Skip to main content

4021. ನಾಗತಿಹಳ್ಳಿ ಚಂದ್ರಶೇಖರ್ ಮೊದಲ ಸಿನಿಮಾದಲ್ಲಿ ನನ್ನ ಬಸ್ಸು


ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾದಲ್ಲಿ_ನನ್ನ_ಬಸ್ಸು.

  ಅವರ ನಿರ್ಧೇಶನದ ಮೊದಲ ಸಿನಿಮಾ #ಉಂಡೂ_ಹೋದ_ಕೊಂಡೂ_ಹೋದ_ಸಿನಿಮಾದಲ್ಲಿ ಬೆಳ್ಳೂರು - ರಿಪ್ಪನಪೇಟೆ - ಆನಂದಪುರಂ- ಸಾಗರ ಸಂಚಾರದ ನನ್ನ ಗ್ರಾಮಾಂತರ ಸಾರಿಗೆ ಬಸ್ಸು ಪ್ರಶಾಂತ್  ಅವರ ಸಿನಿಮಾದಲ್ಲಿ #ರಾಜದಾನಿ_ಎಕ್ಸ್_ಪ್ರೆಸ್ ಆಗಿದೆ.

  ಎಷ್ಟೋ ವರ್ಷದ ನಂತರ ಚಲನ ಚಿತ್ರ ನಟ ದೊಡ್ಡಣ್ಣ ಜೊತೆ
ಬೆಂಗಳೂರು ಕಾನಿಷ್ಕಾ ಹೋಟೆಲಲ್ಲಿ ಬೇಟಿ ಆದ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಪುನಃ ಈ ಘಟನೆ ನೆನಪಿಸಿಕೊಂಡ ಸವಿನೆನಪುಗಳು ಇಲ್ಲದೆ ಓದಿ.

     90 ರ ದಶಕದಲ್ಲಿ #ರಿಪ್ಪನಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ #ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ #ಅನಂತನಾಗ್ #ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು.

  ಇದು ಸಣ್ಣ ಸಾಹಸವಲ್ಲ!... ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು.

   ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು  ತಮ್ಮ ಊರು ರಿಪ್ಪನಪೇಟೆಯ ಸುತ್ತ ಮುತ್ತಾ ಚಿತ್ರಿಕರಣ ಮಾಡಿದ್ದರು.

   ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡುತ್ತಿತ್ತು ಈ ಗ್ರಾಮಾಂತರ ಸಾರಿಗೆ ಕಲ್ಪನೆ ಆಗಿನ ಜಿಲ್ಲಾಧಿಕಾರಿ ವಿಜಯ ಕುಮಾರ್ ಕನಸಾಗಿತ್ತು. 

   ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ಅವರೇ ಆಯ್ಕೆ ಮಾಡಿದ್ದರು ಅದರ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯoನಲ್ಲಿ ಆಗಿನ ಮುಖ್ಯಮಂತ್ರಿ #ವಿರೇ೦ದ್ರಪಾಟೀಲರಿಂದ ನೆರವೇರಿತ್ತು.

 ಅವತ್ತು ಶಿವಮೊಗ್ಗದ ಇಡೀ ನೆಹರೂ ಸ್ಟೇಡಿಯO ಹಸಿರು ಬಣ್ಣದ ಗ್ರಾಮಾoತರ ಸಾರಿಗೆಯ ನೂರಾರು ಬಸ್ಸುಗಳಿಂದ ಕಂಗೊಳಿಸುತ್ತಿತ್ತು.

 ಮುಖ್ಯಮಂತ್ರಿಗಳಾದ ವಿರೇಂದ್ರ ಪಾಟೀಲರು ಉಪಸ್ಥಿತರಿದ್ದ ಆ ಸಭೆಯಲ್ಲಿ ಪ್ರಸ್ತಾವನಾ ಭಾಷಣ ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದ ನನ್ನದಾಗಿತ್ತು.

    ಉಂಡೂ ಹೋದ ಕೊಂಡೂ ಹೋದ ಸಿನಿಮಾ ನಿರ್ಮಾಪಕ ರಿಪ್ಪನ್ ಪೇಟೆ ಸ್ವಾಮಿಯವರು ತಮ್ಮ ಸಿನಿಮಾದಲ್ಲಿ ನನ್ನ ಬಸ್ಸನ್ನ ಬಳಸಿಕೊಂಡಿದ್ದರು ಆ ಸಿನಿಮಾದಲ್ಲಿ ನನ್ನ ಬಸ್ಸು # ರಾಜಧಾನಿ_ಎಕ್ಸ್_ಪ್ರೆಸ್ ಆಗಿತ್ತು.

   ಇದಾಗಿ ಸುಮಾರು ವಷ೯ದ ನಂತರ ಒಮ್ಮೆ ಬೆಂಗಳೂರಲ್ಲಿ #ಕಾನಿಷ್ಕಾ_ಹೋಟೆಲ್ ನಲ್ಲಿ ಖ್ಯಾತ ಚಿತ್ರ ನಟ #ದೊಡ್ಡಣ್ಣ ನಾಗತೀಹಳ್ಳಿ ಚಂದ್ರಶೇಖರ್ ಗೆ ಪರಿಚಯ ಮಾಡಿ ಕೊಟ್ಟಾಗ ನಾನು ಅವರ ಮೊದಲ ಸಿನಿಮಾದ ನನ್ನ ಬಸ್ಸಿನ ನೆನಪು ಮಾಡಿದೆ.

  ಇದರಿಂದ ತಕ್ಷಣ ನಾಗತೀಹಳ್ಳಿಯವರು ನನ್ನ ಕೈ ಒತ್ತಿ ಹಿಡಿದು "ನಿಮ್ಮ ಬಸ್ ಮೂಲಕ ನನ್ನ ಚಿತ್ರರಂಗದ ಪ್ರಯಾಣದ ಆರಂಭವಾಯಿತು" ಅಂತ ಹೇಳಿದರು.

   ನಂತರ ಆ ಸಿನಿಮಾ ರಿಲೀಸ್ ತನಕ ಅನುಭವಿಸಿದ ಯಾತನೆ ನೆನಪಿಸಿಕೊಂಡರು.

   ಪ್ರಶಾಂತ್ ಹೆಸರಿನ ನನ್ನ ಬಸ್ಸು ನಾಗತಿಹಳ್ಳಿ ಅವರ ಉಂಡೂ ಹೋದ ಕೊಂಡೂ ಹೋದ ಸಿನಿಮಾದಲ್ಲಿ ರಾಜದಾನಿ ಎಕ್ಸ್ ಪ್ರೆಸ್ ಈ ಬಸ್ಸಿನಲ್ಲೇ ಕೌ ಇನ್ಸ್ಪೆಕ್ಟರ್ ಅನಂತನಾಗ್ ಆ ಹಳ್ಳಿಗೆ ಬಂದು ಇಳಿಯುವುದು.

  ಈ ಬಸ್ಸು ಕೇರಳದ ಕಾಸರಗೋಡಿನಿಂದ ತಂದ ನೆನಪಿನ ಕಥೆ ಕೂಡ ನೆನಪಾಯಿತು ಅದು ಇನ್ನೊ೦ದು ದಿನ ಬರೆಯಬೇಕು.

#bus #transportationservices #cinema 
#director #nagathihalli #chandrashekar
#ananthanag #tara #unduhodakonduhoda 
#Doddanna #Ripponpete

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...