ಭಾಗ_8_ಘಟ್ಟಕ್ಕೆ_ಕರಾವಳಿಗರ_ವಲಸೆ.
ಕರಾವಳಿಗರ ಘಟ್ಟದ ವಲಸೆ ಮಹತ್ತರ ವಲಸೆ ಆಗಿತ್ತು ಎನ್ನಲು ಅನೇಕ ಕಾರಣಗಳಿದೆ ಇದಕ್ಕೆ 1200 ವರ್ಷಗಳ ಕಾಲಗಳ ಇತಿಹಾಸವೂ ಇದೆ.
8ನೇ ಶತಮಾನದಲ್ಲಿ ಶಂಕರಾಚಾರ್ಯರ ಕಾಲದಿಂದ ಆದ್ಯಾತ್ಮಿಕವಾಗಿ ಪ್ರಾರಂಭವಾಗಿ ನಂತರ ಅರಸರ ಆಶ್ರಯ, ಕೃಷಿ ವಿಸ್ತರಣೆ, ರಾಜತಾಂತ್ರಿಕತೆ ಮತ್ತು ಮಸಾಲೆ ಪದಾರ್ಥಗಳ ಶ್ರೀಮಂತ ವ್ಯಾಪಾರಕ್ಕಾಗಿ ವಲಸೆ ನಡೆದಿತ್ತು.
ಗೋಕರ್ಣದ ಭಾಗದಿಂದ ಉಪ್ಪು ಸಾಗಾಣಿಕೆ ಮಾಡುತ್ತಿದ್ದ ಸಾಲ್ಟ್ ರೂಟ್ ಗಳು ಸೇರಿದೆ.
ನಂತರ ಬ್ರಿಟೀಷರ ಕಾಲದಲ್ಲಿ ಕಾಫಿ ಎಸ್ಟೇಟ್ ವಿಸ್ತರಣೆಗಾಗಿ 1850ರ ಹೊತ್ತಿಗೆ ಈ ಋತುಮಾನದ ವಲಸೆ Seasonal Migration ಅತ್ಯಂತ ತೀವ್ರ ರೂಪ ಪಡೆದುಕೊಂಡಿತು ಮತ್ತು 1950 ರವರೆ ಒಂದು ನೂರು ವರ್ಷಗಳ ನಿರಂತರವಾಗಿ ಕೂಲಿ ಕಾರ್ಮಿಕರ ವಲಸೆ ನಡೆಯಿತು.
ನೀವು ಈಗ ಘಟ್ಟವಾಸಿಗಳಾ?...
ನಿಮ್ಮ ಪೂರ್ವಿಕರು ಕರಾವಳಿಯಿಂದ ಬಂದವರಾ?...
ಕರಾವಳಿಯ ಯಾವ ಊರಿಂದ ಬಂದವರು?....
ಯಾವ ಕಾರಣದಿಂದ ಬಂದವರು ?.....
ಎಷ್ಟನೇ ಇಸವಿಯಲ್ಲಿ ಬಂದವರು?...
ನಿಮಗೆ ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಈ ಲೇಖನದಿಂದ ಮಾಹಿತಿ ಸಿಗಬಹುದು ಓದಿ.
ಕರಾವಳಿ ಜನ ಘಟ್ಟಕ್ಕೆ ವಲಸೆ ಹೋಗುವ ಪ್ರಕ್ರಿಯೆಯು ಒಂದೇ ಸಲಕ್ಕೆ ಆರಂಭವಾದದ್ದಲ್ಲ ಇದು ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಕಾರಣಗಳಿಗಾಗಿ ತೀವ್ರತೆ ಪಡೆದುಕೊಂಡಿತು.
ಇತಿಹಾಸದ ಹಿನ್ನೆಲೆಯಲ್ಲಿ ನೋಡುವುದಾದರೆ ಇದನ್ನು ಮೂರು ಪ್ರಮುಖ ಕಾಲಘಟ್ಟಗಳಾಗಿ ವಿಂಗಡಿಸಬಹುದು.
1. #ಆರಂಭಿಕ_ಹಂತ.
18ನೇ ಶತಮಾನದ ಉತ್ತರಾರ್ಧ 1720-1800 ಈ ವಲಸೆಗೆ ಆರಂಭಿಕ ಸಾಂಸ್ಕೃತಿಕ ಮತ್ತು ರಾಜಕೀಯ ಕಾರಣಗಳಿದ್ದವು.
