Skip to main content

Posts

Showing posts with the label Tobbaco chewers bad habit is everywhere spitting

#ಗುಟ್ಕಾ ಜಗಿ -ಎಲ್ಲೆಂದರಲ್ಲಿ ಉಗಿ!?....... ಕೊರಾನ ನಿಯಂತ್ರಣ ಕಾನೂನಿನಿಂದಾದರೂ ಸ್ವಚ್ಚ ಭಾರತ ಆದೀತೆ?

#ಕೊರಾನಾ_ಲಾಕ್_ಡೌನ್_ಡೈರಿ_2020  #ಲೆಟರ್_ನಂ_16. #ದಿನಾ೦ಕ_16_ಏಪ್ರಿಲ್_2020 *ಕೊರಾನಾ ಕಾಲದಲ್ಲೇ ಎಲ್ಲೆ೦ದರಲ್ಲಿ ಉಗುಳುವವರಿಗೆ ತಿದ್ದಿ ಸರಿ ದಾರಿಗೆ ತರಲು ಒಂದು ಅವಕಾಶ ಆಗಿದೆ.*     ಆಗಿನ ಬಿಜಾಪುರ ಈಗಿನ ವಿಜಯಪುರದ ಗೋಲ್ ಗುಮ್ಮಜ್ ನೋಡಲು ಮೆಟ್ಟಲೇರುವಾಗ ಪ್ರತಿ ಮೂಲೆಯು ಗುಟ್ಕಾ ಪ್ರಿಯರ ಉಗುಳಿನ ಪೀಕುದಾನಿ ಆಗಿದ್ದು ನೋಡಿ ಬೇಸರ ಆಯಿತು ಬರುವಾಗ ಅಲ್ಲಿನ ಪ್ರವೇಶಕ್ಕೆ ಟಿಕೇಟು ನೀಡುವ ಕೌ೦ಟರಿನಲ್ಲಿದ್ದ ಅಧಿಕಾರಿಗೆ ಈ ಬಗ್ಗೆ ಹೇಳಿದಾಗ ಅವರು ಹೇಳಿದ್ದು ಸಕಾ೯ರ ಈ ಪಾನ್ ಬಂದ್ ಮಾಡದೇ ಇದೆಲ್ಲ ಬದಲಿಸಲು ಸಾಧ್ಯವಿಲ್ಲ ಅಂತ, ಅವರೂ ಗುಟ್ಕಾ ಜಗೀತಾ ಇದ್ದರು.   ಶಿವಮೊಗ್ಗದ ಹಳೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಲ ಮೂಲೆಗಳಲ್ಲೂ ಇದೇ ಕಥೆ ಈಗ ಹೊಸ ಜಿಲ್ಲಾಧಿಕಾರಿ ಕಚೇರಿ ನಾನು ನೋಡಿಲ್ಲ.    ಬಸ್ಗಳಲ್ಲಿ ರೈಲಿನಲ್ಲಿ ಎಲ್ಲೆ ನೋಡಿದರು ಮೂಲೆ ಮೂಲೆಯೂ ಗುಟ್ಕಾ ಪೀಕುದಾನಿಗಳಾಗಿ ಅಲ್ಲಿ ಕುಳಿತು ಪ್ರಯಾಣ ಮಾಡಲು ಕಷ್ಟ ಆಗಿದೆ.    ಅತಿ ಸಣ್ಣ ವಯಸಿನ ಮಕ್ಕಳೇ ಈ ವ್ಯಸನಕ್ಕೆ ದಾಸರಾಗುತ್ತಿರುವುದು ಒಂದು ಸಾಮಾಜಿಕ ಕಂಟಕವಾಗಿದೆ.   ಇದು ಕ್ಯಾನ್ಸರ್ ಗೆ ಕಾರಣ ರದ್ದಾಗಲಿ ಎಂದರೆ ಅಡಿಕೆ ಬೆಳೆಗಾರರು ಬಿಡುವುದಿಲ್ಲ. ಕೆಲವು ರಾಜ್ಯದಲ್ಲಿ ಇದು ಸಂಪೂಣ೯ ನಿಷೇದವಾದರೂ ಅಡಿಕೆ ಪುಡಿ ಒಂದು ಪಟ್ಟಣದಲ್ಲಿ ಹಾಕಿದ್ದು ಮಾರಾಟ ಮಾಡಲು ಯಾವುದೇ ತೊ೦ದರೆ ಇಲ್ಲ ಇನ್ನೋOದು ಪೊಟ್ಟ...