Blog number 1116. ಭಾಗ - 3 .ಆನಂದಪುರಂ ಸಾಹಿತ್ಯ ಹಬ್ಬ, ತಾಳಗುಪ್ಪ - ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ರಾಷ್ಟ್ರಕವಿ ಕುವೆಂಪು ನಾಮಕರಣಕ್ಕೆ ಕಾರಣರಾದ ಖ್ಯಾತ ಪತ್ರಕರ್ತ ಡಿ.ಪಿ. ಸತೀಶ್ ಗೆ ಸಾಗರ ತಾಲ್ಲೂಕ್ ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್ ನಿಂದ ಅಭಿನಂದನೆ ಸಲ್ಲಿಕೆ.
#ಆನಂದಪುರಂ_ಸಾಹಿತ್ಯ_ಹಬ್ಬ
#ಸಬೆ_ಸಮಾರಂಭ_ಸನ್ಮಾನಗಳಲ್ಲಿ_ಭಾಗಿ_ಆಗದವರು_ನನ್ನ_ಅತಿಥಿ
#ತಾಳಗುಪ್ಪ_ಮ್ಮೆಸೂರು_ಎಕ್ಸಪ್ರೆಸ್_ರೈಲಿಗೆ_ಕುವೆಂಪು_ನಾಮಕರಣ_ಮಾಡಿಸಿದವರು.
#CNN_NEWS_18_Group_Editorial_Advisor_South_ಡಿ_ಪಿ_ಸತೀಶ್
ಸಾಗರ ತಾಲ್ಲೂಕಿನ ಕಾರ್ಗಲ್ ಸಮೀಪದ ಕೊಳಚಗಾರಿನ ಡಿ.ಪಿ. ಸತೀಶ್ ತಾಳಗುಪ್ಪದ ನಲ೦ದಾ ಪ್ರೌಡ ಶಾಲಾ ವಿದ್ಯಾರ್ಥಿ ನಂತರ ಸಾಗರದ ಲಾಲ್ ಬಹದ್ದೂರ್ ಕಾಲೇಜ್ ಪದವಿ ವ್ಯಾಸಂಗ ಮಾಡಿ ಚೆನೈನಲ್ಲಿ ಏಷಿಯನ್ ಏಜ್ ಕಾಲೇಜ್ ಆಫ್ ಜನ೯ಲಿಸಂ ನಲ್ಲಿ ರ್ಯಾಂಕ್ ಪಡೆದು ಮೊದಲ ವೃತ್ತಿ ಪಾರ್ಲಿಮೆಂಟ್ ವರದಿಗಾರರಾಗಿ ಸಿಸೋಡಿಯರ ಜೊತೆ (ದೆಹಲಿಯ ಈಗಿನ ಆಮ್ ಆದ್ಮಿ ಪಾರ್ಟಿ ಉಪ ಮುಖ್ಯಮಂತ್ರಿ) ದೆಹಲಿಯಲ್ಲಿ ಪ್ರಾರಂಬಿಸಿದ್ದರು.
ಈಗ ದೇಶ ಅಂತಾರಾಷ್ಟ್ರೀಯ ಪತ್ರಿಕೋಧ್ಯಮದಲ್ಲಿ ಇವರದ್ದು ದೊಡ್ಡ ಹೆಸರು ಹಾಲಿ TV 18 ಬ್ರಾಡ್ ಕಾಸ್ಟ್ ಲಿಮಿಟೆಡ್ ಗ್ರೂಪ್ ಎಡಿಟೋರಿಯಲ್ ಅಡ್ವೆಸರ್ ಆಗಿ ದಕ್ಷಿಣ ಭಾರತ, ಶ್ರೀಲಂಕ ಮತ್ತು ಮಾರಿಷಸ್ ಗಳ ಉಸ್ತುವಾರಿ ಇವರದ್ದು IBN Live, IBN 7, HISTORY Tv18,Forbes,CNBC TV18,CNN NEWS18 ಹೀಗೆ ಅನೇಕ ಚಾನಲ್ ಗಳ ಸಂಸ್ಥೆಯಲ್ಲಿದ್ದಾರೆ.
ತಾಳಗುಪ್ಪ ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಕೇಂದ್ರ ಸರ್ಕಾರ ನಾಮಕರಣ ಮಾಡಲು ಇವರೇ ಕಾರಣಕರ್ತರು.
ನನ್ನ ಎರೆಡೂ ಪುಸ್ತಕ ಓದಿದ್ದಾರೆ ಮತ್ತು ಮುಂದಿನ ವರ್ಷ ಪ್ರಕಟವಾಗಲಿರುವ ನನ್ನ ಮೂರನೆ ಪುಸ್ತಕ ಆನಂದಪುರಂ ಇತಿಹಾಸ ಪುಸ್ತಕಕ್ಕೆ ಇವರ ಪ್ರೇರಣೆ ಆದ್ದರಿಂದಲೇ ಆನಂದಪುರಂ ನಲ್ಲಿ ಸಾಹಿತ್ಯ ಪರಿಷತ್ ನನ್ನ ಪುಸ್ತಕಗಳ ಅವಲೋಕನದ ಸಾಹಿತ್ಯ ಹಬ್ಬಕ್ಕೆ ಇವರನ್ನ ಅತಿಥಿ ಆಗಿ ಆಹ್ವಾನಿಸಿದ್ದೆ, ಯಾವುದೇ ಸಬೆ - ಸಮಾರಂಭ - ಸನ್ಮಾನದಿಂದ ದೂರವಿರುವ ಸತೀಶ್ ನನ್ನ ಕರೆಗೆ ಓಗೊಟ್ಟು ಬಂದು ಸಭೆಯಲ್ಲಿ ಬಾಷಣವೂ ಮಾಡಿದರೂ ಅವರಿಗೆ ಇಷ್ಟ ಇಲ್ಲದಿದ್ದರೂ ತಾಳಗುಪ್ಪ - ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಕುವೆಂಪು ಹೆಸರಿನ ನಾಮಕರಣಕ್ಕೆ ಕಾರಣಕರ್ತರಾದ ಇವರಿಗೆ ಸಾಗರ ಸಾಹಿತ್ಯ ಪರಿಷತ್ ಮತ್ತು ಆನಂದಪುರಂ ಹೋಬಳಿ ಸಾಹಿತ್ಯ ಪರಿಷತ್‌ನಿಂದ ಸನ್ಮಾನಿಸಲಾಯಿತು.
Comments
Post a Comment