Skip to main content

Posts

Showing posts with the label Yearly renewal order of Gutka Ban

4098. ಇದು_ಬ್ರೇಕಿಂಗ್_ಸುದ್ದಿ_ಅಂತೆ_ಹೌದಾ ?!....ಇದು_2014ರಿಂದ_ಪ್ರತಿ_ವರ್ಷ_ನವೀಕರಣ_ಮಾಡುವ_ಪ್ರಕ್ರಿಯೆ

ಇದು_ಬ್ರೇಕಿಂಗ್_ಸುದ್ದಿ_ಅಂತೆ_ಹೌದಾ ?!.... ಇದು_2014ರಿಂದ_ಪ್ರತಿ_ವರ್ಷ_ನವೀಕರಣ_ಮಾಡುವ_ಪ್ರಕ್ರಿಯೆ.     ಈ ಲೇಖನದಲ್ಲಿ ಪೂರ್ಣ ಮಾಹಿತಿ ಇದೆ ಓದಿ ನಮ್ಮ ರಾಜ್ಯದಲ್ಲಿ ಗುಟ್ಕಾ ರದ್ದು ಆದೇಶ ಹೊಸದಾಗಿ ಜಾರಿ ಆದಂತೆ ಸುದ್ದಿ ಮಾಧ್ಯಮದ ಸುದ್ದಿ ಸರಿ ಅಲ್ಲ.   ಕರ್ನಾಟಕದಲ್ಲಿ ಗುಟ್ಕಾ ಮತ್ತು ತಂಬಾಕು/ನಿಕೋಟಿನ್ ಹೊಂದಿರುವ ಪಾನ್ ಮಸಾಲಾದ ಉತ್ಪಾದನೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟವನ್ನು 2013ರ ಮೇ 31 ರಂದು ರಾಜ್ಯದಾದ್ಯಂತ ಅಧಿಕೃತವಾಗಿ ನಿಷೇಧಿಸಲಾಯಿತು.   ​ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆಯಡಿ ಈ ನಿಷೇಧವನ್ನು ಜಾರಿಗೊಳಿಸಲಾಗಿದ್ದು, ಪ್ರತಿ ವರ್ಷ ಸರ್ಕಾರವು ಈ ನಿಷೇಧದ ಆದೇಶವನ್ನು ನವೀಕರಿಸುತ್ತಾ ಬಂದಿದೆ.   ಕರ್ನಾಟಕದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧದ ಆದೇಶವನ್ನು ಪ್ರತಿ ವರ್ಷ ನವೀಕರಿಸಲು ಮುಖ್ಯ ಕಾನೂನು ಮತ್ತು ಆಡಳಿತಾತ್ಮಕ ಕಾರಣಗಳು ಇಲ್ಲಿವೆ.  ​ ಕೇಂದ್ರ ಸರ್ಕಾರದ 'ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ 2006ರ ಪ್ರಕಾರ ರಾಜ್ಯದ ಆಹಾರ ಸುರಕ್ಷತಾ ಆಯುಕ್ತರಿಗೆ (Food Safety Commissioner) ಯಾವುದೇ ಹಾನಿಕಾರಕ ಆಹಾರ ಪದಾರ್ಥವನ್ನು ಗರಿಷ್ಠ 1 ವರ್ಷದ ಅವಧಿಗೆ ಮಾತ್ರ ನಿಷೇಧಿಸುವ ಅಧಿಕಾರವಿರುತ್ತದೆ.  ​ಕಾನೂನುಬದ್ಧ ಸವಾಲುಗಳನ್ನು ಎದುರಿಸಲಿಕ್ಕಾಗಿ ಪ್ರತಿ ವರ್ಷ ನಿಶೇದ ನವೀಕರಣ ಮಾಡುತ್ತಾರೆ.  ಒ...