NEET_ಪರೀಕ್ಷೆಯೇ_ಜೀವನದ_ಅಂತಿಮ_ಸಾದನೆ_ಆಗಬೇಕಿಲ್ಲ. ಪ್ರತಿ ವರ್ಷ ಸುಮಾರು 22ರಿಂದ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತದಲ್ಲಿ NEET-UG ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ಇವರಲ್ಲಿ ಪರೀಕ್ಷೆ ಬರೆದು ಅರ್ಹತೆ ಪಡೆಯುವವರ ಸಂಖ್ಯೆ ಸುಮಾರು 11 ರಿಂದ 13 ಲಕ್ಷದಷ್ಟಿರುತ್ತದೆ. ಆದರೆ ಅರ್ಹತೆ ಪಡೆದವರೆಲ್ಲರಿಗೂ ವೈದ್ಯಕೀಯ ಸೀಟು ಸಿಗುವುದಿಲ್ಲ,ಭಾರತದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ ಪ್ರತಿ ವರ್ಷ ಅಂದಾಜು 1.2 ರಿಂದ 1.3 ಲಕ್ಷ ವಿದ್ಯಾರ್ಥಿಗಳು ಮಾತ್ರ MBBS ಕೋರ್ಸ್‌ಗೆ ಪ್ರವೇಶ ಪಡೆದು ವೈದ್ಯರಾಗುವತ್ತ ಹೆಜ್ಜೆಯಿಡುತ್ತಾರೆ. ನೀಟ್ ಉತ್ತೀರ್ಣರಾಗದಿದ್ದರೆ ಬೇರೆ ವೈದ್ಯಕೀಯ ಕ್ಷೇತ್ರದ ಅವಕಾಶಗಳು ಇಲ್ಲವೆ?... ಖಂಡಿತಾ ಇದೆ ಮುಂದಿನ ದಿನಗಳಲ್ಲಿ ಹೆಚ್ಚು ವೇತನ ಸಿಗುವ ವೈದ್ಯಕೀಯ ಶಿಕ್ಷಣ ಮಾಡಲು ವಿವರಗಳು ಇಲ್ಲಿದೆ. ಇಂದಿನ ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಕೇವಲ ಎಂಬಿಬಿಎಸ್ MBBS ವೈದ್ಯರಷ್ಟೇ ಮುಖ್ಯವಲ್ಲ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಈ ತಾಂತ್ರಿಕ ತಜ್ಞರ ಪಾತ್ರವೂ ಅಷ್ಟೇ ದೊಡ್ಡದಿದೆ. ನೀಟ್ NEET ಪಾಸು ಮಾಡದಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ Allied Health Science ಕೋರ್ಸ್‌ಗಳನ್ನು ಮಾಡುವ ಮೂಲಕ ಅತ್ಯುತ್ತಮ ವೇತನ ಹಾಗೂ ಗೌರವಾನ್ವಿತ ವ...