NEET_ಪರೀಕ್ಷೆಯೇ_ಜೀವನದ_ಅಂತಿಮ_ಸಾದನೆ_ಆಗಬೇಕಿಲ್ಲ.
ಪ್ರತಿ ವರ್ಷ ಸುಮಾರು 22ರಿಂದ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತದಲ್ಲಿ NEET-UG ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ.
ಇವರಲ್ಲಿ ಪರೀಕ್ಷೆ ಬರೆದು ಅರ್ಹತೆ ಪಡೆಯುವವರ ಸಂಖ್ಯೆ ಸುಮಾರು 11 ರಿಂದ 13 ಲಕ್ಷದಷ್ಟಿರುತ್ತದೆ.
ಆದರೆ ಅರ್ಹತೆ ಪಡೆದವರೆಲ್ಲರಿಗೂ ವೈದ್ಯಕೀಯ ಸೀಟು ಸಿಗುವುದಿಲ್ಲ,ಭಾರತದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ
ಪ್ರತಿ ವರ್ಷ ಅಂದಾಜು 1.2 ರಿಂದ 1.3 ಲಕ್ಷ ವಿದ್ಯಾರ್ಥಿಗಳು ಮಾತ್ರ MBBS ಕೋರ್ಸ್‌ಗೆ ಪ್ರವೇಶ ಪಡೆದು ವೈದ್ಯರಾಗುವತ್ತ ಹೆಜ್ಜೆಯಿಡುತ್ತಾರೆ.
ನೀಟ್ ಉತ್ತೀರ್ಣರಾಗದಿದ್ದರೆ ಬೇರೆ ವೈದ್ಯಕೀಯ ಕ್ಷೇತ್ರದ ಅವಕಾಶಗಳು ಇಲ್ಲವೆ?...
ಖಂಡಿತಾ ಇದೆ ಮುಂದಿನ ದಿನಗಳಲ್ಲಿ ಹೆಚ್ಚು ವೇತನ ಸಿಗುವ ವೈದ್ಯಕೀಯ ಶಿಕ್ಷಣ ಮಾಡಲು ವಿವರಗಳು ಇಲ್ಲಿದೆ.
ಇಂದಿನ ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಕೇವಲ ಎಂಬಿಬಿಎಸ್ MBBS ವೈದ್ಯರಷ್ಟೇ ಮುಖ್ಯವಲ್ಲ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಈ ತಾಂತ್ರಿಕ ತಜ್ಞರ ಪಾತ್ರವೂ ಅಷ್ಟೇ ದೊಡ್ಡದಿದೆ.
ನೀಟ್ NEET ಪಾಸು ಮಾಡದಿದ್ದರೂ ಆರೋಗ್ಯ ಕ್ಷೇತ್ರದಲ್ಲಿ ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ Allied Health Science ಕೋರ್ಸ್‌ಗಳನ್ನು ಮಾಡುವ ಮೂಲಕ ಅತ್ಯುತ್ತಮ ವೇತನ ಹಾಗೂ ಗೌರವಾನ್ವಿತ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.
ಯಾವ ಕೋರ್ಸ್‌ಗಳಿಗೆ ಆರಂಭದಲ್ಲಿ ಹೆಚ್ಚಿನ ಬೇಡಿಕೆ ಮತ್ತು ವೇತನವಿದೆ? ಎಂದು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಲೇಖನ ಪೂರ್ಣ ಓದಿ...
#ಬಿ_ಎಸ್ಸಿ_ಎಟಿ_ಮತ್ತು_ಒಟಿ (Anaesthesia & OT): ಶಸ್ತ್ರಚಿಕಿತ್ಸೆಗಳು ನಿರಂತರವಾಗಿ ನಡೆಯುವುದರಿಂದ ಇವರಿಗೆ ಬೇಡಿಕೆ ಸದಾ ಇರುತ್ತದೆ.
#ಬಿ_ಎಸ್ಸಿ_ಬಿಎಂಐಟಿ (Medical Imaging - CT/MRI): ದೊಡ್ಡ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ತಜ್ಞರಿಗೆ ಉತ್ತಮ ಸಂಬಳ ಸಿಗುತ್ತದೆ.
#ಬಿ_ಎಸ್ಸಿ_ಕಾರ್ಡಿಯಾಕ್_ಕೇರ್ (Cardiac Care): ಹೃದಯ ಸಂಬಂಧಿ ಆಸ್ಪತ್ರೆಗಳಲ್ಲಿ ಕ್ಯಾಥ್ ಲ್ಯಾಬ್ ತಜ್ಞರಿಗೆ ಉತ್ತಮ ಗೌರವ ಮತ್ತು ವೇತನವಿರುತ್ತದೆ.
#ಬಿ_ಎಸ್ಪಿ_ಆಪ್ಟೋಮೆಟ್ರಿ (BSC Optometry)
ಈ ಮೇಲಿನ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿದಾಗ ಆರಂಭದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಆಸ್ಪತ್ರೆಯ ಆಧಾರದ ಮೇಲೆ ತಿಂಗಳಿಗೆ ₹15,000 ರಿಂದ ₹30,000 ವರೆಗೆ ಸಂಬಳ ಸಿಗಬಹುದು.