#ಟಿಪ್ಪುಸುಲ್ತಾನ್_ಆಡಳಿತದ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಉಂಟಾದ ರಾಜಕೀಯ ಏರುಪೇರುಗಳು ಮತ್ತು ಯುದ್ಧದ ಭೀತಿಯಿಂದಾಗಿ ಕರಾವಳಿಯ ಕೊಂಕಣಿ ಭಾಷಿಕರು ಮುಖ್ಯವಾಗಿ ಗೌಡ ಸಾರಸ್ವತ ಬ್ರಾಹ್ಮಣರು ಮತ್ತು ಕ್ರಿಶ್ಚಿಯನ್ ಸಮುದಾಯದವರು ಘಟ್ಟದ ಮೇಲಿನ ಚಿಕ್ಕಮಗಳೂರು, ಶಿವಮೊಗ್ಗ.ನಗರ, ಸಾಗರ ಮತ್ತು ಆಯನೂರು ಭಾಗಗಳಿಗೆ ವಲಸೆ ಬಂದು ನೆಲೆಸಲಾರಂಭಿಸಿದರು.
ಇವರು ಆರಂಭದಲ್ಲಿ ವ್ಯಾಪಾರ ಮತ್ತು ಕೃಷಿಯನ್ನು ನೆಚ್ಚಿಕೊಂಡು ಬಂದವರಾಗಿದ್ದರು.
2. #ವ್ಯವಸ್ಥಿತಹಂತ
19ನೇ ಶತಮಾನದ ಮಧ್ಯಭಾಗ 1840-1870 ಇದು ಕರಾವಳಿ ಜನ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಘಟ್ಟ ಹತ್ತಲು ಕಾರಣವಾದ ಪ್ರಮುಖ ಇಸವಿಗಳ ಕಾಲ.
#ಬ್ರಿಟಿಷರ_ಕಾಲ_ಮತ್ತು_ಕಾಫಿತೋಟಗಳ_ಆರಂಭ.
1830-1840ರ ಸುಮಾರಿಗೆ ಬ್ರಿಟಿಷರು ಬಾಬಾಬುಡನ್‌ಗಿರಿ, ಮಡಿಕೇರಿ ಮತ್ತು ಹಾಸನದ ಮಂಜರಾಬಾದ್ ಸಕಲೇಶಪುರ ಭಾಗಗಳಲ್ಲಿ ವ್ಯವಸ್ಥಿತವಾಗಿ ಕಾಫಿ ತೋಟಗಳನ್ನು (Coffee Estates) ಆರಂಭಿಸಿದರು.
ಈ ತೋಟಗಳಿಗೆ ಅಪಾರ ಪ್ರಮಾಣದ ಕೂಲಿ ಕಾರ್ಮಿಕರ ಅಗತ್ಯವಿತ್ತು,ಆಗ ಬ್ರಿಟಿಷ್ ಅಧಿಕಾರಿಗಳು ಮತ್ತು ತೋಟದ ಮಾಲೀಕರು ಕರಾವಳಿಯ ದಕ್ಷಿಣ ಕನ್ನಡದ ದಲಿತರು, ಬಿಲ್ಲವರು, ಬಂಟ ಸಮುದಾಯ, ದೇವಾಡಿಗರು ಮತ್ತು ಮೊಗೇರ ಜಾತಿ ಜನರನ್ನು ಮೇಸ್ತ್ರಿಗಳ ಮೂಲಕ ವ್ಯವಸ್ಥಿತವಾಗಿ ಘಟ್ಟಕ್ಕೆ ಕರೆತರಲು ಆರಂಭಿಸಿದರು.
1850ರ ಹೊತ್ತಿಗೆ ಈ ಋತುಮಾನದ ವಲಸೆ Seasonal Migration ಅತ್ಯಂತ ತೀವ್ರ ರೂಪ ಪಡೆದುಕೊಂಡಿತು.
3. #ತೀವ್ರ_ವಿಸ್ತರಣೆಯ_ಹಂತ.
20ನೇ ಶತಮಾನದ ಆರಂಭ 1900-1950 ಈ ಅವಧಿಯಲ್ಲಿ ವಲಸೆಯ ಸ್ವರೂಪ ಬದಲಾಗಿ ಜನ ಕಾಯಂ ಆಗಿ ನೆಲೆಸಲು ಆರಂಭಿಸಿದರು.
