಗಳು ಆದರೆ ಅವರು ಶಿವಮೊಗ್ಗದ ಉಧ್ಯಮಿ ಹಿರೇಹಾಳ್ ಇಬ್ರಾಹಿಂ ಸಾಹೇಬರ ಸಾಹಿತ್ಯದ ರಾಯಬಾರಿ ಆಗಿ ಮಾತ್ರ ನೋಡಿದರೆ ತಪ್ಪಾಗುತ್ತದೆ.
ಸಹ್ಯಾದ್ರಿ ಕಾಲೇಜಿನಲ್ಲಿ ಕವಿ ನಿತ್ಯೋತ್ಸವದ ಖ್ಯಾತಿಯ ನಿಸಾರ್ ಆಹಮದ್ ಶಿವಮೊಗ್ಗ ಮುನೀರರ ಗುರುಗಳು.
ಇವರಿಂದಲೇ ಖ್ಯಾತ ಉದ್ಯಮಿ ಕನ್ನಡ ಸಾಹಿತ್ಯದ ಪೋಷಕರಾದ ಹಿರೇಹಾಳ್ ಇಬ್ರಾಹಿಂ ಅವರ ಪರಿಚಯ, ಇದು 1972 ರಲ್ಲಿ ಪ್ರಾರಂಭವಾಗಿ ಅವರ ಅ0ತ್ಯ ಕಾಲ 2017ರ ವರೆಗೆ ಸುಮಾರು 45 ವರ್ಷದಷ್ಟು ದೀರ್ಘಕಾಲ ಮುಂದುವರಿದಿತ್ತು.
ಬೆಂಗಳೂರಿನಲ್ಲಿ ಗಿರೀಶ್ ಕಾರ್ನಾಡ್ ರು ಬರೆದ ನಾಟಕ ಬಿ.ವಿ.ಕಾರಂತರ ನಿರ್ದೇಶನದಲ್ಲಿ ರಂಗ ಪ್ರದರ್ಶನ ಮಾಡಿದ ಹಯವದನ ನಾಟಕಕ್ಕೆ ಹಿರೇಹಾಳ್ ಇಬ್ರಾಹಿಂ ಸಾಹೇಬರು ಪ್ರಾಯಾಜೊಕತ್ವದಲ್ಲಿ ನಡೆದಾಗ ಇವರ ಮೊದಲ ಬೇಟಿ.
ಶಿವಮೊಗ್ಗ ಮುನೀರ್ ಮೈಸೂರಲ್ಲಿ ಪಿಯುಸಿ ವಿದ್ಯಾರ್ಥಿ ಆಗಿದ್ದಾಗ ಕುವೆಂಪು ಅವರು ಶೇಕ್ಸಪಿಯರ್ ನಾಟಕವನ್ನು ಕೆಳದಿ ಸಂಸ್ಥಾನದ ಕೊನೆಯ ರಾಜರ ಆಳ್ವಿಕೆಯ ಘಟನೆಗೆ ಸಮ್ಮಿಳನ ಮಾಡಿದ #ರಕ್ತಾಕ್ಷಿ ನಾಟಕ 5 ನಿಮಿಷ ಮಾತ್ರ ನೋಡಲು ಬಂದ ಕುವೆಂಪು ಅವರು ಪೂತಿ೯ ನಾಟಕ ನೋಡಿ ಅಭಿನಂದಿಸುತ್ತಾರೆ. ಈ ನಾಟಕದ ಮುಖ್ಯ ಪಾತ್ರ ರುದ್ರಾಂಬೆ ಪಾತ್ರ ಶಿವಮೊಗ್ಗ ಮುನೀರರದ್ದು ಈಗಲೂ ಈ ಪಾತ್ರದ ಸಂಭಾಷಣೆ ಅವರು ಹೇಳುತ್ತಾರೆಂದರೆ ಅವರ ನೆನಪಿನ ಶಕ್ತಿಗೆ ನಮಿಸಲೇ ಬೇಕು.
Comments
Post a Comment