ಅನುಭವದ ನಂತರ 2 ರಿಂದ 5 ವರ್ಷಗಳು ನೀವು ಕೆಲಸದಲ್ಲಿ ನಿಪುಣರಾದಂತೆ ವಿಶೇಷವಾಗಿ CT/MRI ಸ್ಕ್ಯಾನ್ ಮಾಡುವುದು, ಕ್ಯಾಥ್ ಲ್ಯಾಬ್ ನಿರ್ವಹಣೆ ಅಥವಾ ಆಪರೇಷನ್ ಥಿಯೇಟರ್ ನಿರ್ವಹಣೆ ನಿಮ್ಮ ಸಂಬಳ ತಿಂಗಳಿಗೆ ₹40,000 ರಿಂದ ₹70,000 ಅಥವಾ ಅದಕ್ಕಿಂತ ಹೆಚ್ಚು ಆಗಬಹುದು.
ಹೆಚ್ಚು ವೇತನ ಪಡೆಯಲು ಇರುವ ಪ್ರಮುಖ ಮಾರ್ಗಗಳು
ನೀವು ಈ ಕ್ಷೇತ್ರದಲ್ಲಿ ಗರಿಷ್ಠ ವೇತನ ಗಳಿಸಬೇಕೆಂದರೆ ಈ ಕೆಳಗಿನ ವಿಷಯಗಳ ಕಡೆ ಗಮನ ಹರಿಸಬೇಕು.
ಸಣ್ಣ ಕ್ಲಿನಿಕ್‌ಗಳಿಗಿಂತ ಮಣಿಪಾಲ್, ಫಾರ್ಟಿಸ್, ನಾರಾಯಣ ಹೆಲ್ತ್, ಅಪೋಲೋದಂತಹ ದೊಡ್ಡ ಆಸ್ಪತ್ರೆಗಳಲ್ಲಿ ವೇತನ ಮತ್ತು ಸೌಲಭ್ಯಗಳು ಹೆಚ್ಚಿರುತ್ತವೆ.
ವಿಶೇಷವಾಗಿ ಬಿ.ಎಸ್ಸಿ ಆಪ್ಟೋಮೆಟ್ರಿ ಮಾಡಿದರೆ, ನೀವೇ ಸ್ವಂತವಾಗಿ ಕಣ್ಣಿನ ತಪಾಸಣೆ ಮತ್ತು ಕನ್ನಡಕದ ಶೋರೂಮ್ Optical Shop ತೆರೆಯುವ ಮೂಲಕ ಆಸ್ಪತ್ರೆಯ ಸಂಬಳಕ್ಕಿಂತ ಮೂರು-ನಾಲ್ಕು ಪಟ್ಟು ಹೆಚ್ಚು ಸಂಪಾದಿಸಬಹುದು.
ಕೋರ್ಸ್‌ಗಳಿಗೆ ಗಲ್ಫ್ ದೇಶಗಳು ದುಬೈ, ಕತಾರ್, ಸೌದಿ ಯುರೋಪ್, ಯುಕೆ ಮತ್ತು ಕೆನಡಾಗಳಲ್ಲಿ ಭಾರಿ ಬೇಡಿಕೆಯಿದೆ.
ಅಲ್ಲಿ ಭಾರತಕ್ಕಿಂತ 3 ರಿಂದ 5 ಪಟ್ಟು ಹೆಚ್ಚು ವೇತನ ತಿಂಗಳಿಗೆ ₹1.5 ಲಕ್ಷದಿಂದ ₹3 ಲಕ್ಷಕ್ಕೂ ಹೆಚ್ಚು ಸಿಗುತ್ತದೆ.
ಆದರೆ ಕೆಲವು ದೇಶಗಳಿಗೆ ಹೋಗಲು ಅಲ್ಲಿನ ಅರ್ಹತಾ ಪರೀಕ್ಷೆಗಳನ್ನು ಉದಾಹರಣೆಗೆ DHA, HAAD, Prometric ಪಾಸ್ ಮಾಡಬೇಕಾಗುತ್ತದೆ.
ಬಿ.ಎಸ್ಸಿ ನಂತರ ಈ ಕೋರ್ಸ್ ನಲ್ಲಿ ಎಂ.ಎಸ್ಸಿ ಮಾಡುವುದರಿಂದ ನೀವು ಕಾಲೇಜುಗಳಲ್ಲಿ ಪ್ರೊಫೆಸರ್ ಆಗಬಹುದು ಅಥವಾ ಆಸ್ಪತ್ರೆಗಳಲ್ಲಿ ವಿಭಾಗದ ಮುಖ್ಯಸ್ಥರಾಗಿ(Chief Technologist ಭಾರಿ ವೇತನ ಪಡೆಯಬಹುದು.
ಈ ಕ್ಷೇತ್ರದಲ್ಲಿ ನಿಮ್ಮ ಪ್ರಾಯೋಗಿಕ ಕೌಶಲ್ಯ Practical Skill ಅತ್ಯಂತ ಮುಖ್ಯ.
ನೀವು ಯಂತ್ರಗಳನ್ನು ಎಷ್ಟು ನಿಖರವಾಗಿ ನಿರ್ವಹಿಸುತ್ತೀರಿ ಮತ್ತು ಒತ್ತಡದ ಸಂದರ್ಭಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಂಬಳ ನಿರ್ಧಾರವಾಗುತ್ತದೆ.
ಈ ಕೋರ್ಸ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಮೆಂಟ್ ಬಾಕ್ಸ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ.
#neet #ug #mbbs #alliedhealthcareers #healthcare #hospitalityindustry #abroadjobs
#bscnursing #doctorjobs
Comments
Post a Comment