#ಭೂಸುಧಾರಣೆ ಮತ್ತು ಮಲೇರಿಯಾ ನಿಯಂತ್ರಣ.
1910-1920ರ ನಂತರ ಮಲೆನಾಡಿನಲ್ಲಿ ಮಲೇರಿಯಾ ರೋಗಕ್ಕೆ ಔಷಧಗಳು ಲಭ್ಯವಾದವು.
ಅಲ್ಲಿಯವರೆಗೆ ಮಲೆನಾಡೆಂದರೆ ಹೆದರುತ್ತಿದ್ದ ಕರಾವಳಿಯ ಜನ ಆ ನಂತರ ಧೈರ್ಯವಾಗಿ ಬಂದು ನೆಲೆಸಿದರು.
ಕರಾವಳಿಯ ಹವ್ಯಕ ಬ್ರಾಹ್ಮಣರು ಮಲೆನಾಡಿನ ಅಡಿಕೆ ತೋಟಗಳ ನಿರ್ವಹಣೆಗೆ ವಲಸೆ ಬಂದರೆ, ಇನ್ನುಳಿದ ಸಮುದಾಯದವರು ಕಾಫಿ ತೋಟಗಳನ್ನೇ ನಂಬಿ ಬಂದರು.
1940 ಮತ್ತು 1950ರ ದಶಕದ ವೇಳೆಗೆ ಕರಾವಳಿಯ #ಶೆಟ್ಟರು, #ಮುಸ್ಲಿಂ ಬ್ಯಾರಿ ವ್ಯಾಪಾರಿಗಳು ಮಲೆನಾಡಿನ ಬಹುತೇಕ ಪೇಟೆಗಳ ಆರ್ಥಿಕತೆಯನ್ನು ನಿಯಂತ್ರಿಸುವಷ್ಟು ಪ್ರಬಲವಾಗಿ ನೆಲೆನಿಂತರು.
ಕೂಲಿ ಕಾರ್ಮಿಕರಾಗಿ ಕರಾವಳಿ ಜನ ಘಟ್ಟ ಹತ್ತಲು ಆರಂಭಿಸಿದ್ದು 1840-1850ರ ಇಸವಿಯಿಂದ
ಆ ನಂತರದ 1೦೦ ವರ್ಷಗಳ ಕಾಲ 1950ರ ದಶಕದವರೆಗೆ ಈ ವಲಸೆ ನಿರಂತರವಾಗಿ ನಡೆಯುತ್ತಲೇ ಇತ್ತು.
18ನೇ ಶತಮಾನಕ್ಕಿಂತಲೂ ಅಂದರೆ ಕ್ರಿ.ಶ. 1700 ಕ್ಕಿಂತಲೂ ಹಿಂದೆ ಕರಾವಳಿ ಮತ್ತು ಘಟ್ಟದ ನಡುವೆ ಇದ್ದ ಇತಿಹಾಸವನ್ನು ನಾವು ಕೆದಕಿದರೆ ಅಲ್ಲಿ ಬದುಕಿಗಾಗಿ ನಡೆದ ಸಾಮೂಹಿಕ ವಲಸೆಗಿಂತ ಹೆಚ್ಚಾಗಿ ರಾಜಕೀಯ, ಧಾರ್ಮಿಕ ಮತ್ತು ವಾಣಿಜ್ಯ ಸಂಬಂಧಗಳ ಪ್ರಬಲ ಇತಿಹಾಸ ಕಾಣಸಿಗುತ್ತದೆ.
ವಿಜಯನಗರ ಸಾಮ್ರಾಜ್ಯದ ಕಾಲದಿಂದ ಹಿಡಿದು ಕೆಳದಿ ಅರಸರ ಆಳ್ವಿಕೆಯವರೆಗಿನ ಕ್ರಿ.ಶ. 14 ನೇ ಶತಮಾನದಿಂದ 17ನೇ ಶತಮಾನದವರೆಗೆ ಈ ಸುದೀರ್ಘ ಇತಿಹಾಸವನ್ನು ಹೀಗೆ ವಿಂಗಡಿಸಬಹುದು.
1. #ಕೆಳದಿ_ಅರಸರ ಕಾಲದ ರಾಜಕೀಯ ಮತ್ತು ಕೃಷಿ ವಲಸೆ ಕ್ರಿ.ಶ. 16-17ನೇ ಶತಮಾನ
ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಕೆಳದಿ ಮತ್ತು ಇಕ್ಕೇರಿಯನ್ನು ರಾಜಧಾನಿಯನ್ನಾಗಿಸಿಕೊಂಡು ಆಳಿದ ಕೆಳದಿ ನಾಯಕರು ಉದಾಹರಣೆಗೆ ಶಿವಪ್ಪ ನಾಯಕ, ವೆಂಕಟಪ್ಪ ನಾಯಕ ಇಡೀ ಕರಾವಳಿ ತೀರವನ್ನು ಮಂಗಳೂರಿನಿಂದ ಕಾರವಾರದವರೆಗೆ ತಮ್ಮ ಆಳ್ವಿಕೆಗೆ ಒಳಪಡಿಸಿಕೊಂಡಿದ್ದರು.
#ಹವ್ಯಕಬ್ರಾಹ್ಮಣರ_ವಲಸೆ ಕರಾವಳಿಯ ಉತ್ತರ ಕನ್ನಡದ ಅಂಕೋಲಾ, ಕುಮಟಾ ಭಾಗದಲ್ಲಿದ್ದ ಹವ್ಯಕ ಸಮುದಾಯದವರು ತೋಟಗಾರಿಕೆಯಲ್ಲಿ ಅಡಿಕೆ ಮತ್ತು ವಿಳ್ಯದೆಲೆ ಬೇಸಾಯ ನಿಪುಣರಾಗಿದ್ದರು.
ಕೆಳದಿ ಅರಸರು ಮಲೆನಾಡಿನ ದಟ್ಟ ಕಾಡುಗಳನ್ನು ಕಡಿದು ಅಡಿಕೆ ತೋಟಗಳನ್ನು ಅಭಿವೃದ್ಧಿಪಡಿಸಲು ಕರಾವಳಿಯ ಈ ಜನರನ್ನು ಘಟ್ಟದ ಮೇಲಿನ ಸಾಗರ, ಸಿದ್ದಾಪುರ, ಶಿರಸಿ, ತೀರ್ಥಹಳ್ಳಿ ಮತ್ತು ಕೊಪ್ಪ ಭಾಗಗಳಿಗೆ ಆಹ್ವಾನಿಸಿ, ಭೂಮಿ ನೀಡಿ ನೆಲೆಸುವಂತೆ ಮಾಡಿದರು.
#ಕೊಂಕಣಿ_ಮತ್ತು_ಗೌಡಸಾರಸ್ವತ_ಬ್ರಾಹ್ಮಣರು
#ರಾಮಕ್ಷತ್ರಿಯ_ಸಮಾಜದವರ ಮತ್ತು #ಕುಣುಬಿ ಜನರ ಆಗಮನ.
ಕ್ರಿ.ಶ. 1510ರ ಸುಮಾರಿಗೆ ಗೋವಾವನ್ನು ಪೋರ್ಚುಗೀಸರು ವಶಪಡಿಸಿಕೊಂಡಾಗ ಅಲ್ಲಿ ಧಾರ್ಮಿಕ ಕಿರುಕುಳ ತಾಳಲಾರದೆ ಸಾವಿರಾರು ಕೊಂಕಣಿ ಭಾಷಿಕರು ಕರಾವಳಿ ಕರ್ನಾಟಕಕ್ಕೆ ಬಂದರು.
ಅಲ್ಲಿಂದ ಬಂದ ಗೌಡ ಸಾರಸ್ವತರಿಗೆ ಮತ್ತು ರಾಮಕ್ಷತ್ರಿಯರಿಗೆ ಕೆಳದಿ ಅರಸರು ಆಶ್ರಯ ನೀಡಿ ಘಟ್ಟದ ಮೇಲಿನ ತಮ್ಮ ರಾಜಧಾನಿ ಹಾಗೂ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದ ಇಕ್ಕೇರಿ, ಸಾಗರ, ಬಿದನೂರು ನಗರ ಭಾಗಗಳಲ್ಲಿ ನೆಲೆಸಲು ಅನುವು ಮಾಡಿಕೊಟ್ಟರು.
ಇವರು ಅರಮನೆಯ ಆಡಳಿತ ಮತ್ತು ತೆರಿಗೆ ವಸೂಲಾತಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.
2. #ಧಾರ್ಮಿಕ ಮತ್ತು #ಸಾಂಸ್ಕೃತಿಕ ನಂಟು.
ಕ್ರಿ.ಶ. 8ನೇ ಶತಮಾನದಿಂದ
ಘಟ್ಟ ಮತ್ತು ಕರಾವಳಿಯನ್ನು ಜೋಡಿಸುವಲ್ಲಿ ಧರ್ಮ ಮತ್ತು ಆಧ್ಯಾತ್ಮಿಕತೆ ದೊಡ್ಡ ಪಾತ್ರ ವಹಿಸಿದೆ.
#ಆದಿಶಂಕರಾಚಾರ್ಯರು_ಮತ್ತು_ಶೃಂಗೇರಿ.
ಕ್ರಿ.ಶ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಘಟ್ಟದ ಮೇಲಿನ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದರು.
ಈ ಪೀಠದ ಪ್ರಭಾವ ಕರಾವಳಿಯ ಮೇಲೂ ಇತ್ತು, ಕರಾವಳಿಯ ವಿದ್ವಾಂಸರು, ಪೂಜಾರಿಗಳು ಮತ್ತು ಭಕ್ತರು ಶತಶತಮಾನಗಳಿಂದ ಶೃಂಗೇರಿ ಹಾಗೂ ಕರಾವಳಿಯ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳ ನಡುವೆ ಘಾಟಿಯ ದಾರಿಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು.
#ಮಧ್ವಾಚಾರ್ಯರ_ಉಡುಪಿ ಮತ್ತು ಮಠಗಳು •
ಕ್ರಿ.ಶ. 13ನೇ ಶತಮಾನದಲ್ಲಿ ಉಡುಪಿಯಲ್ಲಿ ಶ್ರೀ ಮಧ್ವಾಚಾರ್ಯರು ಅಷ್ಟಮಠಗಳನ್ನು ಸ್ಥಾಪಿಸಿದಾಗ, ಘಟ್ಟದ ಮೇಲಿನ ರಾಜಮನೆತನಗಳು ಮುಖ್ಯವಾಗಿ ವಿಜಯನಗರದ ಅರಸರು ಉಡುಪಿಯ ಮಠಗಳಿಗೆ ಅಪಾರ ಭೂದಾನ ನೀಡಿದ್ದವು.
ಈ ಮಠಗಳ ಆಡಳಿತಾತ್ಮಕ ಮತ್ತು ಧಾರ್ಮಿಕ ಕೆಲಸಗಳಿಗಾಗಿ ಕರಾವಳಿಯ ದೀಕ್ಷಿತರು, ಆಚಾರ್ಯರು ಘಟ್ಟದ ಮೇಲಿನ ಪ್ರದೇಶಗಳಿಗೆ ನಿರಂತರವಾಗಿ ಸಂಚರಿಸುತ್ತಿದ್ದರು.
3.#ಸಾಂಪ್ರದಾಯಿಕ_ಘಾಟಿ_ದಾರಿಗಳು ಮತ್ತು ಪ್ರಾಚೀನ ವಾಣಿಜ್ಯ ಮಾರ್ಗಗಳು.
ಈ ರಸ್ತೆ Trade Routes ಗಳನ್ನು
ಬ್ರಿಟಿಷರು ನಿರ್ಮಿಸುವ ಮುನ್ನವೇ ಕರಾವಳಿ ಮತ್ತು ಮಲೆನಾಡಿನ ನಡುವೆ ದಟ್ಟ ಕಾಡಿನ ಮಧ್ಯೆ ಕಾಲ್ನಡಿಗೆಯ ಮತ್ತು ಕುದುರೆಗಳು ಓಡಾಡುವ ಕಿರಿದಾದ ಘಾಟಿ ದಾರಿಗಳು (Passes) ಇದ್ದವು.
#ಮೆಣಸಿನಕಾಯಿ ಮತ್ತು ಸಾಂಬಾರ ಪದಾರ್ಥಗಳ ವ್ಯಾಪಾರ.
ಮಲೆನಾಡು ಜಗತ್ತಿನಲ್ಲೇ ಅತ್ಯುತ್ತಮ ಮೆಣಸು Black Pepper ಬೆಳೆಯುವ ನಾಡಾಗಿತ್ತು,ಈ ಮೆಣಸನ್ನು ಘಟ್ಟದಿಂದ ಕೆಳಗೆ ಕರಾವಳಿಯ ಬಂದರುಗಳಾದ ಮಂಗಳೂರು, ಬಸ್ರೂರು, ಹೊನ್ನಾವರಗಳಿಗೆ ತರಲಾಗುತ್ತಿತ್ತು ಅಲ್ಲಿಂದ ರೋಮ್, ಅರಬ್ ಮತ್ತು ಐರೋಪ್ಯ ದೇಶಗಳಿಗೆ ರಫ್ತಾಗುತ್ತಿತ್ತು.
#ಉಪ್ಪಿನ_ಸಾಗಣೆ Salt Trade.
ಕರಾವಳಿಯಲ್ಲಿ ತಯಾರಾಗುತ್ತಿದ್ದ ಉಪ್ಪು ಘಟ್ಟದ ಮೇಲಿನ ಜನರಿಗೆ ಅತ್ಯಗತ್ಯವಾಗಿತ್ತು, ಕರಾವಳಿಯ ವರ್ತಕರು ಎತ್ತುಗಳ ಮೇಲೆ ಉಪ್ಪಿನ ಮೂಟೆಗಳನ್ನು ಹೇರಿಕೊಂಡು ಘಟ್ಟದ ಬಳಸು ಮಾರ್ಗಗಳಲ್ಲಿ ಘಟ್ಟ ಹತ್ತುತ್ತಿದ್ದರು.
ಇಂತಹ ಕಾಲು ದಾರಿ ಅಥವ ಹೇರುದಾರಿ (ದನ ಮತ್ತು ಕುದುರೆ ಮೇಲೆ ಸಾಮಗ್ರಿ ಸಾಗಾಣಿಕೆ) ಘಾಟಿಗಳು ಪಶ್ಚಿಮ ಘಟ್ಟದಲ್ಲಿ ಕಾರವಾರದ ಉತ್ತರ ತುದಿಯಿಂದ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಮಂಗಳೂರಿನ ತನಕ ಕರಾವಳಿ ಮತ್ತು ಘಟ್ಟ ಸಂಪರ್ಕಿಸುವ ಅನೇಕ ಒಳದಾರಿ ಘಾಟಿಗಳು ಇದ್ದವು.
ಈ ಮಾರ್ಗದಲ್ಲಿ ಗೋಕರ್ಣ ಭಾಗದಿಂದ ಉಪ್ಪನ್ನು ಈ ರೀತಿ ಸಾಗಾಣಿಕೆ ಮಾಡುತ್ತಿದ್ದ ಇವರನ್ನು ಲಂಬಾಣಿಗಳು ಅಥವಾ ಉಪ್ಪಾರರು ಎಂದು ಕರೆಯಲಾಗುತ್ತಿತ್ತು.
ಆಗುಂಬೆ ಘಾಟ್, ಬಿಸಲೆ ಘಾಟ್ ಮತ್ತು ಹುಲಿಕಲ್ ಘಾಟ್‌ಗಳು ಕೇವಲ ಕಾಡಿನ ದಾರಿಗಳಾಗಿದ್ದರೂ ಆ ಕಾಲದಲ್ಲಿ ಆರ್ಥಿಕತೆಯ ಜೀವರಕ್ತವಾಗಿದ್ದವು.
1850ರ ನಂತರ ನಡೆದ ವಲಸೆ ಬಡತನ ಮತ್ತು ಹಸಿವಿನ ಕಾರಣಕ್ಕಾಗಿ ನಡೆದಿದ್ದಾದರೆ ಅದಕ್ಕೂ ಮುಂಚಿನ 14 ರಿಂದ 17 ನೇ ಶತಮಾನದ ಇತಿಹಾಸವು ಅರಸರ ಆಶ್ರಯ, ಕೃಷಿ ವಿಸ್ತರಣೆ, ರಾಜತಾಂತ್ರಿಕತೆ ಮತ್ತು ಮಸಾಲೆ ಪದಾರ್ಥಗಳ ಶ್ರೀಮಂತ ವ್ಯಾಪಾರಕ್ಕಾಗಿ ನಡೆದಿತ್ತು.
#coastal #immigration #salttrade #shankaracharya
#tippusulthan #blackpepper
#traderoute #sringeri #havyaka #keladi
Comments
Post a Comment